ರಾಜ್ಯದಲ್ಲೂ ಬ್ಯಾನ್ ಆಗುತ್ತಾ ಪತಂಜಲಿ ಉತ್ಪನ್ನಗಳು? ಪರೀಕ್ಷೆ ನಡೆಸುವಂತೆ ಆರೋಗ್ಯ ಸಚಿವ ಸೂಚನೆ
ಬಾಬಾ ರಾಮ್ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಪತಂಜಲಿ ಸಂಸ್ಥೆಯು ಸುಳ್ಳು ಜಾಹೀರಾತು ಮೂಲಕ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಪತಂಜಲಿಯ ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದುಗೊಳಿಸಿ, 14 ಉತ್ಪನ್ನಗಳ ಮಾರಾಟ ಬ್ಯಾನ್ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಪತಂಜಲಿ ಉತ್ಪನ್ನಗಳು ಬ್ಯಾನ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಬೆಂಗಳೂರು, ಏ.30: ಸುಳ್ಳು ಜಾಹೀರಾತು ಮೂಲಕ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಪತಂಜಲಿಯ (Patanjali) ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದುಗೊಳಿಸಿ, 14 ಉತ್ಪನ್ನಗಳ ಮಾರಾಟ ಬ್ಯಾನ್ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಪತಂಜಲಿ ಉತ್ಪನ್ನಗಳು ಬ್ಯಾನ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ಹೌದು, ಈ ಕುರಿತು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಇದೀಗ ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ಮಾಡುವಂತೆ ಆದೇಶಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ತರಕಾಂಡ ಸರ್ಕಾರದ ನಿರ್ಧಾರದ ಬಗ್ಗೆ ಮಾತಾಡಲು ಅಶೋಕ್‌ರವರಿಗೆ ಈಗ ತಾಕತ್ತಿದೆಯೇ?
ಉತ್ತರಕಾಂಡದ ಬಿಜೆಪಿ ಸರ್ಕಾರವೇ ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ. ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ ಆರ್ ಅಶೋಕ, ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಜೊತೆಗೆ ಪತಂಜಲಿ ಸಂಸ್ಥೆ ಮೇಲೆ ದ್ವೇಷ ಯಾಕೆ ಎಂದು ನನ್ನನ್ನು ಪ್ರಶ್ನಿಸಿದ್ದರು. ಈಗ ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಉತ್ತರಕಾಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನೇ ರದ್ದು ಮಾಡಿದೆ. ಈಗ ಅಶೋಕ್‌ರವರು ನನಗೆ ಕೇಳಿದ್ದ ಪ್ರಶ್ನೆಯನ್ನು ಉತ್ತರಕಾಂಡ ಸರ್ಕಾರಕ್ಕೂ ಕೇಳುತ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪತಂಜಲಿ ಸಂಸ್ಥೆಯ 15 ಉತ್ಪನ್ನಗಳ ತಯಾರಿಕೆಗೆ ಲೈಸೆನ್ಸ್ ರದ್ದು ಮಾಡಿದ ಉತ್ತರಾಖಂಡ್ ಸರ್ಕಾರ
ಕೋವಿಡ್ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯು ತಾನು ಬಿಡುಗಡೆ ಮಾಡಿದ ಕೊರೋನಿಲ್ ಮಾತ್ರೆ ಕೊರೊನಾವನ್ನು ಗುಣ ಮಾಡಬಲ್ಲದು ಎಂದು ಹೇಳುವ ಜಾಹೀರಾತು ಸಾಕಷ್ಟು ಬಾರಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲ ಅದರ ಇನ್ನೂ ಅನೇಕ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ಇರುವ ಜಾಹೀರಾತುಗಳನ್ನು ಬಾಬಾ ರಾಮದೇವ್ ಮಾಲಕತ್ವದ ಸಂಸ್ಥೆ ಪ್ರಕಟಿಸಿದೆ. ಇಂತಹ ಜಾಹೀರಾತುಗಳನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದರೂ ಅದು ಪ್ರಕಟವಾಗುವುದು ನಿಂತಿರಲಿಲ್ಲ. ಹೀಗಾಗಿ ಇತ್ತೀಚೆಗೆ ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ವ್ಯಗ್ರಗೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Tue, 30 April 24