ಎಲ್ಲಿದ್ದಾನೆ Nithyananda Swamiji? ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿ ಹುಡುಕುವಲ್ಲಿ ವಿಫಲವಾದ್ರಾ ಅಧಿಕಾರಿಗಳು

Nithyananda Swamiji ಬಿಡದಿ ಧ್ಯಾನಪೀಠದ ಮೂಲಕ ದಿಢೀರ್ ಹೆಸರುಗಳಿಸಿದ್ದ ನಿತ್ಯಾನಂದ ಸದಾ ಒಂದಿಲ್ಲೊಂದು ವಿವಾದದಿಂದ ಕುಖ್ಯಾತಿ ಪಡೆದಿದ್ದ. ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪವೂ ಇದೆ. ಆದ್ರೆ ನಿತ್ಯಾನಂದ ಈಗ ಎಲ್ಲಿದ್ದಾನೆ, ಏನು ಮಾಡ್ತ್ತಿದ್ದಾನೆ ಅನ್ನೋದು ಯಕ್ಷಪ್ರಶ್ನೆಯಾಗಿದೆ...

ಎಲ್ಲಿದ್ದಾನೆ Nithyananda Swamiji? ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿ ಹುಡುಕುವಲ್ಲಿ ವಿಫಲವಾದ್ರಾ ಅಧಿಕಾರಿಗಳು
ನಿತ್ಯಾನಂದ ಸ್ವಾಮಿ
Follow us
ಆಯೇಷಾ ಬಾನು
|

Updated on:Feb 05, 2021 | 7:16 AM

ರಾಮನಗರ: ತನ್ನ ವೈಭವ ಭರಿತ ಜೀವನ ಹಾಗೂ ವಿವಾದಗಳಿಂದಲೇ ನಿತ್ಯಾನಂದ ದೇಶಾದ್ಯಂತ ಫುಲ್ ಫೇಮಸ್ ಆಗಿದ್ದ. ರಾಮನಗರದ ಬಿಡದಿಯಲ್ಲಿ ಧ್ಯಾನಪೀಠ ಮಾಡ್ಕೊಂಡಿದ್ದ ನಿತ್ಯಾನಂದ ಆಗೊಮ್ಮೆ, ಈಗೊಮ್ಮೆ ತೆರೆಮೇಲೆ ಪ್ರತ್ಯಕ್ಷನಾಗಿ ಮತ್ತೆ ಮರೆಯಾಗ್ತಿದ್ದಾನೆ. ಆದರೆ ನಾಪತ್ತೆಯಾಗಿರುವ ನಿತ್ಯಾನಂದ ಎಲ್ಲಿದ್ದಾನೆ ಎಂಬ ಪಕ್ಕಾ ಮಾಹಿತಿ ಇನ್ನೂ ಸಿಕ್ಕಿಲ್ಲ. ಇದು ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ನಿತ್ಯಾನಂದ ಈಗ ಎಲ್ಲಿದ್ದಾನೆ..? ಏನು ಮಾಡ್ತಿದ್ದಾನೆ..? ಅಂದಹಾಗೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂಥ ಗಂಭೀರ ಆರೋಪಗಳು ಕೂಡ ಇವೆ. ಪ್ರಕರಣ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿದೆ. ನಿತ್ಯಾನಂದ 3 ವರ್ಷದಿಂದ ಕೋರ್ಟ್​ಗೂ ಹಾಜರಾಗಿಲ್ಲ. ಹೀಗಾಗಿ ನಿತ್ಯಾನಂದನ ವಿರುದ್ಧ ಓಪನ್ ಇಂಡೆಂಟ್ ವಾರೆಂಟ್’ ಕೂಡ ಜಾರಿಯಾಗಿದೆ. ಆದ್ರೆ ಈಗ ನಿತ್ಯಾನಂದ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆಗಾಗ ವಿಡಿಯೋ ಮಾಡಿ, ಇಂಟರ್ನೆಟ್​ನಲ್ಲಿ ಹರಿಬಿಡುವ ನಿತ್ಯಾನಂದನ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ನಿತ್ಯಾನಂದನ ವಿರುದ್ಧ ವಾರಂಟ್ ಜಾರಿಯಾಗಿದ್ದರೂ ಆತನನ್ನ ಹುಡುಕಿ, ಕೋರ್ಟ್ ಮುಂದೆ ಹಾಜರುಪಡಿಸುವ ಕೆಲಸವನ್ನ ಅಧಿಕಾರಿಗಳು ಮಾಡಿಲ್ಲ.

ಅಂದಹಾಗೆ ನಿತ್ಯಾನಂದ ಪದೇಪದೆ ಕೋರ್ಟ್​ಗೆ ಹಾಜರಾಗದ ಹಿನ್ನೆಲೆ ಆತನ ವಿರುದ್ಧ ‘ಓಪನ್ ಇಂಡೆಂಟ್ ವಾರೆಂಟ್’’ ಜಾರಿಯಾಗಿದೆ. ಅಲ್ದೆ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ, ನಿತ್ಯಾನಂದನ ಆಸ್ತಿಯ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಆದೇಶಿಸಿದೆ. ಆದ್ರೆ ಈಗಾಗಲೇ ಬಿಡದಿಯ ಧ್ಯಾನಪೀಠವನ್ನ ತನ್ನ ತಾಯಿಯ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ ನಿತ್ಯಾನಂದ. ಹೀಗಾಗಿ ಉಳಿದಿರುವ ಆಸ್ತಿಯನ್ನ ಪತ್ತೆ ಹಚ್ಚೋಕೆ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಗಂಭೀರ ಆರೋಪ ಎದುರಿಸಿ, ಕೋರ್ಟ್​ಗೆ ಹಾಜರಾಗದೆ, ವಾರಂಟ್ ಜಾರಿಯಾಗಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೂ ಕಾರಣವಾಗಿದೆ.

ಒಟ್ನಲ್ಲಿ ನಿತ್ಯಾನಂದನ ಕೇಸ್ ಕಗ್ಗಂಟಾಗಿದೆ. ಕೋರ್ಟ್ ಆದೇಶಕ್ಕೂ ತಲೆಬಾಗದೆ ಎಸ್ಕೇಪ್ ಆಗಿರುವ ಆಸಾಮಿ ನಿತ್ಯಾನಂದನ ಜಾಡು ಹಿಡಿಯಲು ಅಧಿಕಾರಿಗಳು ಮುಂದಾಗ್ತಿಲ್ಲ. ಈಗಲಾದ್ರೂ ಆ ಕೆಲಸ ಆಗಬೇಕಿದೆ.

ನಿತ್ಯಾನಂದ ಕಾಣಿಸ್ತಿಲ್ಲ.. ಬಿಡದಿ ಪೀಠಕ್ಕೆ ಕಾಲಿಟ್ಟು ವರ್ಷವಾಗಿದೆ!

Published On - 7:16 am, Fri, 5 February 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ