ಮಾಸ್ಕ್​ ಧರಿಸದ ದಂಪತಿಗೆ ದಂಡ, ನನ್ನ ಹೆಂಡತಿಯನ್ನು ತಡೆದಿದ್ದು ಯಾಕೆಂದ ಗಂಡ! ವಿಡಿಯೋ ವೈರಲ್

| Updated By: ಸಾಧು ಶ್ರೀನಾಥ್​

Updated on: Mar 19, 2021 | 2:44 PM

ಮಾಸ್ಕ್​ ಧರಿಸದ ಮಹಿಳೆಯನ್ನು ಡಿಸಿ ಹಾಗೂ ತಹಶೀಲ್ದಾರರು ತಡೆದಿದ್ದಕ್ಕಾಗಿ ದಂಪತಿ ಜಗಳವಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಾಸ್ಕ್​ ಧರಿಸದ ದಂಪತಿಗೆ ದಂಡ, ನನ್ನ ಹೆಂಡತಿಯನ್ನು ತಡೆದಿದ್ದು ಯಾಕೆಂದ ಗಂಡ! ವಿಡಿಯೋ ವೈರಲ್
ಮಾಸ್ಕ್​ ಧರಿಸದ ಮಹಿಳೆಯನ್ನು ಪ್ರಶ್ನಿಸಿದ್ದಕ್ಕಾಗಿ ಜಗಳವಾಡಿದ ದಂಪತಿ
Follow us on

ಹುಬ್ಬಳ್ಳಿ: ಮಾಸ್ಕ್​ ಧರಿಸದ ಮಹಿಳೆಯನ್ನು ಡಿಸಿ ಹಾಗೂ ತಹಶೀಲ್ದಾರರು ತಡೆದಿದ್ದಕ್ಕಾಗಿ ದಂಡ ಕಟ್ಟೋದಿಲ್ಲ. ನಾನು ಯಾರು ಗೊತ್ತಾ? ಎಂದು ಮಹಿಳೆ ಪತಿ ಜಗಳವಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಘಟನೆ ನಿನ್ನೆ ಸಂಜೆ (ಮಾರ್ಚ್​ 18) ಜಿಲ್ಲೆಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿ ನಡೆದಿದೆ.

ಮಾಸ್ಕ್​ ಹಾಕದಿರುವುದಕ್ಕೆ ದಂಡ ಕಟ್ಟುವುದಿಲ್ಲ. ನನ್ನ ಹೆಂಡತಿಯನ್ನು ತಡೆದಿದ್ದು ಯಾಕೆ? ನಾನು ದಲಿತ ಮುಖಂಡ ಇದೀನಿ ಗೊತ್ತಾಯಿತಾ? ಎಂದು ಮಹಿಳೆಯ ಪತಿ ಪ್ರಶ್ನಿಸಿದ್ದಾರೆ. ಮಾಸ್ಕ್​ ಧರಿಸದಿದ್ದಕ್ಕೆ ದಂಪತಿಗೆ ಪಾಲಿಕೆ ಸಿಬ್ಬಂದಿ ದಂಡ ವಿಧಿಸಿದ್ದಾರೆ. ನಾವು ದಂಡ ಕಟ್ಟುವುದಿಲ್ಲ. 250 ರೂಪಾಯಿ ಹಣ ಕಟ್ಟಲು ನನ್ನ ಬಳಿ ಹಣ ಇಲ್ಲ ಎಂದು ತಕರಾರು ಮಾಡಿದ್ದಾರೆ. ಡಿಸಿ ಇದ್ದರೆ ನಾನು ಏನು ಮಾಡಲಿ? ನಾನು ದಂಡ ಕಟ್ಟುವುದಿಲ್ಲ. ನನ್ನ ಹೆಂಡತಿಯನ್ನು ಹ್ಯಾಂಗ್ ನಿಲ್ಲಿಸಿದ್ರಿ? ಹೌದು ಮಾಸ್ಕ್ ಬಿಟ್ಟು ಬಂದಿದೀವಿ. ನಾನು ದಲಿತ ಮುಖಂಡ ಇದೀನ ಗೊತ್ತಾಯಿತಾ? ಎಂದು ತಹಶಿಲ್ದಾರರಿಗೆ ಮಹಿಳೆಯ ಪತಿ ಧಮ್ಕಿ ಹಾಕಿರುವ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: Rashmika Mandanna: ಕೆಸರು ಗದ್ದೆಯಲ್ಲಿ ಕೃಷಿ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ವೈರಲ್​

ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​