ದೊಡ್ಡಬಳ್ಳಾಪುರ: ಬಸ್​ನಲ್ಲಿ 60ಕ್ಕೂ ಅಧಿಕ ಜನ ಸಂಚಾರ; ಬಸ್​ನ ವಶಕ್ಕೆ ಪಡೆದ ಪೊಲೀಸರು

| Updated By: sandhya thejappa

Updated on: Jun 15, 2021 | 10:12 AM

ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಹೋಗುವ ಬಸ್ಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ಖಾಸಗಿ ಬಸ್​ನಲ್ಲಿ ಸುಮಾರು 60 ಕ್ಕೂ ಅಧಿಕ ಜನರನ್ನ ಕುರಿಗಳಂತೆ ತುಂಬಿಕೊಂಡು ಸಂಚಾರ ಮಾಡಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸಿದ ಬಸ್ ಚಾಲಕ ಮತ್ತು ಕಾರ್ಮಿಕರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.

ದೊಡ್ಡಬಳ್ಳಾಪುರ: ಬಸ್​ನಲ್ಲಿ 60ಕ್ಕೂ ಅಧಿಕ ಜನ ಸಂಚಾರ; ಬಸ್​ನ ವಶಕ್ಕೆ ಪಡೆದ ಪೊಲೀಸರು
ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಬಸ್
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ಆರ್ಭಟದಿಂದಾದ ಸಾವು, ನೋವು ಅಷ್ಟಿಷ್ಟಲ್ಲ. ಆದರೂ ಜನರಿಗೆ ಮಾತ್ರ ಇನ್ನು ಬುದ್ಧಿ ಬಂದಿಲ್ಲ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸದ್ಯ ಇಳಿಮುಖ ಕಾಣುತ್ತಿದೆ. ಹೀಗಾಗಿ ಕೆಲವು ಕಡೆ ಮೊದಲ ಹಂತದ ಅನ್​ಲಾಕ್​ ಮಾಡಿ ರಾಜ್ಯ ಸರ್ಕಾರ ಘೋಷಿಸಿದೆ. ಸ್ವಲ್ಪ ಬೇಜಾವಬ್ದಾರಿಯಿಂದ ಜನ ವರ್ತಿಸಿದರೂ ಕೊರೊನಾ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಹೀಗಿದ್ದೂ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕರನ್ನು ಬಸ್​ನಲ್ಲಿ ಕುರಿಗಳಂತೆ ತುಂಬಿಕೊಂಡು ಹೋಗಿದ್ದಾರೆ.

ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಹೋಗುವ ಬಸ್ಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ಖಾಸಗಿ ಬಸ್​ನಲ್ಲಿ ಸುಮಾರು 60 ಕ್ಕೂ ಅಧಿಕ ಜನರನ್ನ ಕುರಿಗಳಂತೆ ತುಂಬಿಕೊಂಡು ಸಂಚಾರ ಮಾಡಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸಿದ ಬಸ್ ಚಾಲಕ ಮತ್ತು ಕಾರ್ಮಿಕರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಗೋವಿಂದ್ ಎಂಬುವವರು ಖಾಸಗಿ ಬಸ್ ಮಾಲೀಕ ಮತ್ತು ಚಾಲಕನಿಗೆ ದಂಡ ಹಾಕಿ ವಾರ್ನಿಂಗ್ ಮಾಡಿದ್ದಾರೆ.

ಕೊರೊನಾ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಬಸ್ ಸಿಬ್ಬಂದಿ ಒಂದು ಸೀಟಿನಲ್ಲಿ ನಾಲ್ಕು ಜನರನ್ನು ಕೂರಿಸಿಕೊಂಡು ಹೋಗಿದೆ. ಹೀಗಾಗಿ ಕೊರೊನಾ ನಿಯಮ ಉಲ್ಲಂಘಿಸಿದ ಖಾಸಗಿ ಬಸ್ನ ಪೊಲೀಸರು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ

ದೆಹಲಿಯ ಆಸ್ಪತ್ರೆಗಳಲ್ಲಿ ಇಂದಿನಿಂದ ಲಭ್ಯ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ; ಒಂದು ಡೋಸ್​ಗೆ ದರವೆಷ್ಟು?

ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ

(Over sixty people traveled on the bus at Doddaballapur)

Published On - 10:11 am, Tue, 15 June 21