ಚಾಮರಾಜನಗರದಲ್ಲುಂಟಾದ ಪರಿಸ್ಥಿತಿ ಬೆಂಗಳೂರಿಗೂ ಬರಲಿದೆ: ಆತಂಕಕಾರಿ ಮಾಹಿತಿಯನ್ನೊಂದು ಬಿಚ್ಚಿಟ್ಟ ಫನಾ ಅಧ್ಯಕ್ಷ

| Updated By: ಡಾ. ಭಾಸ್ಕರ ಹೆಗಡೆ

Updated on: May 03, 2021 | 5:30 PM

ಬೆಂಗಳೂರಿನ ಎರಡು-ಮೂರು ಆಸ್ಪತ್ರೆಗಳು, ಚಿತ್ರದುರ್ಗ ಹಾಗೂ ಕಲಬುರ್ಗಿಯ ಒಂದೊಂದು ಆಸ್ಪತ್ರೆಗಳು ತಮ್ಮಲ್ಲಿ ಆಕ್ಸಿಜನ್​ ಖಾಲಿ ಆಗಿವೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿವೆ.

ಚಾಮರಾಜನಗರದಲ್ಲುಂಟಾದ ಪರಿಸ್ಥಿತಿ ಬೆಂಗಳೂರಿಗೂ ಬರಲಿದೆ: ಆತಂಕಕಾರಿ ಮಾಹಿತಿಯನ್ನೊಂದು ಬಿಚ್ಚಿಟ್ಟ ಫನಾ ಅಧ್ಯಕ್ಷ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಚಾಮರಾಜನಗರದಲ್ಲಿ 24 ಗಂಟೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದಾರೆ. ಅವರು ಮೃತಪಟ್ಟಿದ್ದು ಆಕ್ಸಿಜನ್​ ಕೊರತೆಯಿಂದ ಎಂದು ಹೇಳಲಾಗಿದ್ದರೂ, ಆಮ್ಲಜನಕವಿಲ್ಲದೆ ಮೃತಪಟ್ಟಿದ್ದು ಮೂರೇ ರೋಗಿಗಳು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ಚಾಮರಾಜನಗರದ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದ್ದು, ಆತಂಕವನ್ನೂ ಸೃಷ್ಟಿಸಿದೆ. ಈ ಮಧ್ಯೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಒಕ್ಕೂಟದ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಇನ್ನೊಂದು ಆತಂಕಕಾರಿ ಮಾಹಿತಿಯನ್ನು ನೀಡಿದ್ದಾರೆ.

ಚಾಮರಾಜನಗರಕ್ಕೆ ಉಂಟಾದ ಪರಿಸ್ಥಿತಿ ಬೆಂಗಳೂರಿಗೂ ಬರಲಿದೆ. ಯಾಕೆಂದರೆ ಬೆಂಗಳೂರಿಗೆ ಪ್ರತಿದಿನ 300 ಮೆಟ್ರಿಕ್​ ಟನ್​ಗಳಷ್ಟು ಆಮ್ಲಜನಕ ಬೇಕು. ಆದರೆ ಅರ್ಧದಷ್ಟು ಅಂದರೆ, 150 ಮೆಟ್ರಿಕ್​ ಟನ್​ಗಳಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಹೀಗಾದರೆ ತುಂಬ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಡಾ. ಪ್ರಸನ್ನ ಹೇಳಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಇರುವ ಆಕ್ಸಿಜನ್​ ಕೊರತೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸುತ್ತಲೇ ಇದ್ದೇವೆ. ಪತ್ರವನ್ನೂ ಬರೆದಿದ್ದೇವೆ. ಇನ್ನೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದೂ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಕ್ಸಿಜನ್​ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಲೇ ಇದೆ. ಆದರೆ ಚಾಮರಾಜನಗರದ ಘಟನೆ ರಾಜ್ಯಾದ್ಯಂತ ಭಯಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಎರಡು-ಮೂರು ಆಸ್ಪತ್ರೆಗಳು, ಚಿತ್ರದುರ್ಗ ಹಾಗೂ ಕಲಬುರ್ಗಿಯ ಒಂದೊಂದು ಆಸ್ಪತ್ರೆಗಳು ತಮ್ಮಲ್ಲಿ ಆಕ್ಸಿಜನ್​ ಖಾಲಿ ಆಗಿವೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿವೆ. ಕೊವಿಡ್ ಸೋಂಕು ಉಲ್ಬಣಗೊಂಡ ಕಾರಣಕ್ಕೆ ಹೀಗೆ ಆಕ್ಸಿಜನ್, ಬೆಡ್, ಐಸಿಯು ಬೆಡ್​ಗಳ ಕೊರತೆ ಎದುರಾಗಿದೆ. ಆದರೆ ಒಂದು ನೈಜ ಚಿತ್ರಣ ಸಿಗದೆ ಜನರು ಕಂಗಾಲಾಗುವಂತಾಗಿದೆ.

ಇದನ್ನೂ ಓದಿ: ಚಾಮರಾಜನಗರ ದುರ್ಘಟನೆಗೆ ರಾಜ್ಯ ಸರ್ಕಾರವೇ ಹೊಣೆ, ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ; ಸಿದ್ದರಾಮಯ್ಯ

ಫರ್ನಾಜ್​ ಶೆಟ್ಟಿ ಜೊತೆ ಬೋಲ್ಡ್​ ಪೋಸ್ಟರ್​ನಿಂದ ಗಮನ ಸೆಳೆದ ನಟ ವರುಣ್​ ಸಂದೇಶ್

Published On - 5:26 pm, Mon, 3 May 21