ಕಣ್ಣೀರು ಹಾಕಬೇಡಿ.. ಈರುಳ್ಳಿ ದೋಸೆ ಜಸ್ಟ್ 5 ರೂಪಾಯಿ ಹೆಚ್ಚಳವಾಗಿದೆ!

ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್​ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ. ದೋಸೆ ಪ್ರೇಮಿಗಳು ಡಬಲ್ ರೋಸ್ಟ್: ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್​ಗಳಲ್ಲಿ‌ಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ […]

ಕಣ್ಣೀರು ಹಾಕಬೇಡಿ.. ಈರುಳ್ಳಿ ದೋಸೆ ಜಸ್ಟ್  5 ರೂಪಾಯಿ ಹೆಚ್ಚಳವಾಗಿದೆ!
ಸಾಧು ಶ್ರೀನಾಥ್​

Updated on: Nov 29, 2019 | 6:53 PM

ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್​ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ.

ದೋಸೆ ಪ್ರೇಮಿಗಳು ಡಬಲ್ ರೋಸ್ಟ್:
ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್​ಗಳಲ್ಲಿ‌ಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ ಬ್ರೇಕ್ ಬಿದ್ದಿದೆ.

ಕೆ.ಜಿ ಈರುಳ್ಳಿ ₹ 120ಕ್ಕೆ ಏರಿದ ಹಿನ್ನೆಲೆ ಹೋಟೆಲ್​ಗಳಲ್ಲಿ ಇರುಳ್ಳಿ ಬಳಕೆ ಕಡಿಮೆ ಮಾಡಲಾಗುತ್ತಿದೆ. ಇನ್ನು ಈರುಳ್ಳಿ ದೋಸೆಗಾಗಿಯೇ ಫೇಮಸ್ ಆಗಿರುವ ಕೆಲ ಹೋಟೆಲ್​ಗಳಲ್ಲಿ ದೋಸೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಪ್ರತೀ ದೋಸೆಗೆ 5 ರೂಪಾಯಿ ಹೆಚ್ಚಾಗಿದೆ.

Published On - 6:48 pm, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us