ದಹೀವಾಲಾ ಮುರ್ಗ್ ಕಬಾಬ್; ನಾನ್ ವೆಜ್ ಇಷ್ಟಪಡುವವರು ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ
ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ದಹೀವಾಲಾ ಮುರ್ಗ್ ಕಬಾಬ್ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ.
ಮಾಂಸ ಪ್ರಿಯರಿಗೆ ಚಿಕನ್ ಇಲ್ಲ ಅಂದರೆ ಊಟ ಸೇರಲ್ಲ. ಅದರಲ್ಲೂ ಖಾರ ಖಾರ ಚಿಕನ್ ಫ್ರೈ ಮಾಡಿ ತಿಂದರೆ ಅದ್ಭುತ. ಮನೆಯಲ್ಲಿ ಚಿಕನ್ ಅಡುಗೆ ಮಾಡುತ್ತಿದ್ದರೆ, ಯಾವಾಗ ಊಟ ಮಾಡುತ್ತೀವಿ ಅಂತ ಕಾಯ್ತ ಇರುತ್ತಾರೆ. ಒಂದೊಂದು ಕಡೆ ಒಂದೊಂದು ಶೈಲಿಯಲ್ಲಿ ಚಿಕನ್ ಅಡುಗೆಯನ್ನು ತಯಾರಿ ಮಾಡುತ್ತಾರೆ. ಈ ಹಿಂದೆ ಮಲೆನಾಡಿನಲ್ಲಿ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಹೇಗೆ ಮಾಡುತ್ತಾರೆ ಅಂತ ಹೇಳಿದ್ವಿ. ಅದರಂತೆ ಈ ಬಾರಿ ದಹೀವಾಲಾ ಮುರ್ಗ್ ಕಬಾಬ್ ಹೇಗೆ ಮಾಡುತ್ತಾರೆ ಅಂತ ಹೇಳುತ್ತೇವೆ.
ದಹೀವಾಲಾ ಮುರ್ಗ್ ಕಬಾಬ್ ಮಾಡಲು ಬೇಕಾಗುವ ಸಾಮಾಗ್ರಿಗಳು ಚಿಕನ್, ಶುಂಠಿ, ಬೆಳ್ಳುಳ್ಳಿ, ದನಿಯಾ ಪುಡಿ, ಜೀರಿಗೆ, ಚಕ್ಕೆ, ಲವಂಗ, ಕರಿ ಮೆಣಸು, ಏಲಕ್ಕಿ, ನಿಂಬೆ ಹಣ್ಣು, ಕೊತ್ತುಂಬರಿ ಸೊಪ್ಪು, ಮೊಸರು, ಅರಿಶಿಣ ಪುಡಿ, ಉಪ್ಪು.
ದಹೀವಾಲಾ ಮುರ್ಗ್ ಕಬಾಬ್ ಮಾಡುವ ವಿಧಾನ ಮೊದಲು ಚಿಕನ್ಗೆ ಸ್ವಲ್ಪ ನಿಂಬೆ ರಸ ಹಾಕಿ ಕಲಸಿಕೊಳ್ಳಬೇಕು, ಬಳಿಕ ಅದಕ್ಕೆ ಅರಿಶಿಣ ಪುಡಿ, ಕಾರದ ಪುಡಿ, ದನಿಯಾ ಪುಡಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಚಕ್ಕೆ, ಲವಂಗ, ಕರಿ ಮೆಣಸು, ಏಲಕ್ಕಿ ಸೇರಿಸಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಬೇಕು. ನಂತರ ಗಟ್ಟಿ ಮೊಸರು,ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿಕಟ್ಟುಕೊಳ್ಳಬೇಕು. 35 ನಿಮಿಷದ ನಂತರ ಒಂದು ಪ್ಯಾನೆಲ್ಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಒಂದೊಂದೇ ಚಿಕನ್ ತುಂಡುಗಳನ್ನು ಹಾಕಿ ಎರಡು ಬದಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಈಗ ರುಚಿಕರವಾದ ದಹೀವಾಲಾ ಮುರ್ಗ್ ಕಬಾಬ್ ಸವಿಯಲು ಸಿದ್ಧ.
ಇದನ್ನೂ ಓದಿ:
ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ
ಮಲ್ನಾಡ್ ಸ್ಟೈಲ್ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ