ಕೃಷ್ಣ ಬೈರೇಗೌಡ ಭೇಟಿ ವೇಳೆ ಕರ್ತವ್ಯಕ್ಕೆ ಗೈರು, ಓರ್ವ ಅಧಿಕಾರಿ ಸಸ್ಪೆಂಡ್, 11 ಜನರಿಗೆ ನೋಟಿಸ್
ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು (ಅ.30) ಬೆಳಗ್ಗೆ ಕೆ.ಆರ್.ಪುರಂ ತಾಲೂಕು ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್ ಅವರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು, ಅಕ್ಟೋಬರ್ 30: ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಕಚೇರಿಗೆ ಭೇಟಿ ನೀಡಿದ್ದ ವೇಳೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ (Tehsildar) ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್ ಅವರನ್ನು ಅಮಾನತು ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು (ಅ.30) ಬೆಳಗ್ಗೆ ಕೆ.ಆರ್.ಪುರಂ ತಾಲೂಕು ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವ ಕೃಷ್ಣ ಭೈರೇಗೌಡ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದ್ದರು. ಈ ವೇಳೆ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್ ಕಚೇರಿಗೆ ಗೈರು ಹಾಜರಾದ ವಿಚಾರ ತಿಳಿದು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲದೇ, ಕಚೇರಿಯ 11 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ವಿಶೇಷ ತಹಶೀಲ್ದಾರ್ ಎಸ್.ಆರ್.ಮಹೇಶ್, ಗ್ರೇಡ್-2 ತಹಶೀಲ್ದಾರ್ ಆರ್.ಶೇಖರ್, ತಹಶೀಲ್ದಾರ್ ಬಿ.ಎನ್.ರಾಜೀವ್, ಶಿರಸ್ತೆದಾರ ಅತೀಕ್ ಜಮೀಲ್ ಖಾನ್, ಶಿರಸ್ತೆದಾರ ಸಿ.ಚಂದ್ರಮ್ಮ, ಎಫ್ಡಿಎಗಳಾದ ಕೆ.ಪ್ರವೀಣ್, ಎ.ಜ್ಞಾನಶೇಖರ್, ಎಸ್ಡಿಎಗಳಾದ ಎನ್.ರಕ್ಷಿತ್, ಡಿ.ಬಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀದೇವಿ, ಗ್ರೂಪ್ ಡಿ ಸಿಬ್ಬಂದಿ ಎನ್.ಆರ್.ಮಂಜುನಾಥ್ ಅವರಿಗೆ ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಶೋಕಾಸ್ ನೋಟಿಸ್ ನೀಡಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 pm, Wed, 30 October 24