ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ; ಪಂಜಾಬ್ ಮತ್ತು ರಾಜಸ್ಥಾನ ನಂತರ ಕೇರಳದ ಕಾಂಗ್ರೆಸ್​ನಲ್ಲಿಯೂ ಬಿಕ್ಕಟ್ಟು

Kerala: ಕೇರಳ ಘಟಕದ ಮುಖ್ಯಸ್ಥ ಮಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಇವರಿಬ್ಬರನ್ನೂ ಪಕ್ಷ ಪ್ರಸ್ತುತ ಸ್ಥಾನದಿಂದ ತೆಗೆದುಹಾಕಿತ್ತು

ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ; ಪಂಜಾಬ್ ಮತ್ತು ರಾಜಸ್ಥಾನ ನಂತರ ಕೇರಳದ ಕಾಂಗ್ರೆಸ್​ನಲ್ಲಿಯೂ ಬಿಕ್ಕಟ್ಟು
ವಿ.ಡಿ.ಸತೀಶನ್,ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 15, 2021 | 11:47 AM

ದೆಹಲಿ: ಪಂಜಾಬ್ ಮತ್ತು ರಾಜಸ್ಥಾನ ಘಟಕಗಳಲ್ಲಿನ ಅಸಮಾಧಾನವನ್ನು ನಿಭಾಯಿಸಲು ಕಾಂಗ್ರೆಸ್  ನಾಯಕತ್ವ ನಿರತರಾಗಿರುವ ಹೊತ್ತಲ್ಲಿಯೇ ಕೇರಳ ಕಾಂಗ್ರೆಸ್  ಘಟಕದಲ್ಲಿ ಅಸಮಾಧಾನದ ಮಾತುಗಳು ಕೇಳಿ ಬಂದಿದೆ. ಕೇರಳದಲ್ಲಿ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಿ ಕಡೆಗಣಿಸಲಾಗುತ್ತಿದೆ ಎಂದು ರಾಜಕೀಯ ಬೆಳವಣಿಗೆ ಬಗ್ಗೆ ಅರಿವು ಇರುವ ಜನರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೇರಳ ಘಟಕದ ಮುಖ್ಯಸ್ಥ ಮಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಇವರಿಬ್ಬರನ್ನೂ ಪಕ್ಷ ಪ್ರಸ್ತುತ ಸ್ಥಾನದಿಂದ ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನೇತೃತ್ವದ ಎಡರಂಗ ಭರ್ಜರಿ ಗೆಲುವಿನೊಂದಿಗೆ ಕಳೆದ ತಿಂಗಳು ಕೇರಳದಲ್ಲಿ ಮತ್ತೆ ಅಧಿಕಾರಕ್ಕೇರಿತ್ತು.

ಚೆನ್ನಿತ್ತಲ ಶಿಬಿರದ ನಾಯಕರು ಅವರಿಗೆ “ಗೌರವಪೂರ್ಣ ನಿರ್ಗಮನ” ಸಿಕ್ಕಿಲ್ಲ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶವೂ ಸಿಕ್ಕಿಲ್ಲ ಎಂದು ಆರೋಪಿಸಿದರು. ಹೊಸ ರಾಜ್ಯ ಘಟಕದ ಮುಖ್ಯಸ್ಥ ಮತ್ತು ಪ್ರತಿಪಕ್ಷದ ನಾಯಕರ ಹೆಸರನ್ನು ಪ್ರಕಟಿಸುವ ಮೊದಲು ಅವರನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳುತ್ತಾರೆ.

ಚೆನ್ನಿತ್ತಲ ಅವರಿಗೆ ಗೌರವದ ನಿರ್ಗಮನ ನೀಡಬೇಕಿತ್ತು. ಅವರು ಅದಕ್ಕೆ ಅರ್ಹರು ಎಂದು ಚೆನ್ನಿತ್ತಲ ಅವರ ನಿಷ್ಠಾವಂತರು ಹೇಳುತ್ತಾರೆ “ಕಾಂಗ್ರೆಸ್ ಅಧ್ಯಕ್ಷರು ಅಥವಾ ರಾಹುಲ್ ಗಾಂಧಿ ಅವರು ಪರಿಸ್ಥಿತಿಯನ್ನು ವಿವರಿಸಲು ಸಭೆಗೆ ಕರೆಸಿಕೊಳ್ಳಬಹುದಿತ್ತು ಮತ್ತು ಹೊಸ ಮುಖಗಳನ್ನು ತರುವ ಅಗತ್ಯವಾದರೂ ಏನಿತ್ತು? ಇದರ ಬದಲಾಗಿ ಚೆನ್ನಿತ್ತಲ ಅಥವಾ ಮಾಜಿ ಸಿಎಂ (ಮುಖ್ಯಮಂತ್ರಿ) ಉಮ್ಮನ್ ಚಾಂಡಿ ಅವರನ್ನು ಸಂಪರ್ಕಿಸದೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಚೆನ್ನಿತ್ತಲ ಮುಂದುವರಿಯಬೇಕೆಂದು ಹೆಚ್ಚಿನ ಶಾಸಕರು ಬಯಸಿದ್ದರು ಎಂದು ನಾಯಕರೊಬ್ಬರು ಹೇಳಿದ್ದಾರೆ. ಆದರೆ ಇನ್ನೊಬ್ಬ ನಾಯಕ ಇದರ ವ್ಯತಿರಿಕ್ತವಾಗಿ ಹೇಳುತ್ತಾರೆ. “ಹೆಚ್ಚಿನ ಯುವ ಶಾಸಕರು (ಶಾಸಕಾಂಗ ಸಭೆಯ ಸದಸ್ಯರು) ಮತ್ತು ಪಕ್ಷದ ಸಂಸದರು (ಸಂಸತ್ತಿನ ಸದಸ್ಯರು) ಬದಲಾವಣೆಗಳನ್ನು ಸೂಚಿಸಿದರು. ಕಾಂಗ್ರೆಸ್ ರಾಜ್ಯದ ಉಸ್ತುವಾರಿ ತಾರಿಕ್ ಅನ್ವರ್ ಅವರು ಶಾಸಕರು, ಸಂಸದರು ಮತ್ತು ಸಂಘಟನೆಯ ಮುಖಂಡರೊಂದಿಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ.

ವಿ.ಡಿ.ಸತೀಶನ್ ಹೊಸತಾಗಿ ವಿರೋಧ ಪಕ್ಷದ ನಾಯಕರಾಗಿದ್ದು ಕೆ. ಸುಧಾಕರನ್ ಅವರನ್ನು ಕೇರಳದ ಹೊಸ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ಕೇರಳ ವೀಕ್ಷಕರು 65 ರ ಹರೆಯದ ಚೆನ್ನಿತ್ತಲ ಅವರು ಪಕ್ಷಕ್ಕಾಗಿ ಮತ್ತಷ್ಟು ಕೆಲಸಗಳನ್ನು ಮಾಡಬಲ್ಲರು. ಆದರೆ ಅವರಂತಹ ಹಿರಿಯ ನಾಯಕನಿಗೆ ಹೇಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರಿಗೆ ತಿಳಿದಿರಲಿಲ್ಲ. ಪ್ರತಿಪಕ್ಷ ಯುಡಿಎಫ್ ಕನ್ವೀನರ್ ಹುದ್ದೆ ಪ್ರಸ್ತುತ ಖಾಲಿ ಇದೆ. ಆದರೆ ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಅವರ ಪುತ್ರ ಕೆ ಮುರಳೀಧರನ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.

ಕೇರಳದ ಬಿಕ್ಕಟ್ಟು ಪಂಜಾಬ್ ಅಥವಾ ರಾಜಸ್ಥಾನದಲ್ಲಿ ಇರುವಷ್ಟು ದೊಡ್ಡದಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ ಪ್ರಮುಖ ನಾಯಕರಾಗಿರುವ ಚೆನ್ನಿತ್ತಲ ಅವರನ್ನು ಸಮಾಧಾನಪಡಿಸದಿದ್ದರೆ ಕೇರಳ ಘಟಕದಲ್ಲಿನ ಗುಂಪುಗಾರಿಕೆ ಮತ್ತಷ್ಟು ಗಾಢವಾಗಬಹುದು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಈ ವರ್ಷದ ಆರಂಭದಲ್ಲಿ ಕೇರಳದ ಕಾಂಗ್ರೆಸ್ ಮುಖಂಡ ಪಿ.ಸಿ.ಚಾಕೊ  ಗುಂಪುಗಾರಿಕೆ ಆರೋಪಿಸಿ ಪಕ್ಷವನ್ನು ತೊರೆದಿದ್ದರು.

ಇದನ್ನೂ ಓದಿ: ಕೇರಳ ಸರ್ಕಾರದ ಆಯುರ್ವೇದ ಕಂಪನಿಯಿಂದ ‘ಪಂಚಗವ್ಯ ಘೃತ’: ವೈರಲ್ ಪೋಸ್ಟ್​ ಹಿಂದಿರುವ ನಿಜ ಸಂಗತಿಯಿದು

Published On - 11:42 am, Tue, 15 June 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ