ಫರ್ನಾಜ್ ಶೆಟ್ಟಿ ಜೊತೆ ಬೋಲ್ಡ್ ಪೋಸ್ಟರ್ನಿಂದ ಗಮನ ಸೆಳೆದ ನಟ ವರುಣ್ ಸಂದೇಶ್
Induvadana First Look Poster: ವರುಣ್ ಸಂದೇಶ್ ಮಾಡಿರುವ ಹೊಸ ಸಿನಿಮಾ ಹೆಸರು ‘ಇಂದುವದನ’. ಸೋಮವಾರ (ಮೇ 3) ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದನ್ನು ಕಂಡು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

ಟಾಲಿವುಡ್ ನಟ ವರುಣ್ ಸಂದೇಶ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಅವರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಸಿನಿಪ್ರಿಯರಿಗೆ ಹೆಚ್ಚಿನ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಈಗ ಅವರೊಂದು ಹೊಸ ಸಿನಿಮಾ ಮಾಡುತ್ತಿದ್ದು, ಆ ಚಿತ್ರದ ಪೋಸ್ಟರ್ ಮೂಲಕ ಇಡೀ ಟಾಲಿವುಡ್ ಮಂದಿಯ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂಬುದು ವಿಶೇಷ. ಇಂಟರ್ನೆಟ್ನಲ್ಲಿ ಫಸ್ಟ್ಲುಕ್ ಪೋಸ್ಟರ್ ವೈರಲ್ ಆಗುತ್ತಿದೆ.
ಹ್ಯಾಪಿಡೇಸ್ ಸಿನಿಮಾದಿಂದ ಗುರುತಿಸಿಕೊಂಡಿದ್ದ ವರುಣ್ ಸಂದೇಶ್ ಅವರು ಆ ಬಳಿಕ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಒಂದರ್ಥದಲ್ಲಿ ಕಾಣೆಯಾದರು ಎಂದೇ ಹೇಳಬೇಕು. ಅದಕ್ಕಾಗಿ ಸ್ವತಃ ಅವರು ಎರಡು ದಿನಗಳ ಹಿಂದೆ ಎಂದು ವಿಡಿಯೋ ಮಾಡಿದ್ದರು. ಅದಕ್ಕೆ Where is Varun Sandesh? ಎಂದು ಕ್ಯಾಪ್ಷನ್ ನೀಡಿದ್ದರು. ಅಲ್ಲದೆ, ಹೊಸ ಸಿನಿಮಾ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು.
ವರುಣ್ ಸಂದೇಶ್ ಮಾಡಿರುವ ಹೊಸ ಸಿನಿಮಾ ಹೆಸರು ‘ಇಂದುವದನ’. ಸೋಮವಾರ (ಮೇ 3) ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದನ್ನು ಕಂಡು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಬೋಲ್ಡ್ ಆಗಿದೆ ಈ ಪೋಸ್ಟರ್. ಈ ಸಿನಿಮಾದಲ್ಲಿ ವರುಣ್ ಸಂದೇಶ್ಗೆ ಜೋಡಿಯಾಗಿ ಹಿಂದಿ ಕಿರುತೆರೆ ನಟಿ ಫರ್ನಾಜ್ ಶೆಟ್ಟಿ ಅಭಿನಯಿಸಿದ್ದಾರೆ. ಈ ಪೋಸ್ಟರ್ನಲ್ಲಿ ವರುಣ್ ಸಂದೇಶ್ ಮತ್ತು ಫರ್ನಾಜ್ ಶೆಟ್ಟಿ ತಬ್ಬಿಕೊಂಡಿರುವ ದೃಶ್ಯ ಇದೆ. ಈ ರೊಮ್ಯಾಂಟಿಕ್ ಪೋಸ್ಟರ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
View this post on Instagram
ವರುಣ್ ಸಂದೇಶ್ ಶರ್ಟ್ಲೆಸ್ ಆಗಿ ಕಾಣಿಸಿದ್ದಾರೆ. ಫರ್ನಾಜ್ ಶೆಟ್ಟಿ ಕೂಡ ತುಸು ಜಾಸ್ತಿ ಎಂಬಷ್ಟು ಗ್ಲಾಮರಸ್ ಆಗಿ ಪೋಸ್ ನೀಡಿದ್ದಾರೆ. ಪೋಸ್ಟರ್ ನೋಡಿದರೆ ಇದೊಂದು ಉತ್ಕಟ ಪ್ರೇಮಕಥೆ ಇರುವ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ನಿರ್ದೇಶಕ ಎಂಎಸ್ಆರ್ ಇದಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ವರುಣ್ ಸಂದೇಶ್ ಮತ್ತು ಫರ್ನಾಜ್ ಶೆಟ್ಟಿ ಪುರಾತನ ಕಾಲದ ಕಾಸ್ಟ್ಯೂಮ್ ಧರಿಸಿದ್ದು, ಈ ಸಿನಿಮಾದಲ್ಲಿ ಯಾವ ಕಾಲಘಟ್ಟದ ಕಥೆ ಇರಲಿದೆ ಎಂಬ ಕೌತುಕ ಕೂಡ ಸಿನಿಪ್ರಿಯರಲ್ಲಿ ಮೂಡಿದೆ.
ಇದನ್ನೂ ಓದಿ:
ನಟಿ ಜಾಕ್ವಲಿನ್ ಫರ್ನಾಂಡಿಸ್ ಟಾಪ್ಲೆಸ್ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್




