ಬೆಂಗಳೂರು: ನಾಳೆ ಪಂಚಮಸಾಲಿ ಸಮುದಾಯದ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ನಗರದ ಫ್ರೀಡಂಪಾರ್ಕ್ನಲ್ಲಿ ಮೊದಲು ಸಮಾವೇಶ ನಡೆಸಿ ನಂತರ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಪಂಚಮಸಾಲಿ ಸಮುದಾಯದ ವಚನಾನಂದಶ್ರೀ ಮಾಹಿತಿ ನೀಡಿದ್ದಾರೆ.
ಫ್ರೀಡಂಪಾರ್ಕ್ನಿಂದ ಮೌರ್ಯ ಸರ್ಕಲ್, ಆರಾಧ್ಯ ಸರ್ಕಲ್ ಮೂಲಕ ರೇಸ್ಕೋರ್ಸ್ ರಸ್ತೆಗೆ ಪಾದಯಾತ್ರೆ ನಡೆಸಲಾಗುವುದು. ರೇಸ್ಕೋರ್ಸ್ ರಸ್ತೆಯಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಚಾಲುಕ್ಯ ವೃತ್ತದಿಂದ ಬಾಲಬ್ರೂಯಿ ಗೆಸ್ಟ್ಹೌಸ್, ಸಿ.ಎಸ್.ಹೌಸ್, ಮಾಡರ್ನ್ ಆರ್ಟ್ ಗ್ಯಾಲರಿ, ಕಲ್ಪನಾ ವೃತ್ತ, ಶಾಂಗ್ರೀಲಾ ಹೋಟೆಲ್ ಹಾಗೂ ಮೌಂಟ್ ಕಾರ್ಮೆಲ್ ಕಾಲೇಜ್, ಅಂಡರ್ ಪಾಸ್, ಬಿಡಿಎ ಜಂಕ್ಷನ್ ಮೂಲಕ ಅರಮನೆ ಮೈದಾನಕ್ಕೆ ಪಾದಯಾತ್ರೆ ಮುಂದುವರಿಸಲಾಗುವುದು. ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಎಲ್ಲರೂ ಭಾಗಿಯಾಗಲಿದ್ದಾರೆ ಎಂದು ವಚನಾನಂದಶ್ರೀ ಮಾಹಿತಿ ನೀಡಿದ್ದಾರೆ.
ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಹೆಚ್ಚು ವಾಹನಗಳು ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ, ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ. ಬೈಕ್, ಕಾರಲ್ಲಿ ಬರುವರಿಗೆ ತ್ರಿಪುರವಾಸಿನಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು VIP ವಾಹನಗಳಿಗೆ ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾರ್ಗ ಬದಲಾವಣೆಯ ವಿವರ ಹೀಗಿದೆ
1)ಮೈಸೂರು ರಸ್ತೆ ಬರುವ ವಾಹನಗಳು ಮಾರ್ಗ – ನಾಯಂಡಹಳ್ಳಿ – ಸುಮನಹಳ್ಳಿ, ರಾಜ್ ಕುಮಾರ್ ಸಮಾಧಿ ರಸ್ತೆ,ತುಮಕೂರು ರಸ್ತೆ – ಗೊರಗುಂಟೆಪಾಳ್ಯ ಜಂಕ್ಷನ್-ಬಿಇಎಲ್ – ಹೆಬ್ಬಾಳ ಮೇಲ್ಸೇತುವೆ- ಮೇಕ್ರಿ ಸರ್ಕಲ್ – ಜಯಮಹಲ್ ರೋಡ್ – ಅರಮನೆ ಮೈದಾನ
2)ತುಮಕೂರು ರೋಡ್ ಕಡೆಯಿಂದ ಬರುವ ಮಾರ್ಗ- ಗೊರಗುಂಟೆ ಪಾಳ್ಯ ಜಂಕ್ಷನ್ – ಬಿಇಎಲ್ – ಹೆಬ್ಬಾಳ – ಮೇಕ್ರಿ ಸರ್ಕಲ್ ಸರ್ವಿಸ್ ರೋಡ್- ಅರಮನೆ ಮೈದಾನ
3) ಕನಕಪುರ ರಸ್ತೆ ಮಾರ್ಗ ಬದಲಾವಣೆ – ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ – ರಾಜಲಕ್ಷ್ಮಿ ಜಂಕ್ಷನ್ ಜಯನಗರ ೪ ಮೈನ್ – ಸೌಥ್ ಅಂಡ್ ಸರ್ಕಲ್ – ಆರ್ ವಿ ಜಂಕ್ಷನ್ – ಲಾಲ್ ಬಾಗ್ ವೆಸ್ಟ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ
4)ಬನ್ನೇರುಘಟ್ಟ ರೋಡ್ ಮಾರ್ಗ – ಡೈರಿ ಸರ್ಕಲ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರಸ್ತೆ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರಸ್ತೆ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರಸ್ತೆ- ಅರಮನೆ ಮೈದಾನ
5) ಹಳೇ ಮದ್ರಾಸ್ ರಸ್ತೆ – ಕೆ ಆರ್ ಪುರಂ ಮೇಲ್ಸೇತುವೆ- ಹೆಣ್ಣೂರು ಕ್ರಾಸ್ – ನಾಗವಾರ- ಹೆಬ್ಬಾಳ ಫ್ಲೈ ಓವರ್ – ಬಳ್ಳಾರಿ ರಸ್ತೆ- ಮೇಕ್ರಿ ಸರ್ಕಲ್ ಸರ್ವಿಸ್ ರೋಡ್ – ಅರಮನೆ ಮೈದಾನ
6) ಹೊಸೂರು ರಸ್ತೆ ಕಡೆಯಿಂದ ಬರುವರಿಗೆ – ಹೊಸೂರ್ ರಸ್ತೆ – ಮಡಿವಾಳ ಚೆಕ್ ಪೋಸ್ಟ್- ಹಳೇ ಮದ್ರಾಸ್- ಡೈರಿ ಸರ್ಕಲ್ ರೋಡ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರಸ್ತೆ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರಸ್ತೆ -ಬಸವೇಶ್ವರ ಸರ್ಕಲ್ – ವಸಂತನಗರ ರಸ್ತೆ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ
7)ಬಳ್ಳಾರಿ ರೋಡ್ ಮಾರ್ಗ – ದೇವನಹಳ್ಳಿ ಮಾರ್ಗ – ಚಿಕ್ಕಜಾಲ – ಹುಣಿಸೇಮಾರನಹಳ್ಳಿ -ಕೋಗಿಲು ಜಂಕ್ಷನ್ – ಕೊಡಿಗೇಹಳ್ಳಿ ಗೇಟ್ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ
8) ದೊಡ್ಡಬಳ್ಳಾಪುರದಿಂದ ಬರುವ ಮಾರ್ಗ – ಮೇಜರ್ ಉನ್ನಿಕೃಷ್ಣನ್ ರಸ್ತೆ – ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ – ಬೈಪಾಸ್ – ಬಳ್ಳಾರಿ ರಸ್ತೆ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ
ಇತ್ತ, ಬೆಂಗಳೂರಿನ ಅರಮನೆ ಮೈದಾನದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
8 ಡಿಸಿಪಿ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದು ಮೈದಾನ, ರಸ್ತೆ ಸೇರಿ ಆಯಾ ಸ್ಥಳದಲ್ಲಿ ಒಬ್ಬೊಬ್ಬರಿಗೆ ನೇತೃತ್ವ ವಹಿಸಲಾಗಿದೆ. ಆಯಾ ಸ್ಥಳಗಳಲ್ಲಿ ಒಬ್ಬೊಬ್ಬ ಡಿಸಿಪಿಗೆ ಭದ್ರತೆಯ ನೇತೃತ್ವ ನೀಡಲಾಗಿದೆ. ಸಂಚಾರ ದಟ್ಟಣೆ ಆಗದಂತೆ ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಾರ್ಗ ಬದಲಾವಣೆಯ 8 ರಸ್ತೆಗಳಲ್ಲಿ ಸಿಬ್ಬಂದಿ ನಿಯೋಜನೆಗೊಂಡಿದ್ದು ಗೊರಗುಂಟೆಪಾಳ್ಯದಿಂದ ಅರಮನೆ ಮೈದಾನದ ಮಾರ್ಗದಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶ: 1 ಲಕ್ಷ ಮಂದಿ ಭಾಗಿ ಸಾಧ್ಯತೆ