Coronavirus cases in India: 60,471 ಹೊಸ ಕೊವಿಡ್ ಪ್ರಕರಣ, 75 ದಿನಗಳಲ್ಲಿ ಅತೀ ಕಡಿಮೆ ಸೋಂಕು ಪ್ರಕರಣ ದಾಖಲು
Covid-19: ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 2,95,70,881ಕ್ಕೆ ತಲುಪಿದ್ದು ಸಾವಿನ ಸಂಖ್ಯೆ 3,77,031ಕ್ಕೆ ಏರಿದೆ . ಪ್ರಸ್ತುತ 9,13,378 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 2,82,80,472 ಜನರು ಚೇತರಿಸಿಕೊಂಡಿದ್ದಾರೆ.
ದೆಹಲಿ: ಭಾರತದಲ್ಲಿ ಮಂಗಳವಾರ 60,471 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಆಗಿದ್ದು ಇದು 75 ದಿನಗಳಲ್ಲಿ ಅತೀ ಕಡಿಮೆ. ಕಳೆದ 24 ಗಂಟೆಗಳಲ್ಲಿ 2,726 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 2,726 ಸಾವು ಪ್ರಕರಣಗಳ ಪೈಕಿ 1,600 ಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 2,95,70,881ಕ್ಕೆ ತಲುಪಿದ್ದು ಸಾವಿನ ಸಂಖ್ಯೆ 3,77,031ಕ್ಕೆ ಏರಿದೆ . ಪ್ರಸ್ತುತ 9,13,378 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 2,82,80,472 ಜನರು ಚೇತರಿಸಿಕೊಂಡಿದ್ದಾರೆ. 25,90,44,072 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಚೇತರಿಕೆ ದರ ಶೇ 95.64 ಏರಿಕೆ ಆಗಿದ್ದು, ಸಾಪ್ತಾಹಿಕ ಸಕಾರಾತ್ಮಕ ದರವು ಶೇ 5 ಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಇದು ಶೇ 4.39 ರಷ್ಟಿದೆ. ದೈನಂದಿನ ಸಕಾರಾತ್ಮಕತೆ ಪ್ರಮಾಣ ಶೇ 3.45 ಆಗಿದ್ದು , ಸತತ 8 ದಿನಗಳವರೆಗೆ ಶೇ 5ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಸಚಿವಾಲಯ ಹೇಳಿದೆ.
2,726 ಹೊಸ ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ 1,592, ತಮಿಳುನಾಡಿನಿಂದ 254, ಕೇರಳದಿಂದ 161 ಮತ್ತು ಕರ್ನಾಟಕದಿಂದ 120 ಪ್ರಕರಣಗಳು ಸೇರಿವೆ. ದೇಶದಲ್ಲಿ ಈವರೆಗೆ ಒಟ್ಟು 3,77,031 ಸಾವುಗಳು ಸಂಭವಿಸಿವೆ. ಇದರಲ್ಲಿ ಮಹಾರಾಷ್ಟ್ರದಿಂದ 1,12,696, ಕರ್ನಾಟಕದಿಂದ 33,033, ತಮಿಳುನಾಡಿನಿಂದ 29,801, ದೆಹಲಿಯಿಂದ 24,839, ಉತ್ತರಪ್ರದೇಶದಿಂದ 21,858, ಪಶ್ಚಿಮ ಬಂಗಾಳದಿಂದ 16,974, ಪಂಜಾಬ್‌ನಿಂದ 15,602 ಮತ್ತು ಛತ್ತೀಸಗಡದಿಂದ 13,334 ಸಾವು ಪ್ರಕರಣಗಳು ಸೇರಿವೆ.
ಶೇಕಡಾ 70 ಕ್ಕಿಂತ ಹೆಚ್ಚು ಸಾವುಗಳು ಕೊಮೊರ್ಬಿಡಿಟಿಗಳಿಂದಾಗಿ ಸಂಭವಿಸಿವೆ ಎಂದು ಸಚಿವಾಲಯ ಒತ್ತಿಹೇಳಿತು.
“ನಮ್ಮ ಅಂಕಿಅಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ” ಎಂದು ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ, ರಾಜ್ಯವಾರು ಅಂಕಿಅಂಶಗಳ ವಿತರಣೆಯು ಮತ್ತಷ್ಟು ಪರಿಶೀಲನೆ ಒಳಪಟ್ಟಿರುತ್ತದೆ.
ಕೊವಿಡ್ -19 ರ ಮೂರನೇ ಅಲೆ ಸಾಧ್ಯತೆಯ ಬಗ್ಗೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಹಲವಾರು ರಾಜ್ಯಗಳು ಈಗಾಗಲೇ ಮಕ್ಕಳಲ್ಲಿ ಸೋಂಕು ಹಠಾತ್ ಏರಿಕೆಯಾಗುವ ಸಾಧ್ಯತೆಯನ್ನು ನಿಭಾಯಿಸಲು ತಯಾರಿ ಆರಂಭಿಸಿವೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮೂರನೇ ಅಲೆ ರಾಜ್ಯವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೋಮವಾರ ಅಂತಹ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಕ್ರಿಯಾ ಯೋಜನೆಯನ್ನು ಪ್ರಕಟಿಸಿದರು. ಸರ್ಕಾರವು “ತೀವ್ರತೆಯನ್ನು ದ್ವಿಗುಣಗೊಳಿಸುವ” ಪ್ರಯತ್ನಗಳನ್ನು ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
India reports 60,471 new #COVID19 cases (lowest after 75 days), 1,17,525 discharges & 2726 deaths in last 24 hrs, as per Union Health Ministry
Total cases: 2,95,70,881 Total discharges: 2,82,80,472 Death toll: 3,77,031 Active cases: 9,13,378
Total Vaccination: 25,90,44,072 pic.twitter.com/tEfl3sfKB3
— ANI (@ANI) June 15, 2021
ಏತನ್ಮಧ್ಯೆ ಕೇರಳ ಸರ್ಕಾರ ಎರಡು ಹಂತದ ಕಾರ್ಯತಂತ್ರದೊಂದಿಗೆ ತಯಾರಿ ಆರಂಭಿಸಿದೆ. ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಮಕ್ಕಳ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಈ ಕಾರ್ಯತಂತ್ರ ಆಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಮಕ್ಕಳ ಚಿಕಿತ್ಸೆ ಮತ್ತು ಚೇತರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ” ಎಂದು ಹೇಳಿದ್ದಾರೆ.
38,13,75,984 samples tested for #COVID19, up to 14th June 2021. Of these, 17,51,358 samples were tested yesterday: Indian Council of Medical Research (ICMR) pic.twitter.com/7nHq3fpZoH
— ANI (@ANI) June 15, 2021
2021 ಜೂನ್ 14 ರವರೆಗೆ ಕೊವಿಡ್ ಪತ್ತೆ ಹಚ್ಚಲು 38,13,75,984 ಮಾದರಿಗಳನ್ನು ಪರೀಕ್ಷಿಸಲಾಗಿದೆ ಇವುಗಳಲ್ಲಿ 17,51,358 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಯಿತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಟ್ವೀಟ್ ಮಾಡಿದೆ.
ಧಾರಾವಿಯಲ್ಲಿ ಕೊವಿಡ್ ಪ್ರಕರಣವೇ ಇಲ್ಲ ಧಾರಾವಿಯ ಕೊಳೆಗೇರಿಯಲ್ಲಿ ಸೋಮವಾರ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲಿಲ್ಲ, ಫೆಬ್ರವರಿ 11 ರ ನಂತರ ಮೊದಲ ಬಾರಿಗೆ ಕೊರೊನಾವೈರಸ್ ಎರಡನೇ ಅಲೆ ಮುಂಬೈಗೆ ಅಪ್ಪಳಿಸಿತು. ಕಳೆದ ವರ್ಷದ ಕೊವಿಡ್ -19 ಏಕಾಏಕಿ ಏರಿದಾಗ ಈ ಪ್ರದೇಶವು ಒಟ್ಟು 6,861 ಸೋಂಕುಗಳನ್ನು ವರದಿ ಮಾಡಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ದತ್ತಾಂಶ ಹೇಳುತ್ತದೆ. ಈ ಪೈಕಿ 2,900 ಪ್ರಕರಣಗಳು ದಾಖಲಾಗಿದ್ದು, ಇದು ಶೇಕಡಾ 42 ರಷ್ಟಿದೆ.
ಮಾರ್ಚ್ ತಿಂಗಳಲ್ಲಿ ಧಾರಾವಿಯಲ್ಲಿ ಪ್ರತಿದಿನ ಸರಾಸರಿ 50 ಪ್ರಕರಣಗಳನ್ನು ದಾಖಲಿಸಿದೆ. ಮಾರ್ಚ್ 23 ರ ಹೊತ್ತಿಗೆ, ವನಿತಾ ಸಮಾಜ ಸಭಾಂಗಣದಲ್ಲಿ 250 ಹಾಸಿಗೆಗಳ ಏಕೈಕ ಕ್ವಾರಂಟೈನ್ ಕೇಂದ್ರ ಮಾಡಲಾಗಿತ್ತು. ಆಮೇಲೆ ಧಾರವಿ ನಿವಾಸಿಗಳಿಗೆ ಮಾತ್ರ ಪ್ರವೇಶ ಸಾಮರ್ಥ್ಯವನ್ನು ಹೆಚ್ಚಿಸಲು ನಾಗರಿಕ ನಿಗಮವು ಎರಡು ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಬೇಕಾಯಿತು.
ಥಾಣೆಯಲ್ಲಿ ಸೋಂಕು ಪ್ರಕರಣ ಏರಿಕೆ
351 ಹೊಸ ಸಕಾರಾತ್ಮಕ ಪ್ರಕರಣಗಳ ಜೊತೆಗೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ 5,25,488 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 23 ರೋಗಿಗಳು ಕೊರೊನಾವೈರಸ್‌ಗೆ ಬಲಿಯಾಗುವುದರೊಂದಿಗೆ, ಥಾಣೆ ಜಿಲ್ಲೆಯಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 10,299 ಕ್ಕೆ ಏರಿದೆ. ಮರಣ ಪ್ರಮಾಣ ಶೇ 1.95 ರಷ್ಟಿದೆ ಎಂದು ಅವರು ಹೇಳಿದರು.
ಚೇತರಿಸಿಕೊಂಡ ಮತ್ತು ಚಿಕಿತ್ಸೆ ಪಡೆಯದ ರೋಗಿಗಳ ವಿವರಗಳನ್ನು ಜಿಲ್ಲಾಡಳಿತ ಒದಗಿಸಿಲ್ಲ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಕೊವಿಡ್ -19 ಪ್ರಕರಣಗಳ ಸಂಖ್ಯೆ 1,13,714 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2,407 ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Published On - 10:43 am, Tue, 15 June 21