ಗ್ರಾಹಕರಿಗೆ ಗುಡ್ನ್ಯೂಸ್: ಗಣನೀಯ ಇಳಿಕೆ ಕಂಡ ಈರುಳ್ಳಿ ದರ, ಎಷ್ಟಿದೆ ಇಂದಿನ ಬೆಲೆ?
ಉತ್ತರ ಕರ್ನಾಟಕದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಇಲ್ಲಿ ಮಳೆ ಬಂದು ಅತಿವೃಷ್ಟಿ ಆಗಿದ್ದರಿಂದ ಈರುಳ್ಳಿ ಬೆಲೆ ನಾಶವಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕೆಜಿ ಈರುಳ್ಳಿ ಬೆಲೆ ₹ 100ರ ಗಡಿ ಸಮೀಪಿಸಿತ್ತು.
ಬೆಂಗಳೂರು: ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶವಾಗಿತ್ತು. ಹೀಗಾಗಿ, ಈರುಳ್ಳಿ ಆಮದು ಕಡಿಮೆ ಆಗಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ಬೆಲೆ ಗಗನಕ್ಕೇರಿತ್ತು. ಆದರೆ, ನಿಧಾನವಾಗಿ ಈರುಳ್ಳಿ ಆಮದು ಹೆಚ್ಚುತ್ತಿದ್ದು, ಬೆಲೆ ಕೂಡ ಕುಸಿತ ಕಂಡಿದೆ. ಇದು ಗ್ರಾಹಕರಿಗೆ ಖುಷಿ ನೀಡಿದೆ.
ಉತ್ತರ ಕರ್ನಾಟಕದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಇಲ್ಲಿ ಮಳೆ ಬಂದು ಅತಿವೃಷ್ಟಿ ಆಗಿದ್ದರಿಂದ ಈರುಳ್ಳಿ ಬೆಲೆ ನಾಶವಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕೆಜಿ ಈರುಳ್ಳಿ ಬೆಲೆ ₹ 100ರ ಗಡಿ ಸಮೀಪಿಸಿತ್ತು. ಆದರೆ, ಈಗ ಎಲ್ಲವೂ ಸಮಸ್ಥಿತಿಗೆ ಮರಳುತ್ತಿದ್ದು, ಈರುಳ್ಳಿ ಪೂರೈಕೆ ಹೆಚ್ಚಿದೆ.
ಬೆಂಗಳೂರಿನ ಎಪಿಎಂಸಿಗೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಹೀಗಾಗಿ, ಬೆಲೆ ನಿಧಾನವಾಗಿ ಇಳಿಕೆ ಆಗುತ್ತಿದೆ. ಎಪಿಎಂಸಿಯಲ್ಲಿ ಕೆಜಿ ಈರುಳ್ಳಿಗೆ 38 ರೂಪಾಯಿ ಇದೆ. ಅಂಗಡಿಗಳಲ್ಲಿ 45-50 ರೂಪಾಯಿಗೆ ಮಾರಾಟವಾಗುತ್ತಿದೆ.
ಮತ್ತೂ ಇಳಿಕೆ ಆಗಲಿದೆ ದರ? ಮುಂದಿನ ದಿನಗಳಲ್ಲಿ ಈರುಳ್ಳಿ ಪೂರೈಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ, ಈರುಳ್ಳಿ ಬೆಲೆ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಕಣ್ಣೀರು ತರಿಸುವ ತರಕಾರಿ ಈಗ ಗ್ರಾಹಕರ ಮೊಗದಲ್ಲಿ ಖುಷಿ ತರುತ್ತಿರುವುದಂತೂ ಸುಳ್ಳಲ್ಲ.
ಕೊರೊನಾಘಾತದ ನಡುವೆ ಜನರಿಗೆ ‘ಕಣ್ಣೀರುಳ್ಳಿ’, 100ರ ಗಡಿ ದಾಟಿದ ಈರುಳ್ಳಿ ರೇಟ್
Published On - 7:17 pm, Thu, 17 December 20