Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ

ಯೂರಿಯಾ ಮಿಶ್ರಿತ ನೀರನ್ನು ಕುಡಿದ 4 ಎತ್ತುಗಳು, ಒಂದು ಜಿಂಕೆ ಸಾವನ್ನಪ್ಪಿದೆ. ಮಾನವರ ಈ ಕೆಲಸಕ್ಕೆ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ
ಯೂರಿಯಾ ಮಿಶ್ರಿತ ನೀರು
Follow us
TV9 Web
| Updated By: ganapathi bhat

Updated on:Apr 05, 2022 | 1:07 PM

ರಾಮನಗರ: ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು ಹಾಗೂ ಒಂದು ಜಿಂಕೆ ಸಾವನ್ನಪ್ಪಿದ ದಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಆಳುಕುಳಿ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಡು ಪ್ರಾಣಿ ಬೇಟೆಯಾಡಲು ನೀರಿಗೆ ಯೂರಿಯಾ ಮಿಶ್ರಣ ಮಾಡಲಾಗಿತ್ತು. ಕಿಡಿಗೇಡಿಗಳು ನೀರಿಗೆ ಯೂರಿಯಾ ಮಿಕ್ಸ್ ಮಾಡಿದ್ದರು. ಯೂರಿಯಾ ಮಿಶ್ರಿತ ನೀರನ್ನು ಕುಡಿದ 4 ಎತ್ತುಗಳು, ಒಂದು ಜಿಂಕೆ ಸಾವನ್ನಪ್ಪಿದೆ. ಮಾನವರ ಈ ಕೆಲಸಕ್ಕೆ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಮೂಕಪ್ರಾಣಿಗಳ ಸಾವು ಇದೇ ಮೊದಲೇನಲ್ಲ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ತಮ್ಮದಲ್ಲದ ತಪ್ಪಿಗೆ ಪ್ರಾಣಿಗಳು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಚಿರತೆಯೊಂದು ಮರದ ಮೇಲೆ ಹಾರು ಬೆಕ್ಕೊಂದನ್ನು ಹಿಡಿಯಲು ಜಿಗಿದ ವೇಳೆ ವಿದ್ಯುತ್ ತಂತಿ ತಾಗಿ ಚಿರತೆ ಮತ್ತು ಹಾರುಬೆಕ್ಕು ಎರಡೂ ಪ್ರಾಣಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್​ಗೆ ಸೇರಿದ ಶೇವಾಳಿ ಬಳಿ ನಡೆದಿತ್ತು. ಗುಂದ ಅರಣ್ಯ ಇಲಾಖೆಯ ತಮ್ಮಣಗಿ ಶಾಖೆಯ ಶೇವಾಳಿಯಲ್ಲಿ ಹಾರು ಬೆಕ್ಕನ್ನು ಬೇಟೆಯಾಡುವಾಗ ಚಿರತೆ ಮರದಿಂದ ಮರಕ್ಕೆ ಹಾರಿದ್ದು, ವಿದ್ಯುತ್ ತಂತಿ ತಾಗಿ ಸಾವಿಗೀಡಾಗಿತ್ತು.

ಸಿಡಿಮದ್ದಿನ ಆಹಾರ ಸೇವಿಸಿದಾಗ ಅದು ಸ್ಪೋಟಗೊಂಡು ಹಸು ಸಾವನ್ನಪ್ಪಿದ ದಾರುಣ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದಲ್ಲಿ ನಡೆದಿತ್ತು. ರೈತ ನರಸಿಂಹೇಗೌಡರಿಗೆ ಸೇರಿದ ಹಸು, ಸಿಡಿಮದ್ದು ಇರಿಸಿದ್ದ ಅರಿವಿಲ್ಲದೇ ಆಹಾರ ಸೇವಿಸಿತ್ತು. ಕಾಡು ಪ್ರಾಣಿಗಳ ಬೇಟೆಗೆ ಕಿಡಿಗೇಡಿಗಳು ಇರಿಸಿದ್ದ ಆಹಾರ ಸೇವಿಸಿದಾಗ ಸ್ಪೋಟ ಉಂಟಾಗಿತ್ತು.

ಇದನ್ನೂ ಓದಿ: ಗದಗ್ ನ ಕಿರು ಮೃಗಾಲಯಕ್ಕೆ ಹೊಸ ಅತಿಥಿಗಳ ಎಂಟ್ರಿ-ಝೂನ ಮೆರಗು ಹೆಚ್ಚಿಸಿದ ಸಿಂಹಗಳು-ಪ್ರಾಣಿಪ್ರಿಯರು, ಮಕ್ಕಳು ದಿಲ್ ಖುಷ್

ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಬಂತು ಶವರ್​: ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

Published On - 7:29 pm, Sun, 28 March 21