ಕೊಪ್ಪಳ ಜಿಲ್ಲೆ ಗಂಗಾವತಿ (Gangavathi) ತಾಲೂಕಿನ ಐತಿಹಾಸಿಕ ಹಾಗೂ ರಾಮಾಯಣ ಕಾಲದ ಇತಿಹಾಸ ಸಾರುವ ಪವಿತ್ರ ಪಂಪಾ ಸರೋವರದಲ್ಲಿರುವ (Pampa Sarovar Temple) ವಿಜಯಲಕ್ಷ್ಮಿ ದೇವಸ್ಥಾನದ ಅರ್ಚಕರಾದ ಮಹಾಂತ ರಾಮದಾಸ್ ಬಾಬಾ (95) ಮಂಗಳವಾದ ದೈವಧೀನರಾದರು. ಇವರು (Archak Mahantha Ramadas Baba) ಮೂಲತಃ ಉತ್ತರ ಪ್ರದೇಶ ರಾಜ್ಯದವರಾಗಿದ್ದು, ಸುಮಾರು 50 ವರ್ಷಗಳ ಕಾಲ ಪಂಪಾ ಸರೋವರ ವಿಜಯಲಕ್ಷ್ಮಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಐತಿಹಾಸಿಕ ಪಂಪಾ ಸರೋವರದಲ್ಲಿ ರಾಮನ ಭಕ್ತೆಯಾದ ಶಬರಿ ರಾಮನ ಆಗಮನಕ್ಕಾಗಿ ಕಾದು ಕುಳಿತಿದ್ದಳು ಎಂದು ಹಿಂದೂ ಮಹಾಕಾವ್ಯ ರಾಮಯಣದಲ್ಲಿ ಉಲ್ಲೇಖವಿದೆ.
ಇವರ ಅಸ್ತಂಗತ ವಿಷಯ ತಿಳಿದು ರಾಜವಂಶಸ್ಥ ರಾಜ ರಾಮದೇವರಾಯ, ಹರಿಹರದೇವರಾಯ, ರಾಜವಂಶಸ್ಥೆ ಲಲಿತಾರಾಣಿ, ಅಂಜನಾದ್ರಿ ದೇವಸ್ಥಾನದ ಅರ್ಚಕ ವಿದ್ಯಾ ದಾಸ ಬಾಬ, ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಾನಂದ ಸ್ವಾಮೀಜಿ, ತಹಶೀಲ್ದಾರ ಯು. ನಾಗರಾಜ ಸೇರಿದಂತೆ ಅಂಜನಾದ್ರಿ ಬೆಟ್ಟದ ಆಡಳಿತ ಸಿಬ್ಬಂದಿ ಭೇಟಿ ನೀಡಿದರು.
ಬುಧವಾರ ಬೆಳಗ್ಗೆ 11.30ಕ್ಕೆ ಪಂಪಾ ಸರೋವರ ದೇವಸ್ಥಾನದ ಕಲ್ಯಾಣ ಮಂಟಪದ ಬಳಿ ಇರುವ ಶಾಮಸುಂದರ್ ದಾಸ, ಲಕ್ಷ್ಮಣದಾಸ ಸಮಾಧಿ ಬಳಿ ಮಹಾಂತ ರಾಮದಾಸ್ ಬಾಬ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಿಬ್ಬಂದಿ ತಿಳಿಸಿದೆ.
Published On - 8:34 pm, Tue, 16 August 22