ದುದ್ದಣಗಿ ಗ್ರಾಮದ ಜನರ ಸಂಕಷ್ಟ ನೀಗಿಸಿದ ಟಿವಿ9, ಕೊನೆಗೂ ಗ್ರಾಮಸ್ಥರ ಒಂದೂವರೆ ದಶಕದ ಕನಸು ನನಸು

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದ ಭೀಮಾ ನದಿ ದಡದಲ್ಲಿರೋ ದುದ್ದಣಗಿ ಗ್ರಾಮಕ್ಕೆ, ಭೀಮಾ ಏತ ನೀರಾವರಿ ಯೋಜನೆ ಶಾಪವಾಗಿ ಪರಣಮಿಸಿತ್ತು. ಏತ ನೀರಾವರಿ ಯೋಜನೆಗೆ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್, ಮಳೆಗಾಲದಲ್ಲಿ ಹಿನ್ನೀರು ಗ್ರಾಮಕ್ಕೆ ನುಗ್ಗುತ್ತಿತ್ತು. ಪ್ರವಾಹ ಬಂದಾಗ ಗ್ರಾಮ ಜಲಾವೃತವಾಗ್ತಿತ್ತು.

ದುದ್ದಣಗಿ ಗ್ರಾಮದ ಜನರ ಸಂಕಷ್ಟ ನೀಗಿಸಿದ ಟಿವಿ9, ಕೊನೆಗೂ ಗ್ರಾಮಸ್ಥರ ಒಂದೂವರೆ ದಶಕದ ಕನಸು ನನಸು
ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು, ಗ್ರಾಮಸ್ಥರಿಗೆ ಹಕ್ಕುಪತ್ರಗಳನ್ನ ವಿತರಿಸಿದ್ದಾರೆ.
Follow us
TV9 Web
| Updated By: ಆಯೇಷಾ ಬಾನು

Updated on: Jun 15, 2021 | 9:22 AM

ಕಲಬುರಗಿ: ಭೀಮಾ ನದಿಯಲ್ಲಿ ನಿರ್ಮಾಣವಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ಹಿನ್ನೀರು ಹೆಚ್ಚಾದ್ರೆ, ಪ್ರವಾಹ ಬಂದ್ರೆ ಆ ಊರಿನ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ರು. ಹೀಗಾಗಿ ತಮ್ಮ ಊರನ್ನ ಸ್ಥಳಾಂತರ ಮಾಡಿ ಅನ್ನೋ ಬೇಡಿಕೆ ಇಟ್ಟಿದ್ರೂ. ಯಾರೂ ಗಮನ ಹರಿಸಿರಲಿಲ್ಲ. ಸದ್ಯ ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತಿರೋ ಅಧಿಕಾರಿಗಳು ಜನರಿಗೆ ನೆರವು ನೀಡಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದ ಭೀಮಾ ನದಿ ದಡದಲ್ಲಿರೋ ದುದ್ದಣಗಿ ಗ್ರಾಮಕ್ಕೆ, ಭೀಮಾ ಏತ ನೀರಾವರಿ ಯೋಜನೆ ಶಾಪವಾಗಿ ಪರಣಮಿಸಿತ್ತು. ಏತ ನೀರಾವರಿ ಯೋಜನೆಗೆ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್, ಮಳೆಗಾಲದಲ್ಲಿ ಹಿನ್ನೀರು ಗ್ರಾಮಕ್ಕೆ ನುಗ್ಗುತ್ತಿತ್ತು. ಪ್ರವಾಹ ಬಂದಾಗ ಗ್ರಾಮ ಜಲಾವೃತವಾಗ್ತಿತ್ತು. 2006ರಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ, ಗ್ರಾಮ ಸ್ಥಳಾಂತರಿಸಲು 58 ಎಕರೆಯಲ್ಲಿ ಪುನರ್ವಸತಿ ಯೋಜನೆ ರೂಪಿಸಿದ್ರು. 2014 ರಲ್ಲಿ ಯೋಜನೆ ಪೂರ್ಣಗೊಂಡಿದ್ರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಸ್ಥಳಾಂತರವಾಗಿರಲಿಲ್ಲ. ಕೊನೆಗೆ ಗ್ರಾಮಸ್ಥರು ಟಿವಿ9 ಸಂಪರ್ಕಿಸಿ ಕಷ್ಟ ಹೇಳಿಕೊಂಡ್ರು. ಈ ಕುರಿತು ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಇದಾದ ಬಳಿಕ ಎಚ್ಚೆತ್ತ ಅಧಿಕಾರಿಗಳು, ಗ್ರಾಮಸ್ಥರಿಗೆ ಹಕ್ಕುಪತ್ರಗಳನ್ನ ವಿತರಿಸಿದ್ದಾರೆ.

Kalaburagi rain

ಏತ ನೀರಾವರಿ ಯೋಜನೆಗೆ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್, ಮಳೆಗಾಲದಲ್ಲಿ ಹಿನ್ನೀರು ಗ್ರಾಮಕ್ಕೆ ನುಗ್ಗುತ್ತಿತ್ತು.

ಗ್ರಾಮದ 430 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಸುಮಾರು ಒಂದೂವರೆ ದಶಕದ ಕನಸು ಈಗ ಈಡೇರಿಸಿದ್ದಕ್ಕೆ, ಗ್ರಾಮಸ್ಥರು ನಿಮ್ಮ ಟಿವಿ9ಗೆ ಧನ್ಯವಾದ ಹೇಳಿದ್ರು. ಗ್ರಾಮಸ್ಥರಿಗೆ ಈಗ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. ಆದ್ರೆ, ಇವರಲ್ಲಿ ಅನೇಕರಿಗೆ ಮನೆ ಕಟ್ಟಿಕೊಳ್ಳೋ ಶಕ್ತಿ ಇಲ್ಲ. ಹೀಗಾಗಿ ಸರ್ಕಾರದಿಂದಲೇ ತಮಗೆ ಮನೆ ಕಟ್ಟಿಕೊಡಬೇಕು ಅಂತಾ ಆಗ್ರಹಿಸ್ತಿದ್ದಾರೆ. ನಿವೇಶನ ನೀಡಿರೋ ಸರ್ಕಾರ ಸೂರು ಕಟ್ಟಿಕೊಳ್ಳಲು ನೆರವಾದ್ರೆ, ದುದ್ದಣಗಿ ಗ್ರಾಮಸ್ಥರಿಗೆ ಇನ್ನಷ್ಟು ಅನುಕೂಲವಾಗಲಿದೆ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ: Petrol Diesel Price Today: ಏರುತ್ತಲೇ ಇದ್ದ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಂದು ಹೆಚ್ಚಳವಿದೆಯೇ? ದರ ವಿವರ ಪರಿಶೀಲಿಸಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ