ಗೋವಾ: ರಾಜಧಾನಿ ದೆಹಲಿ ವಾಯುಮಾಲಿನ್ಯದಿಂದ ತುಂಬಿದ್ದು ಗ್ಯಾಸ್ ಚೇಂಬರ್ನಂತಾಗಿದೆ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ಯಾಸ್ ಚೇಂಬರ್ನಂತಿರುವ ರಾಜಧಾನಿಯನ್ನು ತೊರೆದು ಗೋವಾದಲ್ಲಿ ಠಿಕಾಣಿ ಹೂಡಿದ್ದಾರೆ.
ಇದೇ ವೇಳೆ.. ಬೆಳಗಾವಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರ ಮೃಣಾಲ್ ವಿವಾಹವನ್ನು ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಸಹೋದರ ಬಿ.ಕೆ.ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಜೊತೆ ಇಂದು ಗೋವಾದಲ್ಲಿ ನಡೆದಿದೆ. ಈ ಮದುವೆಯಲ್ಲಿ VVIPಯಾಗಿ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಆದ್ರೆ ಇದರಿಂದ ಬೆಳಗಾವಿಯಿಂದ ಬಂದ ಲಕ್ಷ್ಮೀ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.
ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹ ಹಿನ್ನೆಲೆಯಲ್ಲಿ ದಿ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿರುವ ವಿವಾಹದಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಸದ್ಯ ಈಗ ಸೋನಿಯಾ ಗಾಂಧಿ ಅದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ಹೀಗಾಗಿ ದಿ ಲೀಲಾ ಪ್ಯಾಲೇಸ್‌ಗೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪಾಸ್ ಇದ್ದ ವಾಹನಗಳಿಗಷ್ಟೇ ಹೋಟೆಲ್ಗೆ ಎಂಟ್ರಿ ನೀಡಲು ಅವಕಾಶ ನೀಡಲಾಗುತ್ತಿದೆ. ಆದರೆ ಬೆಳಗಾವಿಯಿಂದ ಮದುವೆ ನೋಡಲು ಬಂದವರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.
ಮದುವೆ ನೋಡಲು ಬಂದವರು ಬೀಜ್ನಲ್ಲಿ ಕಾಲಹರಣ:
ಹೆಬ್ಬಾಳ್ಕರ್ ಮಗನ ಮದುವೆಗೆ ಬಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಖಂಡರು, ಜನತೆ ಪೇಚಿಗೆ ಸಿಲುಕಿದ್ದಾರೆ. ಹೋಟೆಲ್ ಒಳಗೆ ಎಂಟ್ರಿ ಇಲ್ಲದ ಕಾರಣ ಬೆಳಗಾವಿ ಜನರಿಗೆ ಮದುವೆ ನೋಡುವ ಭಾಗ್ಯ ಕೈ ತಪ್ಪಿದೆ. ಮದುವೆಗೆಂದು ಬಂದವರು ಅನಿವಾರ್ಯವಾಗಿ ಗೋವಾದ ಬೀಚ್ನಲ್ಲಿ ಸುತ್ತಾಡ್ತಿದ್ದಾರೆ.
ಮದುವೆ ನೋಡಲೆಂದು ಬೆಳಗಾವಿಯಿಂದ ಬಂದಿದ್ದೇವೆ. ಇಲ್ಲಿ ಹೋಟೆಲ್ ಸಿಬ್ಬಂದಿ ನಮ್ಮನ್ನ ಒಳಗೆ ಪ್ರವೇಶಕ್ಕೆ ಅವಕಾಶ ಕೊಡುತ್ತಿಲ್ಲ. ನಮಗೆ ಇದು ಭಾರೀ ನಿರಾಸೆ ಉಂಟಾಗುವಂತೆ ಮಾಡಿದೆ. ಲಕ್ಷ್ಮೀ ಮೇಡಂ ಅವರಿಗೇ ಫೋನ್ ಮಾಡಿದ್ದೇವೆ. ಅವರು ಬಂದು ನಮ್ಮನ್ನ ಒಳಗೆ ಕರೆಸಿಕೊಳ್ಳುವ ನಿರೀಕ್ಷೆ ಇದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥ ಸಮಾರಂಭ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆಗೆ ಕ್ಷಣಗಣನೆ! ಸೋನಿಯಾ ಗಾಂಧಿ ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ
Published On - 11:23 am, Fri, 27 November 20