ಉಡುಪಿ: ಸಾವರ್ಕರ್ ಕಟೌಟ್ ವಿವಾದ; ಕಟೌಟ್ ತೆರವುಗೊಳಿಸುವಂತೆ ಪೊಲೀಸರಿಗೆ ಕಾಂಗ್ರೆಸ್ ಪನವಿ
ಉಡುಪಿಯ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಕಟೌಟ್ ತೆರವುಗೊಳಿಸುವಂತೆ ಮತ್ತು ಕಟೌಟ್ ಹಾಕಲು ಅವಕಾಶ ಕೊಡಬೇಡಿ ಎಂದು ಕಾಂಗ್ರೆಸ್ ನಾಯಕರು ಉಡುಪಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಉಡುಪಿ: ಉಡುಪಿಯ (Udupi) ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ (Veer Savarkar) ಕಟೌಟ್ ತೆರವುಗೊಳಿಸುವಂತೆ ಮತ್ತು ಕಟೌಟ್ ಹಾಕಲು ಅವಕಾಶ ಕೊಡಬೇಡಿ ಎಂದು ಕಾಂಗ್ರೆಸ್ (Congress) ನಾಯಕರು ಉಡುಪಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಾವರ್ಕರ್ ಕಟೌಟ್ ಹಾಕಲು ಪ್ರಮೋದ್ ಉಚ್ಚಿಲ್, ಯೋಗೀಶ್, ಶೈಲೇಶ್ ಹೆಸರಿನಲ್ಲಿ ನಗರಸಭೆಯಿಂದ ಪರವಾನಿಗೆ ಪಡೆದಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಶಿವಮೊಗ್ಗ, ಭದ್ರಾವತಿ ನಗರದಲ್ಲಿ ನಾಳೆಯಿಂದ ಶಾಲಾ- ಕಾಲೇಜು ಓಪನ್
ಶಿವಮೊಗ್ಗ: ವೀರ ಸಾವರ್ಕರ್ ಫೋಟೋ ವಿವಾದ ವಿಚಾರವಾಗಿ ಶಿವಮೊಗ್ಗ, ಭದ್ರಾವತಿಯಲ್ಲಿ ಕೋಮು ಗಲಭೆ ನಿಷೇಧಾಜ್ಞೆ ಮುಂದುವರೆದಿದ್ದು, ಆದರೆ ನಗರದಲ್ಲಿ ನಾಳೆಯಿಂದ ಶಾಲಾ-ಕಾಲೇಜುಗಳು ತೆರೆಯಲಿವೆ. ಕೋಮುಗಲಾಟೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಶಾಲಾ- ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಸದ್ಯ ಪರಿಸ್ಥಿತಿ ತಹಬದಿಗೆ ಬಂದ ಹಿನ್ನೆಲೆ ನಾಳೆಯಿಂದ ಪುನಾರಂಭಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಘಟನೆ ಹಿನ್ನೆಲೆ
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಇಡೀ ದೇಶ ಈ ದಿನವನ್ನ ಅವಿಸ್ಮರಣೀಯವಾಗಿ ಆಚರಿಸಿದೆ. ಆದ್ರೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ನಡೆದಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆಗಳಾಗಿವೆ. ಹಾಗೂ ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರಿಗೆ ಚಾಕು ಇರಿದಿದ್ದಾರೆ. ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಸರ್ಕಲ್ ಪಕ್ಕದಲ್ಲೇ ಮುಸ್ಲಿಂ ಸಂಘಟನೆಗಳು ವೇದಿಕೆ ರೆಡಿಮಾಡಿ ಟಿಪ್ಪು ಫೋಟೋ ಹಾಕಿದ್ರು. ವಿಷ್ಯ ಅಂದ್ರೆ ಸರ್ಕಲ್‌ನಲ್ಲಿದ್ದ ಹೈಮಾಸ್ ಲೈಟ್ ಬಳಿ ಹಿಂದೂಪರ ಸಂಘಟನೆಗಳು ವೀರ ಸಾವರ್ಕರ್ ಪ್ಲೆಕ್ಸ್ ಅಳವಡಿಸಿದ್ರು . ಆದ್ರೆ ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ರು . ಕೊನೆಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಮುಸ್ಲಿಂ ಸಂಘಟನೆವರು ಸರ್ಕಲ್‌ನಲ್ಲೇ ಪ್ರತಿಭಟನೆ ಆರಂಭಿಸಿದ್ರು. ಸಾವರ್ಕರ್ ಪ್ಲೆಕ್ಸ್ ತೆರವಿಗೆ ಆಗ್ರಹಿಸಿದ್ರು. ಈ ವೇಳೆ ಕೆಲ ಕಿಡಿಗೇಡಿಗಳು ನೋಡನೋಡ್ತಿದ್ದಂತೆ ಸರ್ಕಲ್ ಒಳಗೆ ನುಗ್ಗಿ ಸಾವರ್ಕರ್ ಪ್ಲೆಕ್ಸ್ ಕಿತ್ತೆಸಿದ್ರು. ಆಗ್ಲೇ ನೋಡಿ ಲಾಠಿಚಾರ್ಜ್ ಶುರುವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದೆ ಅನ್ನೋದು ಗೊತ್ತಾಗ್ತಿದ್ದಂತೆ ಪೊಲೀಸರು ಲಾಠಿಬೀಸಿದ್ರು . ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಬಂದಿದ್ದವರನ್ನ ಚದುರಿಸಿದ್ದರು.
Published On - 8:12 pm, Tue, 16 August 22