ಲಾಕ್ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯೊಳಕ್ಕೆ ಯಾವುದೇ ಪ್ರವಾಸಿಗರು ಬರುವಂತಿಲ್ಲ: ಕಟ್ಟೆಚ್ಚರ
ಜುಲೈ 5 ರವರೆಗೆ ಎಲ್ಲಾ ಹೋಂ ಸ್ಟೇ ರೆಸಾರ್ಟ್ ಮೇಲೆ ನಿಗಾ ವಹಿಸಲಾಗುವುದು. ಚೆಕ್ ಪೋಸ್ಟ್ ನಲ್ಲೂ ಕೂಡ ಕೂಲಂಕಷ ತಪಾಸಣೆ ನಡೆಯಲಿದೆ. ಈವರೆಗೆ ಮೂರು ಹೋಮ್ ಸ್ಟೇ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ಈಶ್ವರ್ ಕುಮಾರ್ ಖಂಡೂ ಮಾಹಿತಿ ನೀಡಿದ್ದಾರೆ.
ಕೊಡಗು: ಕೊಡಗು ಜಿಲ್ಲೆಯಲ್ಲಿ ಕೊರೊನಾ ಲಾಕ್ಡೌನ್ ಜಾರಿ ಇರುವ ಹಿನ್ನೆಲೆ ಜುಲೈ 5ರವರೆಗೂ ಪ್ರವಾಸಿಗರು ಜಿಲ್ಲೆಗೆ ಆಗಮಿಸದಂತೆ ಕಟ್ಟೆಚ್ಚರ ವಹಿಸಲಾಗುವುದು. ಯಾವುದೇ ಪ್ರವಾಸಿಗರು ಜಿಲ್ಲೆಯೊಳಕ್ಕೆ ಬರುವಂತಿಲ್ಲ ಎಂದು ಕೊಡಗು ಉಪ ವಿಭಾಗಾಧಿಕಾರಿ ಈಶ್ವರ್ ಖಂಡೂ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಲಾಕ್ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೋಮ್ ಸ್ಟೇ, ರೆಸಾರ್ಟ್ ಮಾಲೀಕರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜುಲೈ 5 ರವರೆಗೆ ಎಲ್ಲಾ ಹೋಂ ಸ್ಟೇ ರೆಸಾರ್ಟ್ ಮೇಲೆ ನಿಗಾ ವಹಿಸಲಾಗುವುದು. ಚೆಕ್ ಪೋಸ್ಟ್ ನಲ್ಲೂ ಕೂಡ ಕೂಲಂಕಷ ತಪಾಸಣೆ ನಡೆಯಲಿದೆ. ಈವರೆಗೆ ಮೂರು ಹೋಮ್ ಸ್ಟೇ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ಈಶ್ವರ್ ಕುಮಾರ್ ಖಂಡೂ (Assistant Commissioner Eshwar Kumar Khandu ) ಮಾಹಿತಿ ನೀಡಿದ್ದಾರೆ.
(No entry in to kodagu district due to covid lockdown says Assistant Commissioner Eshwar Kumar Khandu)
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ
Published On - 4:55 pm, Wed, 30 June 21