ಬಳ್ಳಾರಿ: ಒಂದೇ ದಿನದ ಅಂತರದಲ್ಲಿ ದಂಪತಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಕೊರೊನಾಗೆ ದಂಪತಿ ಮೃತಪಟ್ಟಿದ್ದಾರೆ. ಮಾರೆಪ್ಪ(55) ಉಮಾ(44) ಮೃತ ದಂಪತಿ.
ದಂಪತಿಗೆ ಮೇ 27 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಹೀಗಾಗಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಂಪತಿ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳನ್ನ ಅನಾಥರನ್ನಾಗಿಸಿದ್ದಾರೆ. ತಂದೆ-ತಾಯಿಯನ್ನ ಕಳೆದುಕೊಂಡು ಮಕ್ಕಳು ತಬ್ಬಲಿಗಳಾಗಿದ್ದಾರೆ.
ಒಂದೇ ತಿಂಗಳಲ್ಲಿ ಮಗ ಮತ್ತು ತಾಯಿ ಸಾವು
ಇನ್ನು ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಕೊರೊನಾ ಕಾಟಕ್ಕೆ ಒಂದೇ ತಿಂಗಳಲ್ಲಿ ಮಗ ಮತ್ತು ತಾಯಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಗುಣಮುಖರಾಗಿದ್ದ ತಾಯಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಮಲಾಪುರ ಜಿಲ್ಲಾ ಪಂಚಾಯತ್ ಸದಸ್ಯೆ ಕೂಡ ಆಗಿದ್ದ ಕಮಲಾಬಾಯಿ ಚಿಕ್ಕೆಗೌಡ 65 ಮೃತ ಮಹಿಳೆ.
ಕಮಲಾಬಾಯಿಗೆ ಈ ಹಿಂದೆ ಕೊರೊನಾ ದೃಢವಾಗಿತ್ತು. ಬಳಿಕ ತಾಯಿ ಚಿಕಿತ್ಸೆಗೆ ಓಡಾಡುತ್ತ ಮಗನಿಗೂ ಸೋಂಕು ತಗುಲಿತ್ತು. ಮೇ 11 ರಂದು ಕೊರೊನಾ ಸೋಂಕಿಗೆ ಪುತ್ರ ರಾಜು ಮೃತಪಟ್ಟ. ಆದ್ರೆ ಸೋಂಕಿನಿಂದ ಗುಣಮುಖ ಹೊಂದಿದ್ದ ಕಮಲಾಬಾಯಿ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಅನಾಥವಾಗುತ್ತಿವೆ ಕೊರೊನಾಗೆ ಬಲಿಯಾದ ಶವಗಳು, ಬಿಬಿಎಂಪಿಯಿಂದ 857 ಶವಗಳಿಗೆ ಮುಕ್ತಿ