ನಿರ್ಮಲಾ ಸೀತಾರಾಮನ್​ ಹೆಸರಿನಲ್ಲಿ ಸುಳ್ಳು ಪತ್ರ ತೋರಿಸಿ ಬೆಂಗಳೂರಿನ ಮಹಿಳೆಗೆ 80 ಲಕ್ಷ ರೂಪಾಯಿ ವಂಚಿಸಿದ ನಕಲಿ ವೈದ್ಯ

ನೀವು ತುಂಬಾ ದಿನವಾದರೂ ಉಡುಗೊರೆ ಸ್ವೀಕರಿಸಿಲ್ಲ, ಆ ಕಾರಣದಿಂದ ನಿಮ್ಮ ಹೆಸರಿಗೆ ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಹೆದರಿಸಿದ್ದಾರೆ. ಜತೆಗೆ, ನಿರ್ಮಲಾ ಸೀತಾರಾಮನ್ ಕಡೆಯಿಂದ ಬಂದಿದೆ ಎನ್ನಲಾದ ನಕಲಿ ಪತ್ರವನ್ನೂ ಕಸ್ಟಮ್ಸ್​ ಅಧಿಕಾರಿಗಳು ಎಂದು ಹೇಳಿಕೊಂಡವರು ಮಹಿಳೆಗೆ ಕಳುಹಿಸಿಕೊಟ್ಟಿದ್ದಾರೆ.

ನಿರ್ಮಲಾ ಸೀತಾರಾಮನ್​ ಹೆಸರಿನಲ್ಲಿ ಸುಳ್ಳು ಪತ್ರ ತೋರಿಸಿ ಬೆಂಗಳೂರಿನ ಮಹಿಳೆಗೆ 80 ಲಕ್ಷ ರೂಪಾಯಿ ವಂಚಿಸಿದ ನಕಲಿ ವೈದ್ಯ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Jun 15, 2021 | 8:59 AM

ಬೆಂಗಳೂರು: ಹೃದಯ ತಜ್ಞ ಎಂದು ಹೇಳಿಕೊಂಡು ಬೆಂಗಳೂರಿನ ಮಹಿಳೆಯೊಬ್ಬರಿಗೆ ನಕಲಿ ವೈದ್ಯ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಹೃದಯ ತಜ್ಞರಿಗಾಗಿ ಇನ್​ಸ್ಟಾಗ್ರಾಂನಲ್ಲಿ ಹುಡುಕಾಟ ನಡೆಸಿದ್ದ ಮಹಿಳೆ 80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ವೈದ್ಯರನ್ನು ಹುಡುಕುವ ವೇಳೆ ಮಾಬಿಸ್ ಹಾರ್ಮನ್ ಎಂಬಾತನ ಪ್ರೊಫೈಲ್​ ಕಣ್ಣಿಗೆ ಬಿದ್ದಿದ್ದು, ಅದನ್ನು ಹಿಂಬಾಲಿಸಿದಾಗ ಆ ವ್ಯಕ್ತಿ ತನ್ನನ್ನು ತಾನು ಹೃದಯ ತಜ್ಞ ಎಂದು ಪರಿಚಯಿಸಿಕೊಂಡು ಮಹಿಳೆಗೆ ಬೇಕಾದ ಸಲಹೆಗಳನ್ನೆಲ್ಲಾ ನೀಡುವ ಭರವಸೆ ಕೊಟ್ಟಿದ್ದಾನೆ. ಆತನ ಮಾತನ್ನು ಸತ್ಯವೆಂದು ನಂಬಿದ ಮಹಿಳೆ ಇದೀಗ ಒಟ್ಟು 80 ಲಕ್ಷ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ವಿಧವೆಯಾಗಿದ್ದ ಮಹಿಳೆಗೆ ಹೃದಯ ಸಂಬಂಧಿ ಸಮಸ್ಯೆ ಇದ್ದು, ಅದಕ್ಕಾಗಿ ಅವರು ತಜ್ಞ ವೈದ್ಯರಿಂದ ಸಲಹೆ ಪಡೆಯಲು ಆನ್​ಲೈನ್​ ಮೊರೆ ಹೋಗಿದ್ದಾರೆ. ಈ ವೇಳೆ ಸಿಕ್ಕ ಮಾಬಿಸ್ ಹಾರ್ಮನ್ ತನ್ನನ್ನ ತಾನು ಹೃದಯ ತಜ್ಞ ಎಂದು ಪರಿಚಯಿಸಿಕೊಂಡು ನಂಬಿಸಿದ್ದಾನೆ. ಆತ ನಕಲಿ ಎನ್ನುವುದನ್ನು ಅರಿಯದ ಮಹಿಳೆ ವಾಟ್ಸ್ಯಾಪ್​ನೊಂದಿಗೆ ಸಂವಹನ ನಡೆಸಲಾರಂಭಿಸಿದ್ದಾರೆ. ಅಲ್ಲದೇ, ಆತ ಕೊಡುವ ಎಲ್ಲಾ ಸಲಹೆಗಳನ್ನ ಪಾಲಿಸುತ್ತಿದ್ದ ಮಹಿಳೆಗೆ ಕೊನೆಗೆ ಸ್ನೇಹದ ಹೆಸರಲ್ಲಿ ಮೋಸವಾಗಿದೆ.

ವಾಟ್ಸ್ಯಾಪ್​ನಲ್ಲಿ ಸಂಪರ್ಕ ಬೆಳೆಸಿದ ನಂತರ ಮಾಬಿಸ್ ಹಾರ್ಮನ್ ಒಂದು ದಿನ ಮಹಿಳೆಗೆ ಗೊತ್ತಿಲ್ಲದಂತೆ ಉಡುಗೊರೆ ಕಳುಹಿಸಿಕೊಡುವ ನಾಟಕವಾಡಿದ್ದಾನೆ. ಈ ವೇಳೆ ಬ್ರಿಟನ್​ (ಯುಕೆ) ದೇಶದಿಂದ ಮಾಬಿಸ್​ ಸನ್ನುವವರಿಂದ ಕರೆನ್ಸಿ ಹಾಗೂ ಉಡುಗೊರೆ ನಿಮ್ಮ ಹೆಸರಿಗೆ ಬಂದಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳ ಹೆಸರಲ್ಲಿ ಮಹಿಳೆಗೆ ಕರೆ ಹೋಗಿದೆ. ಕೂಡಲೇ ವೈದ್ಯನೆಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ ಮಹಿಳೆ ಏನು, ಎತ್ತ ನನಗೇಕೆ ಉಡುಗೊರೆ ಕಳುಹಿಸಿದ್ದೀರಿ ಎಂದೆಲ್ಲಾ ವಿಚಾರಿಸಿದ್ದಾರೆ. ಅತ್ತ ಕಡೆಯಿಂದ ಆತ ಒಬ್ಬ ಸ್ನೇಹಿತನಾಗಿ ನಿಮಗೆ ಉಡುಗೊರೆ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾನೆ.

ಅಷ್ಟಾದರೂ ಮಹಿಳೆ ಉಡುಗೊರೆ ಸ್ವೀಕರಿಸದಿದ್ದಾಗ ಎರಡು ದಿನಗಳ ಬಳಿಕ ಕಸ್ಟಮ್ಸ್​ ಅಧಿಕಾರಿಗಳ ಹೆಸರಲ್ಲಿ ಮತ್ತೆ ಕರೆ ಬಂದಿದೆ. ನೀವು ತುಂಬಾ ದಿನವಾದರೂ ಉಡುಗೊರೆ ಸ್ವೀಕರಿಸಿಲ್ಲ, ಆ ಕಾರಣದಿಂದ ನಿಮ್ಮ ಹೆಸರಿಗೆ ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಹೆದರಿಸಿದ್ದಾರೆ. ಜತೆಗೆ, ನಿರ್ಮಲಾ ಸೀತಾರಾಮನ್ ಕಡೆಯಿಂದ ಬಂದಿದೆ ಎನ್ನಲಾದ ನಕಲಿ ಪತ್ರವನ್ನೂ ಕಸ್ಟಮ್ಸ್​ ಅಧಿಕಾರಿಗಳು ಎಂದು ಹೇಳಿಕೊಂಡವರು ಮಹಿಳೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಬೆಳವಣಿಗೆಗಳಿಂದ ಗಾಬರಿಗೊಂಡ ಮಹಿಳೆ ಎಷ್ಟು ಹಣ ಕಟ್ಟಬೇಕು ಎಂದು ಕೇಳಿದಾಗ ಉಡುಗೊರೆ ಜತೆಗೆ ಕರೆನ್ಸಿ ಇರುವುದರಿಂದ 60 ಲಕ್ಷ ರೂಪಾಯಿ ಆಗುತ್ತದೆ. ಕರೆನ್ಸಿ ಎಕ್ಸ್​ಚೇಂಜ್​ ಪ್ರಕ್ರಿಯೆಯನ್ನೂ ಸೇರಿಸಿ 80 ಲಕ್ಷ ರೂಪಾಯಿ ಆಗುತ್ತದೆ ಎಂದಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆ ಹಣ ಕಟ್ಟಿದ್ದಾರೆ. ಆದರೆ, ಆನ್​ಲೈನ್​ ಮೂಲಕ ಹಣ ಕೊಟ್ಟ ಬಳಿಕ ಗಿಫ್ಟ್​, ಕರೆನ್ಸಿ ಯಾವುದೂ ಕೈ ಸೇರದಿದ್ದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಸದ್ಯ ನಕಲಿ ಹೃದಯ ವೈದ್ಯನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ದೂರಿನ‌ ಹಿನ್ನಲೆ ಆರೋಪಿ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕಿನ ನಡುವೆ ನಕಲಿ ವೈದ್ಯರ ಹಾವಳಿ; ಸಾರ್ವಜನಿಕರೇ ಎಚ್ಚರ 

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್​ ದಾಳಿ ಬೆದರಿಕೆ; ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಪ್ರಿಯಕರನಿಂದಲೇ ಬ್ಲ್ಯಾಕ್​ಮೇಲ್

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ