AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಆರ್​ಬಿಐ ನಿರ್ಧಾರ

ಬೆಂಗಳೂರು: ಹಣ.. ಝಣ ಝಣ ಕಾಂಚಣ.. ಎಟಿಎಂಗೆ ಕಾರ್ಡ್ ಹಾಕಿ ಪಾಸ್​ವರ್ಡ್ ಕೊಟ್ರೆ ಗರಿ ಗರಿ ನೋಟ್.. ಅದೇ ಖುಷಿಯಲ್ಲಿ ಎಣಿಸ್ಕೊಂಡ್ ಜೇಬಿಗಿಟ್ಟುಕೊಳ್ತಿದ್ರು.. ಏನೇ ತಗೊಳ್ಬೇಕು ಅಂದ್ರೂ ಕಾಸು ಕೊಟ್ಟು ಫಟಾಫಟ್ ಪರ್ಚೇಸ್ ಮಾಡ್ತಿದ್ರು. ಬಟ್ ಇನ್ಮುಂದೆ ಅಕೌಂಟ್​ನಲ್ಲಿ ಕಾಸಿದ್ರೂ ಜೇಬಲ್ಲಿ ಕಾಸಿರೋಲ್ಲ ಅನ್ಸುತ್ತೆ. ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಮುಂದಾದ ಆರ್​ಬಿಐ? ನೋಟ್ ಬ್ಯಾನ್ ಮಾಡಿದ್ದ ಮೋದಿ ಸರ್ಕಾರ ಇದೀಗ, ಎಟಿಎಂಗಳ ಮೇಲೆ ಕಣ್ಣಾಕ್ಕಿದೆಯಂತೆ. ಇತ್ತಿಚೆಗಷ್ಟೇ ಬ್ಯಾಂಕ್​ಗಳ ವಿಲೀನ ಮಾಡಿದ್ದ ಕೇಂದ್ರಸರ್ಕಾರ ಇದೀಗ ಎಟಿಎಂಗಳನ್ನೂ ಮುಚ್ಚಲು […]

ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಆರ್​ಬಿಐ ನಿರ್ಧಾರ
ಸಾಧು ಶ್ರೀನಾಥ್​
|

Updated on:Nov 04, 2019 | 2:39 PM

Share

ಬೆಂಗಳೂರು: ಹಣ.. ಝಣ ಝಣ ಕಾಂಚಣ.. ಎಟಿಎಂಗೆ ಕಾರ್ಡ್ ಹಾಕಿ ಪಾಸ್​ವರ್ಡ್ ಕೊಟ್ರೆ ಗರಿ ಗರಿ ನೋಟ್.. ಅದೇ ಖುಷಿಯಲ್ಲಿ ಎಣಿಸ್ಕೊಂಡ್ ಜೇಬಿಗಿಟ್ಟುಕೊಳ್ತಿದ್ರು.. ಏನೇ ತಗೊಳ್ಬೇಕು ಅಂದ್ರೂ ಕಾಸು ಕೊಟ್ಟು ಫಟಾಫಟ್ ಪರ್ಚೇಸ್ ಮಾಡ್ತಿದ್ರು. ಬಟ್ ಇನ್ಮುಂದೆ ಅಕೌಂಟ್​ನಲ್ಲಿ ಕಾಸಿದ್ರೂ ಜೇಬಲ್ಲಿ ಕಾಸಿರೋಲ್ಲ ಅನ್ಸುತ್ತೆ.

ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಮುಂದಾದ ಆರ್​ಬಿಐ? ನೋಟ್ ಬ್ಯಾನ್ ಮಾಡಿದ್ದ ಮೋದಿ ಸರ್ಕಾರ ಇದೀಗ, ಎಟಿಎಂಗಳ ಮೇಲೆ ಕಣ್ಣಾಕ್ಕಿದೆಯಂತೆ. ಇತ್ತಿಚೆಗಷ್ಟೇ ಬ್ಯಾಂಕ್​ಗಳ ವಿಲೀನ ಮಾಡಿದ್ದ ಕೇಂದ್ರಸರ್ಕಾರ ಇದೀಗ ಎಟಿಎಂಗಳನ್ನೂ ಮುಚ್ಚಲು ಹೊರಟಿದೆ. ಹಿಂದೆ ಪ್ರತಿ ಬ್ಯಾಂಕ್​ನಿಂದ ಒಂದೊಂದು ಕಿಲೋ ಮೀಟರ್​ಗೊಂದು ಎಟಿಎಂಗಳಿದ್ವು. ಈಗ ಬ್ಯಾಂಕ್​ಗಳ ವಿಲೀನದಿಂದ ಬಹುತೇಕ ಎಟಿಎಂಗಳನ್ನ ಮುಚ್ಚಲಾಗಿದೆ. ಇದ್ರ ಜೊತೆಗೆ ಮತ್ತಷ್ಟು ಎಟಿಎಂಗಳನ್ನ ಮುಚ್ಚಲು ನಿರ್ಧರಿಸಲಾಗಿದ್ಯಂತೆ.

‘ATM’ಗಳ ಯುಗಾಂತ್ಯ? ಸದ್ಯ ರಾಜ್ಯದಲ್ಲಿ ಒಟ್ಟು 17,253 ಎಟಿಎಂಗಳಿದ್ದು, ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟಾರೆ 7,825 ಎಟಿಎಂಗಳಿವೆ. ಈ ಪೈಕಿ ಬಹುತೇಕ ಎಟಿಎಂಗಳನ್ನ ಮುಚ್ಚಲು ನಿರ್ಧಾರ ಮಾಡಲಾಗಿದೆ. ಮೊದ್ಲೆಲ್ಲಾ ಪ್ರತಿ 1ಕಿಲೋ ಮೀಟರ್​ಗೆ ಎಟಿಎಂಗಳಿದ್ವು. ಆದ್ರೆ ಇನ್ಮುಂದೆ 2 ಕಿಲೋ ಮೀಟರ್​ಗೊಂದು ಎಟಿಎಂಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಆರ್​ಬಿಐ ನೋಟ್ ಪ್ರಿಂಟ್ ನಿಲ್ಲಿಸಿ ಕ್ಯಾಶ್​ಲೆಸ್ ವ್ಯವಹಾರಕ್ಕೆ ಹೆಚ್ಚು ಆದ್ಯತೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ನೋಟ್ ವ್ಯವಹಾರ ನಿಲ್ಲಿಸಿ ಹೆಚ್ಚೆಚ್ಚು ಡಿಜಿಟಲ್ ವ್ಯವಹಾರವನ್ನ ಜನ ಬಳಸಿಕೊಳ್ಳುವಂತೆ ಮಾಡೋ ತಯಾರಿ ನಡೆದಿದೆ ಎನ್ನಲಾಗಿದೆ. ಇತ್ತ ಆರ್​ಬಿಐ ಕೂಡಾ ಎಟಿಎಂಗಳನ್ನ ಮುಚ್ಚಲು ನಿರ್ದೇಶನ ಕೊಟ್ಟಿದೆಯಂತೆ. ನಗರದಲ್ಲಿರುವ ಒಟ್ಟು 7,825 ಎಟಿಎಂಗಳ ಪೈಕಿ ಬಹುತೇಕ ಎಟಿಎಂಗಳನ್ನ ಮುಚ್ಚಲು ಸೂಚನೆ ನೀಡಿದ್ದಾರಂತೆ.

ಎಟಿಎಂಗಳ ಸಂಖ್ಯೆ ಕಡಿಮೆಯಾಗುತ್ತೆ: ಬ್ಯಾಂಕ್​ಗಳು ವಿಲೀನಗೊಂಡ ಹಿನ್ನೆಲೆಯಲ್ಲಿ ಆಯಾ ಬ್ಯಾಂಕ್​ಗಳ ಎಟಿಎಂಗಳು ಮುಚ್ಚಲಿವೆ. ಜೊತೆಗೆ ಪೇಪರ್​ಲೆಸ್ ವ್ಯವಹಾರಕ್ಕೆ ಮಾನ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಟಿಎಂಗಳ ಸಂಖ್ಯೆ ಕಡಿಮೆ ಆಗಲಿದೆ. ಆದ್ರೆ ಜನ ಸಾಮಾನ್ಯರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಆರ್​ಬಿಐ ಸ್ಪಷ್ಟ ಪಡಿಸಿದೆ.

Published On - 3:09 pm, Sun, 3 November 19

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ