ಬೆಂಗಳೂರು ಗ್ಯಾರೇಜ್ ಬೆಂಕಿ ಆಕಸ್ಮಿಕ; ಸಂಪೂರ್ಣವಾಗಿ ಸುಟ್ಟುಹೋಗಿರುವ ಬಸ್ ಮಾಲೀಕನಿಗೆ ಆಗಿರುವ ನಷ್ಟವೆಷ್ಟು ಗೊತ್ತಾ?

|

Updated on: Oct 30, 2023 | 3:28 PM

ಗ್ಯಾರೇಜ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರದ ಸಹೋದರು, ಗ್ಯಾರೇಜ್ ಮಾಲೀಕನಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಗ್ಯಾರೇಜಿನ ವಾಚ್ ಮನ್ ಫೋನ್ ಮಾಡಿದಾಗ ವಿಷಯ ಗೊತ್ತಾಗಿ ಇಲ್ಲಿಗೆ ಧಾವಿಸಿದ್ದು ಎಂದು ಹೇಳುವ ಸದಾಕತ್, ತಮಗೆ ಕನಿಷ್ಟ 65 ಲಕ್ಷ ನಷ್ಟವಾಗಿದೆ ಎನ್ನುತ್ತಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಜನ ಬೆಂಕಿಯೂರು ಅಂತ ಕರೆಯಲಾರಂಭಿಸಿದರೆ ಆಶ್ಚರ್ಯವಿಲ್ಲ. ಅತ್ತಿಬೆಲೆ ಪಟಾಕಿ ದುರಂತದ (Attibele Firecracker Tragedy) ಬಳಿಕ ಕಳೆದೊಂದು ತಿಂಗಳಲ್ಲಿ 5-6 ಬೆಂಕಿ ಅವಗಢಗಳು ಜರುಗಿವೆ. ಇವತ್ತು ಹೊಸಕೆರೆ ಹಳ್ಳಿಯ ವೀರಭದ್ರ ನಗರದಲ್ಲಿರುವ (Veerabhadranagar) ಗ್ಯಾರೇಜೊಂದರಲ್ಲಿ ಬೆಂಕಿ ಆಕಸ್ಮಿಕ ನಡೆದು ರಿಪೇರಿಗೆಂದು ಬಂದಿದ್ದ ಸುಮಾರು 30 ಖಾಸಗಿ ಬಸ್ ಗಳು ಅಗ್ನಿಗಾಹುತಿಯಾಗುವೆ. ನಿದಾ ಟ್ರಾವೆಲ್ಸ್ (Nida Travels) ಸಂಸ್ಥೆಯ ಬಸ್ಸೊಂದನ್ನ ಸುಮಾರು 6 ತಿಂಗಳ ಹಿಂದೆ ದುರಸ್ತಿಗೋಸ್ಕರ ತಂದು ಬಿಡಲಾಗಿತ್ತು ಮತ್ತು ಅದು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಸಂಸ್ಥೆಯ ಮಾಲೀಕ ಸದಾಕತ್ ಪಾಶ ಮತ್ತು ಅವರ ಸಹೋದರ ಹೇಳುತ್ತಾರೆ. ಗ್ಯಾರೇಜ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರದ ಸಹೋದರು, ಗ್ಯಾರೇಜ್ ಮಾಲೀಕನಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಗ್ಯಾರೇಜಿನ ವಾಚ್ ಮನ್ ಫೋನ್ ಮಾಡಿದಾಗ ವಿಷಯ ಗೊತ್ತಾಗಿ ಇಲ್ಲಿಗೆ ಧಾವಿಸಿದ್ದು ಎಂದು ಹೇಳುವ ಸದಾಕತ್, ತಮಗೆ ಕನಿಷ್ಟ 65 ಲಕ್ಷ ನಷ್ಟವಾಗಿದೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ