ಬೆಂಗಳೂರು: ಕೋವಿಡ್ ಬರೋಕೆ ಈ ಕ್ಷೇತ್ರದ ಶಾಸಕ ಆರ್ ಅಶೋಕ ಕಾರಣ ಎಂದು ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ. ನಾವು ಕಂಡು, ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ.. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಕೋವಿಡ್ ಬರೋಕೆ ಈ ಕ್ಷೇತ್ರದ (ಪದ್ಮನಾಭ ನಗರ -Padmanabhanagar) ಆರ್ ಅಶೋಕ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಾರ್ಹವಾಗಿ ಟೀಕಿಸಿದ್ದಾರೆ.
ಅವರು (ಆರ್ ಅಶೋಕ- r ashok) ಸಿಎಂ ಆಗದೆ ಇರಬಹುದು.. ಆದ್ರೆ ಕಂದಾಯ ಸಚಿವರಾಗಿದ್ದರಲ್ಲ. ಅಶೋಕ ಅವರನ್ನು ಅನೇಕ ಭಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈದಾನ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು:
ಪದ್ಮನಾಭನಗರದಲ್ಲಿ ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ! ಈ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಇದು ಪಬ್ಲಿಕ್ ಪ್ರಾಪರ್ಟಿ. ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು ಎಂದು ಕಟಕಿಯಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ.. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರಿಗಳನ್ನೂ ಎಚ್ಚರಿಸಿದರು.
ನಿಮ್ಮ ದಮ್ಮಯಾ ಅಂತಿನಿ ಈ ಬಾರಿ ಅಶೋಕ್ನನ್ನು ಗೆಲ್ಲಿಸಬೇಡಿ:
ಪದ್ಮನಾಭ ನಗರದಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಅಶೋಕ್ ಅವರನ್ನು ಆರು ಭಾರಿ ಗೆಲ್ಲಿಸಿದ್ದೀರಿ. ನಿಮ್ಮ ದಮ್ಮಯಾ ಅಂತಿನಿ ಈ ಭಾರಿ ಬದಲಾವಣೆ ಮಾಡಿ. ಇದೊಂದು ಸಾರಿ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನರಲ್ಲಿ ಕೋರಿದರು. ಅದಕ್ಕೆ ಒಳ್ಳೆಯ ಕ್ಯಾಂಡಿಡೇಟ್ ಬೇಕು ಎಂದು ಕಾರ್ಯಕರ್ತರು ಮಾರುತ್ತರ ನೀಡಿದರು. ಅದಕ್ಕೆ ಒಳ್ಳೆಯ ಕ್ಯಾಂಡಿಡೇಟ್ ಕೊಡ್ತೇವೆ ಈ ಸಾರಿ ಎಂದು ಸಿದ್ದರಾಮಯ್ಯ ಹೇಳಿದರು. ಆದರೂ ಕಾರ್ಯಕರ್ತರು ನೀವೇ ಸ್ಪರ್ಧೆ ಮಾಡಿ ಎಂದು ಕೂಗಿದರು. ಆಗ, 224 ಕ್ಷೇತ್ರದಲ್ಲೂ ನಾನೇ ನಿಲ್ಲೋಕೆ ಆಗಲ್ಲ. ನಾನು ಈಗ ಬಾದಾಮಿ ಶಾಸಕ. ಬಾದಾಮಿಯಿಂದ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
(Padmanabhanagar mla r ashok is the cause for coronavirus says siddaramaiah)
Published On - 12:49 pm, Tue, 3 August 21