Karnataka Rain: ಜುಲೈ 1ರಿಂದ ನಾಲ್ಕು ದಿನ ಕರ್ನಾಟಕಾದ್ಯಂತ ಅಧಿಕ ಮಳೆಯ ಮುನ್ಸೂಚನೆ
ಕರ್ನಾಟಕಾದ್ಯಂತ ಜುಲೈ 1 ರಿಂದ ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಹಾಗೂ ಜುಲೈ 1 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ2 ರಿಂದ 4ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರ್ನಾಟಕಾದ್ಯಂತ ಜುಲೈ 1 ರಿಂದ ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಹಾಗೂ ಜುಲೈ 1 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ2 ರಿಂದ 4ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ಚದುರಿದ ಮಳೆ ಬೀಳಲಿದೆ, ಚಿಕ್ಕಮಗಳೂರು, ಹಾಸನ,ಕೊಡಗು, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ, ಬೆಳಗ್ಗೆಯಿಂದಲೇ ಆರಿದ್ರಾ ಮಳೆ ಅಬ್ಬರಿಸುತ್ತಿದೆ. ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಜೋಡುಪಾಲ, ಮದೆನಾಡು, ಸಂಪಾಜೆ ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿದೆ.
ಕಾರ್ಕಳದಲ್ಲಿ 15 ಸೆಂ.ಮೀ, ಕೋಟದಲ್ಲಿ 13 ಸೆಂ.ಮೀ, ಮಂಕಿಯಲ್ಲಿ 12 ಸೆಂ.ಮೀ, ಉಡುಪಿ ಹಾಗೂ ಕುಂದಾಪುರದಲ್ಲಿ ತಲಾ 11 ಸೆಂ.ಮೀ, ಶಿರಾಲಿಯಲ್ಲಿ 10 ಸೆಂ.ಮೀ, ಗೋಕರ್ಣ, ಪಣಂಬೂರಿನಲ್ಲಿ ತಲಾ 9 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ, ಮುಲ್ಕಿ, ಧರ್ಮಸ್ಥಳ, ಕುಮಟಾ, ಸಿದ್ದಾಪುರ, ಬೆಳ್ತಂಗಡಿ, ಮಂಗಳೂರು, ಗೇರುಸೊಪ್ಪ, ಬಸಗೋಡು, ಕಾರವಾರ, ಕೊಟ್ಟಿಗೆಹಾರ, ಶೃಂಗೇರಿಯಲ್ಲಿ ಮಳೆಯಾಗಿದೆ.
ಇನ್ನು ಮಾಣಿ, ಹೊನ್ನಾವರ, ಪುತ್ತೂರು, ಅಂಕೋಲಾ, ಬೇಲಿಕೇರಿ, ಭಾಗಮಂಡಲ, ಜಯಪುರ, ಬಾಳೆಹೊನ್ನೂರು, ಕೋಣಂದೂರು, ಕೊಪ್ಪ, ಲಿಂಗನಮಕ್ಕಿ, ನಾಪೋಕ್ಲು, ಸಕಲೇಶಪುರ, ಬೀದರ್, ಔರಾದ್, ವಿಜಯಪುರ, ಸೈದಾಪುರ, ಹುಂಚದಕಟ್ಟೆ, ಮಂಡಗದ್ದೆ, ಹಾಸನದಲ್ಲಿ ಸಾಧಾರಣ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಎಎಲ್ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 27.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ




