ಫಟಾಫಟ್ ಅಂತ ಆನ್​ಲೈನ್​ನಲ್ಲಿ ಲೋನ್ ಸಿಗುತ್ತೆ ಎಂದು ಖುಷಿಯಾಗ್ಬೇಡಿ.. ಸಾಲ ಮಾಡಿದ್ರೆ ಏನಾಗುತ್ತೆ ಅನ್ನೋದನ್ನ ಇಲ್ಲಿ ನೋಡಿ

|

Updated on: Apr 13, 2021 | 8:35 AM

ಸಾಲ ಸುಲಭವಾಗಿ ಸಿಗುತ್ತದೆ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಹೀಗೆ ಆ ಆ್ಯಪ್ ಮೂಲಕ ಮಲೆನಾಡಿನ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು ಲೋನ್ ಪಡೆದುಕೊಂಡಿದ್ರು. ಲೋನ್ ಪಡೆದುಕೊಂಡ ಮೇಲೆ ಸಾಲ ತೀರಿಸಿದ್ರೂ ಸಾಲ ಮಾತ್ರ ತೀರುತ್ತಿಲ್ಲ. ಇದರಿಂದ ಸಾಲ ಪಡೆದವರು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಫಟಾಫಟ್ ಅಂತ ಆನ್​ಲೈನ್​ನಲ್ಲಿ ಲೋನ್ ಸಿಗುತ್ತೆ ಎಂದು ಖುಷಿಯಾಗ್ಬೇಡಿ.. ಸಾಲ ಮಾಡಿದ್ರೆ ಏನಾಗುತ್ತೆ ಅನ್ನೋದನ್ನ ಇಲ್ಲಿ ನೋಡಿ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಅರ್ಜೆಂಟ್‌ ಆಗಿ ದುಡ್ಡು ಸಿಗುತ್ತೆ ಅಂದ್ರೆ ಸಾಕು ಜನ ತಾ ಮುಂದು ನಾ ಮುಂದು ಅಂತ ಬರ್ತಾರೆ. ಅದರಲ್ಲೂ ಈಗೀಗ ಆನ್‌ಲೈನ್ ಲೋನ್ ಆ್ಯಪ್‌ಗಳ ಹಾವಳಿ ಜೋರಾಗಿದೆ. ಒಂದಿಷ್ಟು ಡೀಟೈಲ್ಸ್ ಹಾಕಿದ್ರೆ ಫಟಾ ಫಟ್ ಅಂತ ದುಡ್ಡು ಕೈ ಸೇರುತ್ತೆ. ಹಾಗೇ ಮಲೆನಾಡಿನ ಜನ ಆನ್‌ಲೈನ್‌ ಲೋನ್ ಮಾಡಿ ಈಗ ಹಳ್ಳಕ್ಕೆ ಬಿದ್ದಿದ್ದಾರೆ. ಅಂದಹಾಗೇ ಧನಿ ಎಂಬ ಆ್ಯಪ್‌ ವ್ಯಾಪಾರ ಸಾಲ ಅಂತ 4 ಸಾವಿರದಿಂದ 15 ಲಕ್ಷ ವರಗೆ ಸಾಲ ನೀಡುತ್ತದೆ. ಹಾಗೇ ಶಿವಮೊಗ್ಗದ ಬೊಮ್ಮಕಟ್ಟೆಯ ಸೈಯದ್ ದಾದಾಪೀರ್ ಎಂಬಾತ 2020ರ ಮಾರ್ಚ್​ನಲ್ಲಿ 8000 ಸಾವಿರ ಲೋನ್ ಪಡೆದಿದ್ದ. ಈ ದಾದಾಪೀರ್ ಸಾಲ ಪಡೆದು ಅಸಲು ಬಡ್ಡಿ ಸೇರಿ ಎಲ್ಲವನ್ನೂ ತುಂಬಿದ್ದಾನೆ. ಆದ್ರೂ ಪ್ರತಿ ತಿಂಗಳು ಆತನ ಉಳಿತಾಯ ಖಾತೆಯಿಂದ ಹಣ ಹೋಗುತ್ತಿದೆ. ಧನಿ ಕಂಪನಿಯು ಲೋನ್ ಪಡೆಯುವ ವೇಳೆ ಚೆಕ್ ಮತ್ತು ಇನ್ನಿತರ ದಾಖಲೆಗಳನ್ನು ಇಟ್ಟುಕೊಂಡು ಲೋನ್ ಪಡೆದವರಿಗೆ ಸದ್ಯ ವಂಚನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ ಬೊಮ್ಮಕಟ್ಟೆ ಬಡಾವಣೆಯಲ್ಲೇ 10 ಕ್ಕೂ ಹೆಚ್ಚು ಜನರು ಧನಿ ಅ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದಾರೆ. ಹೀಗೆ ನಗರದಲ್ಲಿ ಅನೇಕ ವ್ಯಾಪಾರಸ್ಥರು ಛೋಟಾ ಮತ್ತು ಬಡಾ ಲೋನ್ ಪಡೆದುಕೊಂಡಿದ್ದಾರೆ. ಸಾಲ ಮರುಪಾವತಿ ಮಾಡಿದ್ರೂ ಸಾಲ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ. ಸಾಲ ಪಡೆದಿರುವ ಹಣ ತುಂಬಿದ ಬಳಿಕವು ಸಾಲ ಮುಗಿದಿದೆ ಎನ್ನುವ NOC ಸಾಲಗಾರರಿಗೆ ಧನಿ ಆ್ಯಪ್​ನ ಹಣಕಾಸಿನ ಸಂಸ್ಥೆಯಿಂದ ಸಿಗುತ್ತಿಲ್ಲ. ಇದರಿಂದ ಸಾಲ ಪಡೆದವರಿಗೆ ಸದ್ಯ ದೊಡ್ಡ ತಲೆಬಿಸಿ ಶುರುವಾಗಿದೆ. ಹೀಗೆ ಆನ್ ಲೈನ್ ಮೂಲಕ ಸಾಲದ ವ್ಯವಹಾರ ಮಾಡಿಕೊಂಡು ಅನೇಕರು ಕೈಸುಟ್ಟುಕೊಂಡಿದ್ದಾರೆ.

ಈಗಾಗಲೇ ಮಲೆನಾಡಿನ ಜನ ಆನ್ ಲೈನ್ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಆನ್ ಲೈನ್‌ಲೈನ್‌ ಲೋನ್ ಆ್ಯಪ್‌ ಕಂಪನಿಗಳ ಆಟಕ್ಕೆ ಅಮಾಯಕ ಸಣ್ಣ ಪುಟ್ಟ ವ್ಯಾಪಾರಸ್ಥರು ಬಲಿಪಶುಗಳಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರು ಗಮನ ಹರಿಸಬೇಕಿದೆ.

ಇದನ್ನೂ ಓದಿ: ಬ್ಯಾಂಕ್ ನಿಮಗೆ ಲೋನ್ ಕೊಡೋಕೆ ಆಗಲ್ಲ ಅಂತಾ? ಚಿಂತಿಸಬೇಡಿ ಇನ್ನೂ ಒಂದಿಷ್ಟು ದಾರಿಗಳಿವೆ

(Online App Loan Fraud in shivamogga Loan From App Based Lenders Can Hit You Hard)

Published On - 8:35 am, Tue, 13 April 21