ಬೆಂಗಳೂರು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಹೋಟೆಲ್ ಕ್ವಾರಂಟೈನ್ನಲ್ಲಿರುವ ಪಾದರಾಯನಪುರದ ಸೆಕೆಂಡರಿ ಕಾಂಟ್ಯಾಕ್ಟ್ಗಳು ಹೋಟೆಲ್ ಕ್ವಾರಂಟೈನ್ನಿಂದ ಹಜ್ ಭವನಕ್ಕೆ ಶಿಫ್ಟ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಪಾದರಾಯನಪುರದ 58 ಸೆಕೆಂಡರಿ ಕಾಂಟ್ಯಾಕ್ಟ್ಗಳು ನಮಗೆ ಹೋಟೆಲ್ ಬೇಡ ಹಜ್‌ಭವನಕ್ಕೆ ಶಿಫ್ಟ್ ಮಾಡಿ ಎಂದು ಶಾಸಕ ಜಮೀರ್ ಅಹ್ಮದ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಹೋಟೆಲ್ ಕ್ವಾರಂಟೈನ್ನಲ್ಲಿರುವವರನ್ನು ಜಮೀರ್ ಅಹ್ಮದ್ ಭೇಟಿಯಾಗಿದ್ದರು ಈ ವೇಳೆ ಈ ರೀತಿಯ ಬೇಡಿಕೆಯನ್ನಿಟ್ಟಿದ್ದಾರೆ. ಈ ಬೇಡಿಕೆಯ ಕುರಿತು ಆಲೋಚನೆ ಮಾಡುವಂತೆ ಅಧಿಕಾರಿಗಳಿಗೆ ಜಮೀರ್ ಸೂಚನೆ ನೀಡಿದ್ದಾರೆ.
ಇವರಿಗೆ ವೆಜ್ ಊಟ ಬೇಡ್ವಂತೆ.. ನಾನ್ವೆಜ್ ಊಟವೇ ಬೇಕಂತೆ..!
ಕ್ವಾರಂಟೈನ್ನಲ್ಲಿರುವವರೆಗೂ ಕೇವಲ ಸಸ್ಯಾಹಾರಿ ಊಟ ಮಾತ್ರ ಸಿಗುತ್ತದೆ. ಆದರೆ ಪಾದರಾಯನಪುರದ ಶಂಕಿತರು ಮಾಂಸಹಾರಿ ಪ್ರಿಯರು ಅವರಿಗೆ ಬಿರಿಯಾನಿನೇ ಬೇಕಂತೆ. ಹೀಗಾಗಿ ಹಜ್‌ಭವನಕ್ಕೆ ಸ್ಥಳಾಂತರಿಸಿದರೆ ಅಲ್ಲಿ ಬೇಕಾದ ಊಟ ಸಿಗುತ್ತದೆ. ಹೋಟೆಲ್ ಕ್ವಾರಂಟೈನ್ನಲ್ಲಿ ಸ್ವಾತಂತ್ರ್ಯವಿಲ್ಲ. ಹಜ್‌ಭವನದಲ್ಲಿ ತಮ್ಮದೇ ಸಮುದಾಯದ ಜನ ಇರ್ತಾರೆ. ಹೀಗಾಗಿ ಹೋಟೆಲ್ನಿಂದ ಹಜ್‌ಭವನಕ್ಕೆ ಶಿಫ್ಟ್ ಆಗಲು ಶಂಕಿತರು ನೌಟಂಕಿ ಆಟ ಶುರು ಮಾಡಿಕೊಂಡಿದ್ದಾರೆ.
Published On - 9:15 am, Wed, 22 April 20