ಬೆಂಗಳೂರಿನಲ್ಲಿ 3 ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ 9 ಆರೋಪಿಗಳ ಸೆರೆ

|

Updated on: Apr 28, 2021 | 3:22 PM

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಂದ ಗೂಂಡಾ ಕಾಯ್ದೆ ಜಾರಿಯಾಗಿದ್ದು 3 ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ 9 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಬೆಂಗಳೂರಿನಲ್ಲಿ 3 ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ 9 ಆರೋಪಿಗಳ ಸೆರೆ
ಗೂಂಡಾ ಕಾಯ್ದೆಯಡಿ 9 ಆರೋಪಿಗಳ ಸೆರೆ
Follow us on

ಬೆಂಗಳೂರು: ನಗರದಲ್ಲಿನ ರೌಡಿಗಳ ಅಟ್ಟಹಾಸಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಕಡಿವಾಣ ಹಾಕಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಒಂಭತ್ತು ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಂದ ಗೂಂಡಾ ಕಾಯ್ದೆ ಜಾರಿಯಾಗಿದ್ದು 3 ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ 9 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಮುನಿಕೃಷ್ಣ @ ಮುನೀಚ್, ಸಾಗರ್ @ ಇಟ್ಟಮಡು ಸಾಗರ್, ರಾಜು @ ರಾಜುದೊರೈ, ವಾಸುದೇವ @ ವಾಸು, ಚೇತನ್ @ ಮಾದೇಶ್, ಕೋಟೇಶ್ವರನ್ @ ಕೋಟೆ, ಸ್ಯಾಮ್ಯುಲ್ @ ನಿಖಿಲ್ ಮಂಜುನಾಥ್ @ ಗನ್ ಮಂಜ, ಹರಿರಾಜ ಶೆಟ್ಟಿ @ ಹರೀಶ್ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿರುವ ಆರೋಪಿಗಳು.

ಇವರೆಲ್ಲಾ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ, ಸಾಲು ಸಾಲು ಅಪರಾಧ ಚಟುವಟಿಕೆಗಳಲ್ಲಿ ಭಾಗಿ, ಅಕ್ರಮ ಜೂಜು, ಗಾಂಜಾ ಮಾರಾಟ ಹಾಗೂ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ಗಳಾಗಿರುವ ಆರೋಪಿಗಳು. ಇವರಿಗೆ ಹಲವು ಬಾರಿ ವಾರ್ನಿಂಗ್ ನೀಡಿದ್ದರೂ ಮತ್ತೆ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಡಿಸಿಪಿ ಹಾಗೂ ಆಯಾ ವಿಭಾಗದ ಡಿಸಿಪಿಗಳ ವರದಿ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ರಿಂದ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.

ಗೂಂಡಾ ಕಾಯ್ದೆಯಡಿ 9 ಆರೋಪಿಗಳ ಸೆರೆ

ಇದನ್ನೂ ಓದಿ: ಕಾಮಾಕ್ಷಿಪಾಳ್ಯದಲ್ಲಿ ಮಹಿಳೆ ಅತ್ಯಾಚಾರ-ಕೊಲೆ: ಗೋವಾಕ್ಕೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್