AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯನ ಕಳ್ಳಾಟ ಬಯಲು; ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ

ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸಂಗಮೇಶ ಟಕ್ಕಳಕಿ, ಸಾರ್ವಜನಿಕ ಸೇವೆಗೆ ಅನಧಿಕೃತ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ. ಬಳಿಕ ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಳ್ಳಾಟ ಬಯಲಾದ ತಕ್ಷಣ ಡಾ.ಸಂಗಮೇಶ್ ಟಕ್ಕಳಕಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ.

ವೈದ್ಯನ ಕಳ್ಳಾಟ ಬಯಲು; ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ
ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ
TV9 Web
| Updated By: ಆಯೇಷಾ ಬಾನು|

Updated on:Jun 15, 2021 | 8:32 AM

Share

ಕಲಬುರಗಿ: ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಕೊರೊನಾ ಸಂದರ್ಭದಲ್ಲಿ ಬೇಜಾವಬ್ದಾರಿಂದ ವರ್ತಿಸುತ್ತಿರುವ ಬಗ್ಗೆ ಟಿವಿ9 ಬಯಲು ಮಾಡಿತ್ತು. ಈಗ ಅದೇ ರೀತಿ ಕಲಬುರಗಿ ಜಿಲ್ಲೆಯ ಅಫಜಲಪುರದ ಸರ್ಕಾರಿ ಆಸ್ಪತ್ರೆ ವೈದ್ಯನ ಕಳ್ಳಾಟ ಬಯಲಾಗಿದೆ.

ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸಂಗಮೇಶ ಟಕ್ಕಳಕಿ, ಸಾರ್ವಜನಿಕ ಸೇವೆಗೆ ಅನಧಿಕೃತ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ. ಬಳಿಕ ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಳ್ಳಾಟ ಬಯಲಾದ ತಕ್ಷಣ ಡಾ.ಸಂಗಮೇಶ್ ಟಕ್ಕಳಕಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ.

ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞರಾಗಿದ್ದ ಡಾ.ಸಂಗಮೇಶ್ ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರಾಗಿದ್ದರು. ಮೇಲಧಿಕಾರಿಗಳು ದೂರವಾಣಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಿರಲಿಲ್ಲ. ಹಾಗೂ ವಾಟ್ಸಾಪ್ ಸಂದೇಶಕ್ಕೂ ಯಾವುದೇ ರಿಪ್ಲೇ ಮಾಡಿರಲಿಲ್ಲ. ನಿನ್ನೆ ಸಂಗಮೇಶ್ವರ್ ಕ್ಲಿನಿಕ್ ಮೇಲೆ ಅಫಜಲಪುರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ತಾಲೂಕು ಆಸ್ಪತ್ರೆ ಅಧಿಕಾರಿ ಡಾ.ಸುಶೀಲಕುಮಾರ ಹಾಗೂ ಅಧಿಕಾರಿಗಳಿಂದ ದಾಳಿ ನಡೆದಿದೆ. ಈ ವೇಳೆ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಡಾ.ಸಂಗಮೇಶ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಕಾರಣ ಕೇಳಿ ಡಾ.ಸಂಗಮೇಶ ಟಕ್ಕಳಕಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಇನ್ನು ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕೆ ಕಲಬುರಗಿ ಜಿಮ್ಸ್ ಆಸ್ಪತ್ರೆ ಸ್ಟಾಫ್ ನರ್ಸ್ ರಾಜಶೇಖರ್ನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಟಾಫ್ ನರ್ಸ್ ರಾಜಶೇಖರ್ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ನನ್ನು ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಾರಾಟದ ಜಾಡು ಹಿಡಿದು ಬಂದ ಪುಣೆ ಪೊಲೀಸರು ಸ್ಥಳೀಯ ಪೊಲೀಸರ ಸಹಾಯದಿಂದ ರಾಜಶೇಖರ್ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ರಾಜಶೇಖರ್ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ಇಂಜೆಕ್ಷನ್ನನ್ನು ತಪ್ಪು ಲೆಕ್ಕ ನೀಡಿ ಕಾಳಸಂತೆಯಲ್ಲಿ ಮಾರುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ದಹೀವಾಲಾ ಮುರ್ಗ್​ ಕಬಾಬ್; ನಾನ್​ ವೆಜ್ ಇಷ್ಟಪಡುವವರು ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ

Published On - 8:28 am, Tue, 15 June 21