ದೆಹಲಿಗೆ ಹೋಗಿ ನಾಯಕರಿಗೆ ದೂರು ನೀಡಿ ಆದ್ರೆ ಇಲ್ಲಿ ಹಗುರವಾಗಿ ಮಾತನಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ -ಸಿಎಂ ಯಡಿಯೂರಪ್ಪ
ಎನಾದ್ರೂ ಅಸಮಾಧಾನ ಇದ್ರೆ ದೆಹಲಿಗೆ ಹೋಗಿ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಿ ಆದ್ರೆ ಇಲ್ಲಿ ಹಗುರವಾಗಿ ಮಾತನಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಏನೇ ಇದ್ದರೂ ಬಿಜೆಪಿ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರವರು ನೇರವಾಗಿ ನುಡಿದಿದ್ದಾರೆ.
ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರೋದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವಾಕಾಂಕ್ಷಿಗಳು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಅಸಮಾಧಾನಿತ ಶಾಸಕರ ವಿರುದ್ಧ ಗುಡುಗಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಶಾಸಕರಿಗೆ ವಿರೋಧವಿದ್ದರೆ ದೆಹಲಿಗೆ ಹೋಗಿ, ನಾಯಕರಿಗೆ ದೂರು ನೀಡಿ ಎಂದು ನೇರ ನುಡಿಯಲ್ಲಿ ಗುಡುಗಿದ್ದಾರೆ. ಎನಾದ್ರೂ ಅಸಮಾಧಾನ ಇದ್ರೆ ದೆಹಲಿಗೆ ಹೋಗಿ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಿ ಆದ್ರೆ ಇಲ್ಲಿ ಹಗುರವಾಗಿ ಮಾತನಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಏನೇ ಇದ್ದರೂ ಬಿಜೆಪಿ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರವರು ನೇರವಾಗಿ ನುಡಿದಿದ್ದಾರೆ.
ಸಂಪುಟ ಸಂಕಟ: ಥರಗುಟ್ಟುವ ಚಳಿಯಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ರೇಣುಕಾಚಾರ್ಯ