ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ; ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರದಿಂದ ವಿವಿಧ ಕ್ರಮ: ಆರ್ ಅಶೋಕ್

ಅಪೌಷ್ಟಿಕ‌ ಮಕ್ಕಳಿಗೆ ಫುಡ್ ಕಿಟ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮಿಲ್ಕ್ ಪೌಡರ್, ಬಾದಾಮಿ, ಮಲ್ಟಿ ವಿಟಮಿನ್ ಸಿರಪ್ ಹಾಗು ಮಕ್ಕಳ ಮಾಸ್ಕ್ ಹೊಂದಿದ‌ ಕಿಟ್ ನೀಡಬೇಕು. ರಾಜ್ಯಾದ್ಯಂತ ಅಪೌಷ್ಟಿಕ‌ ಮಕ್ಕಳಿಗೆ ಫುಡ್‌ಕಿಟ್ ನೀಡಲು ಆದೇಶ ನೀಡುತ್ತೇವೆ.

ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ; ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರದಿಂದ ವಿವಿಧ ಕ್ರಮ: ಆರ್ ಅಶೋಕ್
ಆರ್. ಅಶೋಕ್
TV9kannada Web Team

| Edited By: ganapathi bhat

Jun 30, 2021 | 5:29 PM

ಹಾಸನ: ಜಿಲ್ಲೆಯಲ್ಲಿ ಕೊವಿಡ್ ಮೂರನೆ ಅಲೆ ತಡೆಗಟ್ಟುವ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಕಂದಾಯ ಸಚಿವ ಆರ್ ಅಶೋಕ್‌ ಮಾತನಾಡಿದ್ದಾರೆ. 14 ಕೋಟಿ ಹಣವನ್ನು ಕೊವಿಡ್​ಗೆ ಸಂಬಂಧಿಸಿ ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿದ್ದೇವೆ. ಪ್ರತೀ ತಾಲ್ಲೂಕಿನಲ್ಲಿ ಒಂದೊಂದು ಕೊವಿಡ್ ಸೆಂಟರ್ ಮುಂದುವರೆಸಲು ಹೇಳಿದ್ದೇನೆ. ಜಿಲ್ಲೆಗೆ ಬರುತ್ತಿರೊ ವ್ಯಾಕ್ಸಿನ್ ಹೆಚ್ಚಳ ಮಾಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಕೊವಿಡ್ ಪಾಸಿಟಿವಿಟಿ ದರ 18 ರಿಂದ 5.28 ಕ್ಕೆ ಇಳಿದಿರೋದು ಒಳ್ಳೆಯ ವಿಚಾರವಾಗಿದೆ. ಕೊರೊನಾದಿಂದ‌‌ ಮೃತಪಟ್ಟವರ ಸಾವಿನ ಕಾರಣ ಪತ್ತೆ ಮಾಡಲು ಸೂಚನೆ ನೀಡಿದ್ದೇನೆ. ಮೃತರ‌ ಮನೆಗೆ ತೆರಳಿ ಸಾವಿನ ಕಾರಣ ಪತ್ತೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪಾಸಿಟಿವ್ ರೇಟ್ ಕಡಿಮೆ ಆಗಲು ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಕಾರಣ ಎಂದು ಅಶೋಕ್ ಹೇಳಿದ್ದಾರೆ.

ಮಕ್ಕಳಿಗೆ ಪೌಷ್ಠಿಕ ಆಹಾರ ಮೂರನೆ ಅಲೆ ತಡೆಯುವಿಕೆ ತಯಾರಿಗೆ ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ ಕಾರ್ಯಕ್ರಮ ನಡೆಸುತ್ತೇವೆ. ಅಪೌಷ್ಟಿಕತೆಯಿಂದ ಬಳಲುತ್ತಿರೊ‌ ಮಕ್ಕಳನ್ನು ಸದೃಢ ಮಾಡಲು ವಿಶಿಷ್ಟ ಗುಣಮಟ್ಟದ ಫುಡ್ ನೀಡಲು ರಾಜ್ಯಾದ್ಯಂತ ಕ್ರಮ ವಹಿಸುತ್ತೇವೆ. ಜಿಲ್ಲಾಧಿಕಾರಿಗಳು, ಎಸ್.ಡಿ.ಆರ್.ಎಫ್ ಹಣದಿಂದ ಅಪೌಷ್ಟಿಕ‌ ಮಕ್ಕಳಿಗೆ ಫುಡ್ ಕಿಟ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮಿಲ್ಕ್ ಪೌಡರ್, ಬಾದಾಮಿ, ಮಲ್ಟಿ ವಿಟಮಿನ್ ಸಿರಪ್ ಹಾಗು ಮಕ್ಕಳ ಮಾಸ್ಕ್ ಹೊಂದಿದ‌ ಕಿಟ್ ನೀಡಬೇಕು. ರಾಜ್ಯಾದ್ಯಂತ ಅಪೌಷ್ಟಿಕ‌ ಮಕ್ಕಳಿಗೆ ಫುಡ್‌ಕಿಟ್ ನೀಡಲು ಆದೇಶ ನೀಡುತ್ತೇವೆ ಎಂದು ಹಾಸನದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಹತ್ತು ದಿನದೊಳಗೆ ವೈದ್ಯರಿಗೆ ತರಬೇತಿ ನೀಡಬೇಕು. ಈ ಬಗ್ಗೆ ತಜ್ಞ ಮಕ್ಕಳ ವೈದ್ಯರಿಂದ ಇತರೆ ವೈದ್ಯರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾಸನ‌ ಜಿಲ್ಲೆಗೆ ಮಕ್ಕಳಿಗೆ 18 ವೆಂಟಿಲೇಟರ್ ಖರೀದಿಗೆ 2.3 ಕೋಟಿ‌ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರತಿ ಗ್ರಾಮಕ್ಕೆ ಒಂದು ಸ್ಮಶಾನ- ಡಿಸಿಗಳ ಖಾತೆಯಲ್ಲಿ ಹಣ ಇದೆ ಪ್ರತಿ ಗ್ರಾಮಕ್ಕೆ ಒಂದು ಸ್ಮಶಾನ ಮಾಡಲು ಕ್ರಮಕ್ಕೆ‌ ಡಿಸಿಗಳಿಗೆ ಸೂಚನೆ ನೀಡಿದ್ದೇವೆ. ಸರ್ಕಾರಿ‌ ಭೂಮಿ‌‌ ಇಲ್ಲದಿದ್ದರೆ ಭೂಮಿ ಖರೀದಿ‌ಮಾಡಿ‌ ಸ್ಮಶಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ವಿಪಕ್ಷಗಳು ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಡಿಸಿಗಳ ಖಾತೆಯಲ್ಲಿ 900 ಕೋಟಿ ಹಣ ಇದೆ. ಹಾಸನ ಡಿಸಿ ಖಾತೆಯಲ್ಲಿ ಇನ್ನೂ 34.35 ಕೋಟಿ ಹಣ ಇದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರದಿಂದ ಹೆಚ್ಚಿನ ನೆರವು ಬರುತ್ತಿದೆ. ಹಿಂದೆ ಕಾಂಗ್ರೆಸ್ ಇದ್ದಾಗ ನೀಡುತ್ತಿದ್ದ ಅನುದಾನಕ್ಕಿಂತ ಡಬಲ್ ಅನುದಾನ ಬಂದಿದೆ. ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರ ಮನೆ ಸಕ್ರಮಕ್ಕೆ ಕ್ರಮ ಕೈಗೊಳ್ಳುತ್ತೇವೆ. 2022ರ ವರೆಗೆ ಹೊಸದಾಗಿ ಅರ್ಜಿಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ರಾಜ್ಯದಲ್ಲಿ ಡಿಸೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಎರಡು ಡೋಸ್ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಮೂರನೆ ಅಲೆ ತಡೆಯಲು ಮುಂಜಾಗ್ರತೆ ವಹಿಸಲಾಗುತ್ತದೆ. ಯಡಿಯೂರಪ್ಪ ನಮ್ಮ ನಾಯಕರು ಅವರ ನೇತೃತ್ವದಲ್ಲೇ ಮುಂದಿನ ಎರಡು ವರ್ಷ ಸರ್ಕಾರ ನಡೆಸುತ್ತೇವೆ ಎಂದು ಹಾಸನದಲ್ಲಿ ಸಭೆ ಬಳಿಕ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಬಿಜೆಪಿ- ಜೆಡಿಎಸ್ ಶಾಸಕರ ಜಟಾಪಟಿ; ಹಾಸನದಲ್ಲಿ ಸಚಿವರ ಮುಂದೆ ಮಾತಿನ ಚಕಮಕಿ

ನಾನು ಜೈಲಿಗೆ ಹೋಗಿ ಬಂದ ಮೇಲೆ ನನ್ನ ತಂದೆ ತಾಯಿ ನನ್ನನ್ನು ಮನೆಗೆ ಸೇರಿಸಲಿಲ್ಲ: ‘ಆ ದಿನಗಳ‘ ಅನುಭವ ಬಿಚ್ಚಿಟ್ಟ ಸಚಿವ ಆರ್ ಅಶೋಕ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada