ಮಂಡ್ಯದಲ್ಲಿ ಅಮಾನವೀಯ ಘಟನೆ; ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ

| Updated By: sandhya thejappa

Updated on: Jun 28, 2021 | 11:12 AM

ಜಮೀನಿನ ಮಾಲೀಕ ಹರ್ಷ ಎಂಬ ವ್ಯಕ್ತಿ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕ ಕುರಿ ಮಂದೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದ. ತನ್ನ ಜಮೀನಿಗೆ ಕುರಿಗಳನ್ನು ಬಿಟ್ಟ ಕಾರಣಕ್ಕೆ ಜಮೀನ್ದಾರ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ್ದಾನೆ.

ಮಂಡ್ಯದಲ್ಲಿ ಅಮಾನವೀಯ ಘಟನೆ; ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ
ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿದ ಜಮೀನಿನ ಮಾಲೀಕ
Follow us on

ಮಂಡ್ಯ: ಕುರಿಗಳನ್ನು ಕಾಯುವ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಜಮೀನಿನ ಮಾಲೀಕನೊಬ್ಬ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ನ ಜಮೀನೊಂದರ ಬಳಿ ನಡೆದಿದೆ. ಜಮೀನಿನ ಮಾಲೀಕ ಹರ್ಷ ಎಂಬ ವ್ಯಕ್ತಿ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕ ಕುರಿ ಮಂದೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದ. ತನ್ನ ಜಮೀನಿಗೆ ಕುರಿಗಳನ್ನು ಬಿಟ್ಟ ಕಾರಣಕ್ಕೆ ಜಮೀನ್ದಾರ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ್ದಾನೆ. ಬಾಲಕನನ್ನು ಕಟ್ಟಿ ಹಾಕಿರುವುದನ್ನು ಕಂಡು ಸ್ಥಳೀಯರು ನೆರವಿಗೆ ಬಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನಲ್ಲಿ ಸರಗಳ್ಳತನ

ಮನೆಯ ಮುಂದೆ ನಿಂತಿದ್ದ ಮಂಜುಳಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಮೈಸೂರಿನ ಲಲಿತಮಹಲ್ ನಗರದಲ್ಲಿ ಸಂಭವಿಸಿದೆ. ಕುತ್ತಿಗೆಯಲ್ಲಿದ್ದ ಸರವನ್ನು ಕೀಳುವ ವೇಳೆ ಮಂಜುಳಾ ಸರವನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಚಿನ್ನದ ಸರ ತುಂಡಾಗಿ 12 ಗ್ರಾಂನಷ್ಟು ತೂಕದ ಸರವಷ್ಟೇ ಕಳ್ಳರ ಪಾಲಾಗಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳನ್ನು ಹತ್ಯೆಗೈದು ತಾಯಿಯೂ ಆತ್ಮಹತ್ಯೆ
ಬಳ್ಳಾರಿ: ಇಂದಿರಾ ನಗರದಲ್ಲಿ ಇಬ್ಬರು ಮಕ್ಕಳನ್ನು ಹತ್ಯೆಗೈದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಸುನಿತಾ(25) ತನ್ನ ಇಬ್ಬರು ಮಕ್ಕಳಾದ ಯಶ್ವಂತ(4), ಸಾನ್ವಿ(1)ಯನ್ನು ಹತ್ಯೆ ಮಾಡಿ, ಬಳಿಕ ಸಂಪ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಪತ್ನಿ ಜೊತೆಗೆ ನಿತ್ಯ ಜಗಳ ನಡೆಯುತ್ತಿದ್ದ ಆರೋಪ ಕೇಳಿಬಂದಿದೆ. ಸದ್ಯ ಮೃತದೇಹಗಳು ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ

ಮೊದಲ ಅಲೆಯಿಂದ ಪಾಠ ಕಲಿತಿಲ್ಲ; ಉತ್ತರಪ್ರದೇಶದ ಕೊವಿಡ್ ಬಿಕ್ಕಟ್ಟು ನಿರ್ವಹಣೆ ಬಗ್ಗೆ ಬಿಜೆಪಿ ನಾಯಕರಿಂದಲೇ ಟೀಕೆ

owner of farm tied the Shepherd boy to a tree in mandya

Published On - 8:53 am, Mon, 28 June 21