ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್​ನಿಂದ ಗುಣಮುಖ

|

Updated on: May 30, 2021 | 8:13 AM

ಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದಲ್ಲಿ ನೆಲೆಸಿರುವ ಶತಾಯುಷಿ ದಂಪತಿಗಳಿಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ‌‌ ಇತರರಿಗೆ ಮಾದರಿಯಾಗಿದ್ದಾರೆ. ತುಂಬರಗುದ್ದಿ ಗ್ರಾಮದ ಈರಣ್ಣ (103) ಹಾಗೂ ಈರಮ್ಮ (101) ಎಂಬುವವರು ಈ ಕೊರೊನಾ ಸೋಂಕಿನ ಎದುರು ಹೋರಾಡಿ ಗೆದ್ದು ಬಂದಿದ್ದಾರೆ.

ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್​ನಿಂದ ಗುಣಮುಖ
ಈರಣ್ಣಹಾಗೂ ಈರಮ್ಮ
Follow us on

ಬಳ್ಳಾರಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಬಾರಿಯ ಕೊರೊನಾ ಸೋಂಕು ಮಧ್ಯ ವಯಸ್ಕರಿಂದ ಹಿಡಿದು ಎಲ್ಲರನ್ನು ಬಲಿ ಪಡೆದಿದೆ. ಹೀಗಿರುವಾಗಲೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದಲ್ಲಿ ನೆಲೆಸಿರುವ ಶತಾಯುಷಿ ದಂಪತಿಗಳಿಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ‌‌ ಇತರರಿಗೆ ಮಾದರಿಯಾಗಿದ್ದಾರೆ. ತುಂಬರಗುದ್ದಿ ಗ್ರಾಮದ ಈರಣ್ಣ (103) ಹಾಗೂ ಈರಮ್ಮ (101) ಎಂಬುವವರು ಈ ಕೊರೊನಾ ಸೋಂಕಿನ ಎದುರು ಹೋರಾಡಿ ಗೆದ್ದು ಬಂದಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಈ ದಂಪತಿಗಳಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿತ್ತು. ಹೀಗಾಗಿ ದಾವಣಗೆರೆಗೆ ಆರೋಗ್ಯ ತಪಾಸಣೆಗೆ ಹೋಗುವ ಮುನ್ನವೇ ವೈದ್ಯರ ಸಲಹೆ ಮೇರೆಗೆ ಅದೇ ಗ್ರಾಮದಲ್ಲೇ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್ ಬಂದಿತ್ತು. ಕಳೆದ 12 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿರುವ ಶತಾಯುಷಿಗಳು ಇದೀಗ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶತಾಯುಷಿ ದಂಪತಿಗಳ ಜತೆ ಮಗ, ಸೊಸೆ ಹಾಗೂ ಮೊಮ್ಮಗ ಕೂಡ ಇದ್ದು, ಸದ್ಯ ಕೊರೊನಾದಿಂದ ಗೆದ್ದ ಹಿರಿಯ ಜೀವಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ 88 ವರ್ಷದ ವೃದ್ಧೆ
ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು-ನೋವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದೆ. ಕೊರೊನಾ ಸೋಂಕು ಒಮ್ಮೆ ತಗುಲಿದರೆ ಮತ್ತೆ ಗುಣಮುಖರಾಗುವುದು ಬಹಳ ಕಷ್ಟ ಎನ್ನುವ ಮಾತು ಇತ್ತಿಚೇಗೆ ಕೇಳಿ ಬರುತ್ತಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಸನ್ನಿವೇಶವೊಂದು ಎದುರಾಗಿದ್ದು, ಕೊರೊನಾ ಸೋಂಕಿಗೆ ದೃತಿಗೆಡದೆ ಹೋರಾಡಿ ಎಂಬ ಸಂದೇಶ ರವಾನೆಯಾಗಿದೆ. ಇದಕ್ಕೆ ಕಾರಣ 88 ರ ವೃದ್ಧೆಯೊಬ್ಬರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರ ಮೂಲದ ಈ ಅಜ್ಜಿಯ ಹೆಸರು ಹೊನ್ನಮ್ಮ. ಕಳೆದ ಒಂಬತ್ತು ದಿನಗಳ ಹಿಂದೆ ಹೊನ್ನಮ್ಮನವರಿಗೆ ಕೊರೊನಾ ಧೃಡಪಟ್ಟಿತ್ತು. ಮೊದಲೆ 88 ವರ್ಷ ವಯಸ್ಸಾಗಿದ್ದರಿಂದ ಸಹಜವಾಗೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿದಾಗ ಹಿರಿಯ ಜೀವದ ಆಕ್ಸಿಜನ್ ಲೆವಲ್ 85 ಕ್ಕೆ ಬಂದಿತ್ತು. ಆಸ್ಪತ್ರೆಯ ವೈದ್ಯರಾದ ದೀಪಕ‌ ಕಲಾದಾಗಿ ಎರಡೂ ದಿನಗಳ ಕಾಲ ಹೊನ್ನಮ್ಮನವರನ್ನು ವೆಂಟಿಲೆಟರ್​ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಿದ್ದರು.

ಅಜ್ಜಿ ಚಿಕಿತ್ಸೆಗೆ ಸ್ಪಂದಿಸಿ ಇಂದು ಡಿಸ್ಚಾಜ್೯ ಆಗಿದ್ದಾರೆ. ವೈದ್ಯರ ಸತತ ಪ್ರಯತ್ನ ಮತ್ತು ಹೊನ್ನಮ್ಮನವರ ಧೈರ್ಯದಿಂದ 9 ದಿನಗಳ ನಂತರ ಕೊರೊನಾ ನೆಗೆಟಿವ್ ಬಂದಿದೆ. ಸತತ ವೈದ್ಯಕೀಯ ಚಿಕಿತ್ಸೆ ಹಾಗೂ ಇಳಿಯ ವಯಸ್ಸಿನಲ್ಲೂ ಕೂಡಾ ವೃದ್ಧೆ ತೋರಿದ ಆತ್ಮಸ್ಥೈರ್ಯ ಕೊವಿಡ್​ ಅನ್ನು ಸೋಲಿಸುವಂತೆ ಮಾಡಿದೆ‌ ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ದೀಪಕ ಕಲಾದಗಿ ತಿಳಿಸಿದ್ದಾರೆ.

ಇದನ್ನೂ ಓದಿ:

 ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್

ಕೊರೊನಾ ವಿರುದ್ಧ ಹೋರಾಡಿ ಗೆದ್ದ 88 ವರ್ಷದ ವೃದ್ಧೆ; ಹೊನ್ನಮ್ಮನ ಆತ್ಮಸ್ಥೈರ್ಯಕ್ಕೆ ವೈದ್ಯರಿಂದ ಮೆಚ್ಚುಗೆ