ಬುಡಕಟ್ಟು ಸಮುದಾಯವನ್ನು ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿಸುವಂತೆ ಪದ್ಮಶ್ರೀ ಪುರಸ್ಕೃತ ಪರಿಸರವಾದಿ, ವೃಕ್ಷಮಾತೆ ಎಂದೇ ಹೆಸರಾಗಿರುವ ತುಳಸಿ ಗೌಡ ಇಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ, ರಾಷ್ಟ್ರಪತಿ ರಾಮನಾಥ ಕೋವಿಂದ್ರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ದೆಹಲಿಯಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, ನಮ್ಮ ಬುಡಕಟ್ಟು ಸಮುದಾಯವನ್ನು ಎಸ್ಸಿ/ಎಸ್ಟಿಗೆ ಸೇರಿಸಬೇಕು ಎಂದು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಈಡೇರಿಸಿದರೆ ನಮಗೆ ತುಂಬ ಖುಷಿಯಾಗುತ್ತದೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಶಸ್ತಿ ಪಡೆದಿದ್ದು ಖುಷಿಯಾಗಿದೆ. ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಮಾತನಾಡಿಸಲು ಬಂದರು. ನಾನು ಗಿಡ ಬೆಳೆಸಿದ್ದೇನೆ ಎಂದು ಪ್ರಧಾನಿ ಮೋದಿಗೆ ಹೇಳಿದೆ. ಆದರೆ ಅವರಿಗೆ ಅರ್ಥ ಆಗಲಿಲ್ಲ. ನಾನು ಕೈಸನ್ನೆ ಮೂಲಕ ತಿಳಿಸಿದೆ. ನಾನು 15-20 ಲಕ್ಷ ಮರಗಳನ್ನು ಬೆಳೆಸಿದ್ದೇನೆ. ಯಾರೂ ಮರ ಕಡಿಯಬಾರದು. ಅಕೇಶಿಯಾ ಮರಗಳನ್ನು ಬೇಕಾದರೆ ಕಡಿದುಕೊಳ್ಳಲಿ. ಆದರೆ ಬೇರೆ ಮರಗಳನ್ನು ಕಡಿಯಬಾರದು. ನಾವು ಮರ ಬೆಳೆಸುವುದು, ಬೇರೆಯವರು ಕಡಿಯುವುದಾ? ಎಂದು ಹೇಳಿದರು.
ತುಳಸಿ ಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದವರು. ಇವರು ಹಾಲಕ್ಕಿ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಾಲುಮರದ ತಿಮ್ಮಕ್ಕನವರಂತೆ ಇವರೂ ಕೂಡ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕದಲ್ಲಿ ತೊಡಗಿರುವ ಇವರಿಗೆ ಈಗ 77 ವರ್ಷ. ಅವರ ಈ ಪರಿಸರ ಪ್ರೇಮ ಮತ್ತು ಅದರ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
President Kovind presents Padma Shri to Smt Tulsi Gowda for Social Work. She is an environmentalist from Karnataka who has planted more than 30,000 saplings and has been involved in environmental conservation activities for the past six decades. pic.twitter.com/uWZWPld6MV
— President of India (@rashtrapatibhvn) November 8, 2021
ಇದನ್ನೂ ಓದಿ: ಮತ್ತೆ ಬೋಲ್ಡ್ ಅವತಾರ ತಾಳಿದ ರಚಿತಾ ರಾಮ್; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು
Published On - 9:21 pm, Mon, 8 November 21