Bengaluru: ಕರ್ನಾಟಕದಲ್ಲಿ ‘ಎಣ್ಣೆ’ ದೇಶದಲ್ಲೇ ದುಬಾರಿ; ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯದ ದರ ಎಷ್ಟು ಹೆಚ್ಚಾಗಿದೆ?
ಮದ್ಯ ಸುಂಕಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 20%ದಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದರು. ಕರ್ನಾಟಕವು ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಜುಲೈ 19 ರಂದು ಇದು ಬಜೆಟ್ನಲ್ಲಿ ಅಂಗೀಕಾರವಾಗಿದ್ದು, ಇದೀಗ ಹೊಸ ಬೆಲೆಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ.
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಜೂ.19 ಶುಕ್ರವಾರದಂದು ಮಂಡಿಸಿದ ಬಜೆಟ್ನಲ್ಲಿ ಅನೇಕ ಕ್ಷೇತ್ರಗಳಿಗೆ ಯೋಜನೆ ಹಾಗೂ ಸರಕುಗಳ ಮೇಲೆ ಸುಂಕ ಏರಿಕೆ ಮಾಡಿದ್ದಾರೆ. ಈ ಪೈಕಿ ಮದ್ಯ ಪ್ರೀಯರಿಗೂ ಶಾಕ್ ನೀಡಿತ್ತು. ಇದರಿಂದ ಮದ್ಯ ಪ್ರೀಯರು ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ತೀವ್ರ ಅಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಈಗ ಇರುವ ಮದ್ಯ ಸುಂಕಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 20%ದಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದರು. ಕರ್ನಾಟಕವು ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಜುಲೈ 19 ರ ಬಜೆಟ್ನಲ್ಲಿ ಈ ದರ ಏರಿಕೆ ಬಗ್ಗೆ ಅಂಗೀಕಾರವಾಗಿದ್ದು, ಇದೀಗ ಹೊಸ ಬೆಲೆಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ಕಡಿಮೆ ಬೆಲೆಯ ಟ್ಯಾಗ್ ಹೊಂದಿರುವ ಮದ್ಯದ ಬ್ರ್ಯಾಂಡ್‌ಗಳು ಕರ್ನಾಟಕದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಇನ್ನೂ ಅಗ್ಗ ಎಂದು ಹೇಳಿದ್ದಾರೆ. ಕಚ್ಚಾ ಹಳ್ಳಿಗಾಡಿನ ಮದ್ಯದ (crude country liquor variant) ರೂಪಾಂತರವಾದ ಅರಾಕ್‌ನ ಮಾರಾಟವನ್ನು ಈಗಾಗಲೇ ನಿಷೇಧಿಸಿದೆ. ಆದರೆ, ಕರ್ನಾಟಕದಲ್ಲಿನ ಮದ್ಯದ ಬೆಲೆಯನ್ನು ಇತರ ರಾಜ್ಯಗಳ ಬೆಲೆಯೊಂದಿಗೆ ಹೋಲಿಸಿದಾಗ ಕೆಲವು ಕಡಿಮೆ ಬೆಲೆಯ ಬ್ರ್ಯಾಂಡ್‌ಗಳು ಸಹ ಈಗ ಇಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಸ್ಲ್ಯಾಬ್ (ಒಂದು ದೊಡ್ಡ ಬಾಟಲಿಯ ಲೀಟರ್‌ಗೆ 449 ರೂ.ವರೆಗಿನ ಬ್ಯಾಂಡ್ ಹೊಂದಿರುವ ಕಡಿಮೆ ಸ್ಲ್ಯಾಬ್ಗಳು ) ಹೊರತುಪಡಿಸಿ, ಇತರ ಎಲ್ಲಾ ಬ್ರಾಂಡ್‌ಗಳು ಕರ್ನಾಟಕದಲ್ಲಿ ತುಂಬಾ ದುಬಾರಿಯಾಗಿದೆ. ಇದು ಗ್ರಾಹಕರ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತಿದೆ ಎಂದು ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರ್ಸಾ ಹೇಳಿದರು . 78%ದಷ್ಟು ಜನರು ಕಡಿಮೆ ಬ್ರಾಂಡ್ನ ಬಿಯರ್ಗಳನ್ನು ಖರೀದಿ ಮಾಡಿದರೆ, ಇನ್ನೂ 5%ದಷ್ಟು ಜನ ಉನ್ನತ ಮಟ್ಟದ ಬ್ರಾಂಡ್ನ ಬಿಯರ್ಗಳನ್ನು ಖರೀದಿ ಮಾಡುತ್ತಾರೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಇದೆ ಬ್ರಾಂಡ್ಗೆ 210 ರೂ. ದೆಹಲಿಯಲ್ಲಿ 190ರೂ. ಕರ್ನಾಟಕದಲ್ಲಿ 650mಗೆ 187 ರೂ. ಇದೆ. ಈ ಮೂಲಕ ಬಿಯರ್ ಬೆಲೆ ಏರಿಕೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ.
ಇದನ್ನೂ ಓದಿ: Liquor Price in Karnataka: ಮದ್ಯ ಪ್ರಿಯರಿಗೆ ಬಿಗ್ ಶಾಕ್, ಕರ್ನಾಟಕದಲ್ಲಿ ಅಬಕಾರಿ ತೆರಿಗೆ ಹೆಚ್ಚಳ
ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಇದು ಗ್ರಾಹಕರ ಮೇಲೆ ಒಂದು ಭಾಗದಷ್ಟು ಮಾತ್ರ ಪರಿಣಾಮವನ್ನು ಉಂಟು ಮಾಡಬಹುದು. ಆದರೆ ರಾಜ್ಯದಲ್ಲಿ ಪ್ರೀಮಿಯಂ ಬ್ರಾಂಡ್‌ಗಳು ದುಬಾರಿಯಾಗಿದೆ. ಸ್ಲ್ಯಾಬ್ ಬ್ರಾಂಡ್ಗಳಿಗೆ ಮಾತ್ರ ಕಡಿಮೆಯಾಗಿದೆ, ಆದರೆ ಇದನ್ನು ಮತ್ತೆ ಹೆಚ್ಚು ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬ್ರಾಂಡ್ಗಳ ಆಧಾರದಲ್ಲಿ ಅವುಗಳ ಬೆಲೆಯನ್ನು 18 ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ. ಸಗಟು ವ್ಯಾಪಾರಿಗಳಾದ ಕರ್ನಾಟಕ ಸ್ಟೇಟ್ ಬೆವರೇಜ್ ಕಾರ್ಪೊರೇಷನ್ ಲಿಮಿಟೆಡ್ ( ಕೆಎಸ್‌ಬಿಸಿಎಲ್ ) ಮದ್ಯ ಮಾರಾಟ ಮಾಡುವ ಬೆಲೆಯನ್ನು ಹೆಚ್ಚಿಸಿದೆ. ಟಾಪ್-ಮೋಸ್ಟ್ ಸ್ಲ್ಯಾಬ್ ಪ್ರತಿ ಬಲ್ಕ್ ಲೀಟರ್‌ಗೆ 15,001ರೂ. ಕ್ಕಿಂತ ಹೆಚ್ಚು ಬೆಲೆಯ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಒಂದು ಬಿಯರ್ ಬಾಟಲಿಗೆ 175ರಿಂದ 185ಕ್ಕೆ ಹೆಚ್ಚಿಸಿದೆ. ಇನ್ನೂ 600m ಬಿಯರ್ ಬಾಟಲಿಗೆ 170ರಿಂದ 187ಕ್ಕೆ ಏರಿಕೆ ಮಾಡಿದೆ. ಈ ಕಾರಣಕ್ಕೆ ಬಿಯರ್ ಬೆಲೆ ಏರಿಕೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ, ತಮಿಳುನಾಡು ಮೊದಲು ಸ್ಥಾನ, ದೆಹಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಕರ್ನಾಟಕಕ್ಕೆ ತುಂಬಾ ನಷ್ಟವಾಗಲಿದ್ದು, ಇತರ ರಾಜ್ಯಗಳು ಇದರ ಲಾಭ ಪಡೆಯಬಹುದು, ಕಡಿಮೆ ಬೆಲೆ ಇರುವ ರಾಜ್ಯಗಳತ್ತ ಮುಖ ಮಾಡಬಹುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Tue, 11 July 23