ಬೆಂಗಳೂರು: ಕೊರೊನಾ ನಿಯಂತ್ರಿಸಲು ಲಾಕ್ಡೌನ್ ವಿಧಿಸುವುದು ಅನಿವಾರ್ಯವಾಗಿತ್ತು. ಆದರೆ ಜಾರಿಯಾದ ಲಾಕ್ಡೌನ್ನಿಂದಾದ ಸಮಸ್ಯೆ ಒಂದೆರೆಡಲ್ಲ. ಅದೆಷ್ಟೋ ಕುಟುಂಬಗಳು ಕೆಲಸವಿಲ್ಲದೆ, ಹಣವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೊರೊನಾ ಮಕ್ಕಳ ಭವಿಷ್ಯಕ್ಕೂ ಕಂಟಕವಾಗಿದೆ. ಶಾಲೆಗಳಲ್ಲಿ ಆಟದ ಜೊತೆಗೆ ಪಾಠ ಕಲಿಯುತ್ತಿದ್ದ ಮಕ್ಕಳು ಮನೆಯಲ್ಲಿ ಒಂದು ಕಡೆ ಕೂತು ಆನ್ಲೈನ್ ತರಗತಿಯನ್ನು ಕೇಳುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಖಾಸಗಿ ಶಾಲೆಗಳು ಮಕ್ಕಳ ಶಾಲಾ ಫೀಸ್ ಕೊಡುವಂತೆ ಒತ್ತಾಯಿಸುತ್ತಿವೆ.
ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಫೀಸ್ ಕೊಡುವಂತೆ ಒತ್ತಾಯ ಹೇರುತ್ತಿದ್ದಾರೆ. ಹೀಗಾಗಿ ಪೋಷಕರು ಮೌನ ಪ್ರತಿಭಟನೆ ಮಾಡಿದರು. ನಗರದ ನಂದಿನಿ ಲೇಔಟ್ನ ಪ್ರೆಸಿಡೆನ್ಸಿ ಶಾಲೆಯಿಂದ ಫೀಸ್ ಟಾರ್ಚರ್ ಮಾಡುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು. ಫೀಸ್ ಕಟ್ಟದ ಮಕ್ಕಳನ್ನು ಖಾಸಗಿ ಶಾಲೆಗಳು ಅನ್ಲೈನ್ ತರಗತಿಯಿಂದ ರಿಮೂವ್ ಮಾಡುತ್ತಿವೆ. ಇದರಿಂದ ಈಗಾಗಲೇ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಮಕ್ಕಳ ಭವಿಷ್ಯಕ್ಕೆ ಇನ್ನಷ್ಟು ಹೊಡೆತ ಬೀಳುತ್ತದೆ.
ಇದನ್ನೂ ಖಂಡಿಸಿ ಪ್ರೆಸಿಡೆನ್ಸಿ ಶಾಲೆಯ ಮುಂದೆ ಮೌನ ಪ್ರತಿಭಟನೆಗೆ ಪೋಷಕರು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಈ ವೇಳೆ ಉಲ್ಟಾ ಹೊಡೆದ ಕೆಲ ಪೋಷಕರು ಫೀಸ್ ಕಟ್ಟಲು ಬಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ
(Parents protested as private schools demanded a fee in Bengaluru)