ಕೋಲಾರದಲ್ಲಿ ಪವನ್ ಕಲ್ಯಾಣ್, ಮುಗಿಬಿದ್ದ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

|

Updated on: Nov 04, 2019 | 2:38 PM

ಕೋಲಾರ: ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿ ನಡೆದ ಶ್ರೀವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಜನಸ್ತೋಮವೇ ಹರಿದುಬಂದಿತ್ತು. ಪವನ್ ಫ್ಯಾನ್ಸ್ ಕೇಕೆಗೆ ರಮೇಶ್ ಕುಮಾರ್​ ಗರಂ! ಪವನ್ ಕಲ್ಯಾಣ್​ ಹವಾ ಎದುರು ವೇದಿಕೆ ಮೇಲಿದ್ದವರೆಲ್ಲ ಮಂಕಾಗಿಬಿಟ್ರು. ಯಾಕಂದ್ರೆ, ಪವನ್ ಕಲ್ಯಾಣ್ ಬಿಟ್ರೆ ಬೇರೆ ಯಾರನ್ನು ವೇದಿಕೆ ಮೇಲೆ ಮಾತನಾಡೋಕೆ ಅಭಿಮಾನಿಗಳು ಬಿಡ್ಲಿಲ್ಲ. ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಮಾತನಾಡೋಕೆ ಸಾಧ್ಯವಾಗ್ಲಿಲ್ಲ. […]

ಕೋಲಾರದಲ್ಲಿ ಪವನ್ ಕಲ್ಯಾಣ್, ಮುಗಿಬಿದ್ದ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್
Follow us on

ಕೋಲಾರ: ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿ ನಡೆದ ಶ್ರೀವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಜನಸ್ತೋಮವೇ ಹರಿದುಬಂದಿತ್ತು.


ಪವನ್ ಫ್ಯಾನ್ಸ್ ಕೇಕೆಗೆ ರಮೇಶ್ ಕುಮಾರ್​ ಗರಂ!

ಪವನ್ ಕಲ್ಯಾಣ್​ ಹವಾ ಎದುರು ವೇದಿಕೆ ಮೇಲಿದ್ದವರೆಲ್ಲ ಮಂಕಾಗಿಬಿಟ್ರು. ಯಾಕಂದ್ರೆ, ಪವನ್ ಕಲ್ಯಾಣ್ ಬಿಟ್ರೆ ಬೇರೆ ಯಾರನ್ನು ವೇದಿಕೆ ಮೇಲೆ ಮಾತನಾಡೋಕೆ ಅಭಿಮಾನಿಗಳು ಬಿಡ್ಲಿಲ್ಲ. ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಮಾತನಾಡೋಕೆ ಸಾಧ್ಯವಾಗ್ಲಿಲ್ಲ. ಪವನ್ ಫ್ಯಾನ್ಸ್​ ಮೇಲೆ ಗರಂ ಆದ ಸ್ಪೀಕರ್, ತೆಲುಗಿನಲ್ಲೇ ಕಿಡಿಕಾರಿದ್ರು. ಸದ್ದುಮಾಡ್ತಿದ್ದ ಅಭಿಮಾನಿಗಳನ್ನ ಪವನ್ ಕಲ್ಯಾಣ್ ಅವ​ರೇ ತಣ್ಣಗಾಗಿಸಿದರು.

ಪವನ್ ಫ್ಯಾನ್ಸ್ ನಿಯಂತ್ರಿಸಲು ಹೈರಾಣಾದ ಪೊಲೀಸರು:
ಇನ್ನು, ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟವೂ ಏನ್​ ಕಡಿಮೆ ಇರಲಿಲ್ಲ. ಬಂದಂತಹ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸನೇ ಮಾಡಬೇಕಾಯ್ತು. ಈ ವೇಳೆ  ಲಘು ಲಾಠಿ ಚಾರ್ಜ್ ನಡೆಯಿತು. ತೆಲುಗು ನಟನಿಗೆ ಕೈ ಕುಲುಕೋಕೆ ಅಭಿಮಾನಿಯೊಬ್ಬ ವೇದಿಕೆಯತ್ತ ನುಗ್ಗಿದ. ಖಾಕಿ ಭದ್ರತೆಯನ್ನೂ ತಪ್ಪಿಸಿ ಪವನ್​ ಕಲ್ಯಾಣ್ ರತ್ತ ಆಗಮಿಸಿದ. ನಂತರ ಪೊಲೀಸ್ರು ಆತನನ್ನ ಎಳೆದೊಯ್ಯುವಾಗ, ಪವನ್ ಕಲ್ಯಾಣ್ ಅಭಿಮಾನಿಗೆ ಶೇಕ್​​ಹ್ಯಾಂಡ್ ಕೊಟ್ರು. ಹಾಗೇ, ಕನ್ನಡ ರಾಜ್ಯೋತ್ಸವ ಶುಭಾಶಯ ತಿಳಿಸಿದ ಪವನ್ ಕಲ್ಯಾಣ್, ಕನ್ನಡ ಕಲಿಯದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ರು.

 

 

 

 

 

 

Published On - 8:51 pm, Sun, 3 November 19