ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಷಿಸಿ ಮೃತಪಟ್ಟಿದ್ದರು.

ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು
ರಚಿತಾ ರಾಮ್​-ಅಜಯ್​ ರಾವ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 08, 2021 | 8:53 PM

ನಟಿ ರಚಿತಾ ರಾಮ್​ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್​ ಅವರು ಹಾಟ್​ ಅವತಾರ ತಾಳಿದ್ದಾರೆ. ಶೂಟಿಂಗ್​ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್​ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅವರ ಹಾಟ್​ ಅವತಾರ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಜಯ್​ ರಾವ್​ ಜತೆ ತುಂಬಾನೇ ಇಂಟಿಮೇಟ್​ ಆಗಿ ಅವರ ಕಾಂಬಿನೇಷನ್​ ಮೂಡಿ ಬಂದಿದೆ. ಈ ಫೋಟೋ ಸಿನಿಮಾಗೆ ಒಳ್ಳೆಯ ಮೈಲೇಜ್​ ನೀಡುವ ಸಾಧ್ಯತೆ ಇದೆ.

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಸಿನಿಮಾ ಪೋಸ್ಟರ್​ ಮೂಲಕ ಸದ್ದು ಮಾಡುತ್ತಿದೆ.

ಮಂಗಳವಾರ (ನವೆಂಬರ್​ 9) ಸಿನಿಮಾದ ವಿಡಿಯೋ ಸಾಂಗ್​ ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲೇ ಚಿತ್ರತಂಡ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಕುತೂಹಲ ಹುಟ್ಟು ಹಾಕುವ ಕೆಲಸ ಮಾಡಿದೆ ಚಿತ್ರತಂಡ. ಈ ಪೋಸ್ಟರ್​ ನೋಡಿ ಪಡ್ಡೆ ಹುಡುಗರು ಫುಲ್​ ಖುಷ್​ ಆಗಿದ್ದಾರೆ. ಇನ್ನು, ವಿಡಿಯೋ ಸಾಂಗ್​ ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿದೆ.

ಇತ್ತೀಚೆಗೆ ರಚಿತಾ ರಾಮ್​ ಪುನೀತ್​ ಅಂತಿಮ ದರ್ಶನದ ವೇಳೆ ಕಾಣಿಸಿಕೊಂಡಿದ್ದರು. ‘ಪುನೀತ್​ ಜೊತೆ ನಟಿಸಲು ನಾನು ಪುಣ್ಯ ಮಾಡಿದ್ದೆ. ಅದು ನಮ್ಮ ತಾಯಯ ಆಸೆ ಆಗಿತ್ತು. ಅದಕ್ಕಾಗಿ ದೇವರಿಗೆ ನಾನು ಧನ್ಯವಾದ ಹೇಳಬೇಕು. ಗುರುಕಿರಣ್​ ಅವರ ಬರ್ತ್​ಡೇ ಪಾರ್ಟಿಯಲ್ಲಿ ಪುನೀತ್​ ಸಿಕ್ಕಿದ್ದರು. ರಾತ್ರಿ ಅವರು ಪಾರ್ಟಿ ಮುಗಿಸಿ ಹೊರಟಾಗ ಹುಷಾರು ಅಂತ ಹೇಳಿದ್ದೆ. ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬ ಸಂಕಟ ಆಗುತ್ತಿದೆ. ಕೈ ನಡುಗುತ್ತಿದೆ’ ಎಂದು ರಚಿತಾ ಕಣ್ಣೀರು ಸುರಿಸಿದ್ದರು.

ಇದನ್ನೂ ಓದಿ: ‘ತುಂಬ ಸಂಕಟ ಆಗ್ತಿದೆ, ಕೈ ನಡುಗುತ್ತಿದೆ’; ಪುನೀತ್​ ಬಗ್ಗೆ ಮಾತಾಡುತ್ತ ಮೌನ ತಾಳಿದ ರಚಿತಾ ರಾಮ್​

Published On - 8:38 pm, Mon, 8 November 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್