ದೆಹಲಿಯ ಆಸ್ಪತ್ರೆಗಳಲ್ಲಿ ಇಂದಿನಿಂದ ಲಭ್ಯ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ; ಒಂದು ಡೋಸ್​ಗೆ ದರವೆಷ್ಟು?

Sputnik V: ಮೂರೂ ಲಸಿಕೆಗಳೂ ಹೆಚ್ಚು-ಕಡಿಮೆ ಒಂದೇ ರೀತಿಯಲ್ಲಿ ಪರಿಣಾಮಕಾರಿಯಾಗಿದ್ದು, ಜನರು ತಮ್ಮ ಏರಿಯಾಗಳಲ್ಲಿ ಯಾವುದು ಸಿಗುತ್ತಿದೆಯೋ ಅದನ್ನು ಪಡೆಯಬೇಕು ಎದು ಏಮ್ಸ್​ ನಿರ್ದೇಶಕ ರಣದೀಪ್​ ಗುಲೇರಿಯಾ ತಿಳಿಸಿದ್ದಾರೆ.

ದೆಹಲಿಯ ಆಸ್ಪತ್ರೆಗಳಲ್ಲಿ ಇಂದಿನಿಂದ ಲಭ್ಯ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ; ಒಂದು ಡೋಸ್​ಗೆ ದರವೆಷ್ಟು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 15, 2021 | 9:05 AM

ದೆಹಲಿ: ರಷ್ಯಾದ ಕೊವಿಡ್​ 19 ಲಸಿಕೆ ಸ್ಪುಟ್ನಿಕ್​ ವಿ ಲಸಿಕೆ ಇಂದಿನಿಂದ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಲಸಿಕೆಯನ್ನು ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್​​ಸ್ಟಿಟ್ಯೂಟ್​ ಆಫ್ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದೆ. ಕೊವಿಡ್​ 19 ವಿರುದ್ಧ ಶೇ. 91.6ರಷ್ಟು ಪರಿಣಾಮಕಾರಿ ಎನ್ನಲಾಗಿದ್ದು, ಭಾರತದಲ್ಲಿ ಲಭ್ಯವಾಗುತ್ತಿರುವ ಕೊವಿಡ್​ 19 ಲಸಿಕೆಗಳಲ್ಲೇ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಪುಟ್ನಿಕ್​ ವಿ ಲಸಿಕೆಯನ್ನು ಕಳೆದ ತಿಂಗಳು ಮೊದಲ ಹಂತದಲ್ಲಿ ಹೈದರಾಬಾದ್​​ಗೆ ತರಲಾಗಿತ್ತು.

ಈ ಬಾರಿ ದೆಹಲಿಗೆ ತರಿಸಲಾಗಿದ್ದು, ಅಪೋಲೋ, ಮಧುಕರ್​ ರೇನ್​ಬೋ ಮಕ್ಕಳ ಆಸ್ಪತ್ರೆಗಳಲ್ಲಿ ರಷ್ಯನ್​ ಲಸಿಕೆ ಸ್ಪುಟ್ನಿಕ್​ ವಿ ನೀಡಲಾಗುವುದು ಎಂದು ಹೇಳಲಾಗಿದೆ. ಈ ವ್ಯಾಕ್ಸಿನ್​​ಗೆ ಒಂದು ಡೋಸ್​​ಗೆ 1,145 ರೂ.ವನ್ನು ಸರ್ಕಾರ ನಿಗದಿಪಡಿಸಿದೆ

ಹೆಚ್ಚು-ಕಡಿಮೆ ಎಲ್ಲವೂ ಒಂದೇ ಇನ್ನು ಮೂರು ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಅದು ಹೆಚ್ಚು ಪರಿಣಾಮಕಾರಿ..ಇದು ಕಡಿಮೆ ಎಂಬ ಗಾಳಿಸುದ್ದಿಗಳೂ ಹರಡುತ್ತಿವೆ. ಆದರೆ ಮೂರೂ ಲಸಿಕೆಗಳೂ ಹೆಚ್ಚು-ಕಡಿಮೆ ಒಂದೇ ರೀತಿಯಲ್ಲಿ ಪರಿಣಾಮಕಾರಿಯಾಗಿದ್ದು, ಜನರು ತಮ್ಮ ಏರಿಯಾಗಳಲ್ಲಿ ಯಾವುದು ಸಿಗುತ್ತಿದೆಯೋ ಅದನ್ನು ಪಡೆಯಬೇಕು. ಯಾಕೆಂದರೆ ಮೂರೂ ಲಸಿಕೆಗಳೂ ಕೊರೊನಾದಿಂದ ನಿಮ್ಮನ್ನು ಸುರಕ್ಷಿತರನ್ನಾಗಿ ಮಾಡುತ್ತವೆ ಎಂದು ಏಮ್ಸ್​ ನಿರ್ದೇಶಕ ರಣದೀಪ್​ ಗುಲೇರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್​ ಹೆಸರಿನಲ್ಲಿ ಸುಳ್ಳು ಪತ್ರ ತೋರಿಸಿ ಬೆಂಗಳೂರಿನ ಮಹಿಳೆಗೆ 80 ಲಕ್ಷ ರೂಪಾಯಿ ವಂಚಿಸಿದ ನಕಲಿ ವೈದ್ಯ

Sputnik V Likely to be Available at Delhi hospitals from today

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್