ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ.. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಶುರು

|

Updated on: Jan 14, 2021 | 12:14 PM

ಕೂಡಲಸಂಗಮದ ಪಂಚಮಸಾಲಿ ಶ್ರೀಗಳು, ಇಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಬೆಂಗಳೂರುವರೆಗೂ ಹಮ್ಮಿಕೊಂಡಿರೋ ಈ ಪಾದಯಾತ್ರೆಗೆ ಇಂದು ಕೂಡಲಸಂಗಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್​ ನೇತೃತ್ವದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ರಿಂದ ಚಾಲನೆ ಸಿಕ್ಕಿದೆ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ.. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಶುರು
ಪಂಚಮಸಾಲಿ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯಶ್ರೀಗಳು
Follow us on

ಬಾಗಲಕೋಟೆ: ರಾಜ್ಯದಲ್ಲಿ ಪ್ರಮುಖ ಸಮಾಜವಾಗಿರೋ ಲಿಂಗಾಯತ ಪಂಚಮಸಾಲಿ ಸಮಾಜ 2ಎ ಮೀಸಲಾತಿಗಾಗಿ ಹೋರಾಡುತ್ತಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಅಂತಾ ಪಣತೊಟ್ಟಿರೋ ಕೂಡಲಸಂಗಮದ ಪಂಚಮಸಾಲಿ ಶ್ರೀಗಳು, ಇಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದಾರೆ.

ಬೆಂಗಳೂರುವರೆಗೂ ಹಮ್ಮಿಕೊಂಡಿರೋ ಈ ಪಾದಯಾತ್ರೆಗೆ ಇಂದು ಕೂಡಲಸಂಗಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್​ ನೇತೃತ್ವದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ರಿಂದ ಚಾಲನೆ ಸಿಕ್ಕಿದೆ. ಚಾಲನೆ ಬಳಿಕ ಪಾದಯಾತ್ರಿಗಳು ಬಸವಣ್ಣನವರ ಐಕ್ಯಮಂಟಪದ ದರ್ಶನ ಪಡೆಯಲಿದ್ದಾರೆ.

ಸಮುದಾಯದ ಎಲ್ಲ ನಾಯಕರನ್ನ ಮಂತ್ರಿ ಮಾಡಿದ್ರೂ ಹೋರಾಟ ನಿಲ್ಲಲ್ಲ
ಈ ಬಗ್ಗೆ ಮಾತನಾಡಿದ ಪಂಚಮಸಾಲಿ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯಶ್ರೀಗಳು.. ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೂ ಹೋರಾಟ ನಿಲ್ಲಲ್ಲ. ಸಮುದಾಯದ ಎಲ್ಲ ನಾಯಕರನ್ನ ಮಂತ್ರಿ ಮಾಡಿದ್ರೂ ಹೋರಾಟ ನಿಲ್ಲಲ್ಲ. ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಸಚಿವ ನಿರಾಣಿ ಹೇಳಿಕೆಯಿಂದ ನಿನ್ನೆ ಗೊಂದಲವಾಗಿತ್ತು. ಈಗ ಯಾವುದೇ ಗೊಂದಲ ಇಲ್ಲ, ಪಾದಯಾತ್ರೆ ನಡೆಯುತ್ತೆ. ನಮ್ಮ ಸಮುದಾಯಕ್ಕೆ ಸಚಿವ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ. ಸಚಿವ ಮುರುಗೇಶ್ ನಿರಾಣಿ ಅಮಿತ್ ಶಾ ಬಂದಾಗ ಮಾಡಿಸಿ ಮನವರಿಕೆ ಮಾಡಿಸಲಿ ಎಂದು ಹೇಳಿದ್ರು.

ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲಿದೆ. ಪ್ರತಿ ದಿನ 20 ಕಿಲೋ ಮೀಟರ್ ಅಂತೆ ಪಾದಯಾತ್ರೆ ಸಾಗಲಿದ್ದು, ಹುನಗುಂದ , ಇಳಕಲ್, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಆಗಮಿಸಲಿದೆ.

ಪಾದಯಾತ್ರೆ ಬೆಂಗಳೂರಿಗೆ ತಲುಪಿದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಮುತ್ತಿಗೆ ಬಳಿಕವೂ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ನಿರ್ಣಯ ಕೈಗೊಂಡಿದ್ದಾರೆ. ಒಟ್ನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲೇ ಬೇಕು ಅಂತಾ ಪಣತೊಟ್ಟಿರೋ ಶ್ರೀಗಳು ಇಂದಿನಿಂದ ಪಾದಯಾತ್ರೆ ಆರಂಭಿಸುತ್ತಿದ್ದಾರೆ.

ಪಂಚಮಸಾಲಿ ಮೀಸಲಾತಿ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಳಲ್ಲಿ ಮುಂದುವರಿಯುವೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ