AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಾದ್ಯಂತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಬೇಕು: ಡಿಕೆ ಶಿವಕುಮಾರ್​ ಸೂಚನೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಶನಿವಾರ ರಾಮನಗರದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು. ಈ ವೇಳೆ ಹಲವು ಅಹವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರು ಜನರಿಗೆ ಹಲವು ಭರವಸೆಗಳನ್ನು ನೀಡಿದರು. ಜೊತೆಗೆ ಅಧಿಕಾರಿಗಳ ಕಿವಿ ಹಿಂಡಿದರು.

ರಾಜ್ಯಾದ್ಯಂತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಬೇಕು: ಡಿಕೆ ಶಿವಕುಮಾರ್​ ಸೂಚನೆ
ಡಿಕೆ ಶಿವಕುಮಾರ್
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ವಿವೇಕ ಬಿರಾದಾರ|

Updated on: Dec 02, 2023 | 1:33 PM

Share

ರಾಮನಗರ ಡಿ.02: ಗ್ರಾಮ ಪಂಚಾಯಿತಿ (Gram Panchayat) ಮಟ್ಟದಲ್ಲಿ ಸಭೆ ನಡೆಸಲು ರಾಜ್ಯಾದ್ಯಂತ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈ ಬಗ್ಗೆ ರಾಜ್ಯವ್ಯಾಪಿ ಆದೇಶ ಜಾರಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಹೇಳಿದರು. ಕನಕಪುರದ ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು ಬೆಂಗಳೂರು (Bengaluru) ಸುತ್ತಮುತ್ತಲಿನ ಜಮೀನಿನ ವಿಚಾರವಾಗಿ ಅಧಿಕಾರಿಗಳು ನನ್ನನ್ನು ಕೂಡ ಮಿಸ್​ಯೂಸ್ ಮಾಡಿಕೊಳ್ಳುತ್ತಿದ್ದಾರೆ. ಏನೇನೋ‌ ಮಾಡಿಬಿಟ್ಟು, ಆಮೇಲೆ ನಮ್ ತಲೆ ಮೇಲೆ ಬರುತ್ತೆ. ಅದಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುತ್ತೇನೆ ಎಂದು ಡಿಕೆ ಶಿವಕುಮಾರ್ (DK Shivakumar)​ ಭರವಸೆ ನೀಡಿದರು. “ಸರ್ಕಾರದಲ್ಲಿ ಭಷ್ಟ್ರ ಅಧಿಕಾರಿಗಳು ತುಂಬಿದ್ದಾರೆ ಅಂತ ಉಪಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.”

ಬೆಂಗಳೂರು ಅಧಿಕಾರಿಗಳು ಸುಮ್ಮನೆ ಟೆನ್ಷನ್ ಕೊಡುತ್ತಾರೆ. ನನಗೂ ಕೊಡುತ್ತಾರೆ. ಚುನಾವಣೆ ಸಮಯದಲ್ಲಿ ಯಾರೂ ಬರಲ್ಲ. ಕಳೆದ 30 ವರ್ಷದಿಂದ ನಾನು ನೋಡುತ್ತಿದ್ದೇನೆ. ನಿಮ್ಮ ಕಷ್ಟಕ್ಕೆ ಯಾರೂ ಬರಲ್ಲ, ನಿಮ್ಮ ಭೂಮಿಗಳನ್ನು ದಯವಿಟ್ಟು ಮಾರಬೇಡಿ. ನಿಮ್ಮ ಭೂಮಿಗೆ ಬೆಲೆ ಬರುತ್ತೆ. ವಿರೋಧ ಮಾಡುವವರು ಮಾಡಲಿ, ಸೂಕ್ತ ಕಾಲ ಬರುತ್ತೆ. ಅದನ್ನು ನಾನು ‌ಮಾಡೇ ಮಾಡುತ್ತೇನೆ,‌ ಮುಖ್ಯಮಂತ್ರಿಗಳ ಜೊತೆ ಕೂತು ಮಾತಾಡುತ್ತೇನೆ ಎಂದು ಹೇಳುವ ಮೂಲಕ ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂಬ ತಮ್ಮ ನಿಲುವಿಗೆ ಡಿಕೆ ಶಿವಕುಮಾರ್​ ಮತ್ತಷ್ಟು ಒತ್ತು ನೀಡಿದರು.

ಯಾವುದೇ‌ ಕಾರಣಕ್ಕೂ ಲಂಚ‌ ಕೊಡಬಾರಗದು. ಯಾವುದೇ ಕಾರ್ಯಕ್ರಮಕ್ಕೂ 10 ರೂ. ಲಂಚ ಕೊಡಬಾರದು. ಕಚೇರಿ ಮುಂಭಾಗದಲ್ಲಿ ಫೋನ್ ನಂಬರ್ ಹಾಕುತ್ತೇನೆ. ಯಾರಾದರೂ ಲಂಚ ಕೇಳಿದರೇ, ನನಗೆ ಕರೆ ಮಾಡಿ. ಸದ್ಯಕ್ಕೇನು ಅಂತ ಸಮಸ್ಯೆ ಇಲ್ಲ. ಈ ಹಿಂದಿನ ತಹಶಿಲ್ದಾರ್ ಇದ್ದಾಗ ಆ ಸಮಸ್ಯೆ ಇತ್ತು ಎಂದು ಹೇಳಿದರು.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ; ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್

ಮೊದಲು ನಾನು ಹಳ್ಳಿ ಹಳ್ಳಿಗೆ ಹೋಗಿ ಗ್ರಾಮಸಭೆ ಮಾಡುತ್ತಿದ್ದೆ. ರಾಜಕಾರಣದ ಒತ್ತಡದಿಂದ ಗ್ರಾಮಸಭೆ ಮಾಡಲು ಆಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಜನಸ್ಪಂದನ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದೇನೆ. ಜನರು ಆರು ತಿಂಗಳಿನಿಂದ ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡುತ್ತಿದ್ದರು. ಮುಂದಿನ ಜನವರಿಯಿಂದ ಸಮಯ ಕೊಡುತ್ತೇನೆ. ನಿಮ್ಮ ಅರ್ಜಿಗೂ ಉತ್ತರ ಬರುತ್ತೆ, ನನಗೂ ದಾಖಲೆ ಇರುತ್ತದೆ. ಎಲ್ಲಾ ಕೇಂದ್ರಗಳಲ್ಲೂ ಅಧಿಕಾರಿಗಳು ಇರಬೇಕೆಂದು ಆದೇಶಿಸಿದ್ದೇನೆ ಎಂದು ತಿಳಿಸಿದರು.

ನಿಮ್ಮ ಜಮೀನಿನ ದಾಖಲೆಗಳು ನಿಮ್ಮ ಮೊಬೈಲ್​ಗೆ ಬರವ ರೀತಿ ಮಾಡಿದ್ದೇವೆ. ದಿಶಾ ಆ್ಯಪ್ ಓಪನ್ ಮಾಡಿದರೇ, ಎಲ್ಲಾ ಮಾಹಿತಿ ಸಿಗುವ ಹಾಗೆ ಮಾಡಲಿದ್ದೇವೆ. ದಾಖಲೆ ಬರುವ ಹಾಗೆ ಎಲ್ಲವನ್ನೂ ಡಿಜಿಟಲೈಜ್ ಮಾಡಲಿದ್ದೇವೆ ಎಂದರು.

ಇನ್ನು ಜನತಾದರ್ಶನದ ವೇಳೆ ಓರ್ವ ಮಹಿಳೆ ನನಗೆ ಎರಡು ಸಾವಿರ ಬರುತ್ತಿಲ್ಲ ಅಂತ ಅಹವಾಲು ಹೇಳಿದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ನೀನು ಸುಳ್ಳು ಹೇಳುತ್ತಿದ್ದೀಯಾ ಅಂತ ಗದರಿ ಮುನ್ನೆಡದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು