ಅನರ್ಹರಿಗೆ ಬಿಗ್ ಟ್ರಬಲ್, ಬಿಎಸ್​ವೈ ಆಡಿಯೋ ಸಾಕ್ಷ್ಯಕ್ಕೆ ಸುಪ್ರೀಂ ಸಮ್ಮತಿ

ದೆಹಲಿ: ಬೈ ಎಲೆಕ್ಷನ್ ಹತ್ತಿರ ಬರ್ತಾಇದ್ದಂತೆ ಅನರ್ಹಗೊಂಡ ಶಾಸಕರೆಲ್ಲಾ ಮತ್ತೆ ಅಖಾಡಕ್ಕಿಳಿಯೋ ನಿರೀಕ್ಷೆಯಲ್ಲಿದ್ರು. ಇನ್ನೇನು ಸುಪ್ರೀಂ ತೀರ್ಪು ನಮ್ಮ ಪರವೇ ಬರುತ್ತೆ ಅಂತಾ ಜೋಶ್​ನಲ್ಲಿದ್ರು. ಆದ್ರೆ, ಯಾವಾಗ ಬಿಎಸ್​ವೈ ಆಡಿಯೋ ಬಾಂಬ್ ಸಿಡಿಯಿತೋ ಅಲ್ಲಿಗೆ ಅನರ್ಹರ ಆಸೆ, ಆಕಾಂಕ್ಷೆಗಳೆಲ್ಲ ಮಣ್ಣುಪಾಲಾಗೋ ಹಂತ ತಲುಪಿದ್ವು. ಬಿಜೆಪಿಯ ಚುನಾವಣಾ ಸಿದ್ಧತಾ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸಿಡಿಸಿರುವ ಆಡಿಯೋ ಬಾಂಬ್ ಅನರ್ಹ ಶಾಸಕರ ಪಾಲಿಗೆ ಕಂಟಕವಾಗಿದೆ. ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ಕಲಾಪ ಆರಂಭ ಆಗ್ತಿದ್ದಂತೆಯೇ ಆಡಿಯೋ ಮೆನ್ಷನ್ ಮಾಡಲು ಕಾಂಗ್ರೆಸ್ […]

ಅನರ್ಹರಿಗೆ ಬಿಗ್ ಟ್ರಬಲ್, ಬಿಎಸ್​ವೈ ಆಡಿಯೋ ಸಾಕ್ಷ್ಯಕ್ಕೆ ಸುಪ್ರೀಂ ಸಮ್ಮತಿ
Follow us
ಸಾಧು ಶ್ರೀನಾಥ್​
|

Updated on:Nov 04, 2019 | 2:58 PM

ದೆಹಲಿ: ಬೈ ಎಲೆಕ್ಷನ್ ಹತ್ತಿರ ಬರ್ತಾಇದ್ದಂತೆ ಅನರ್ಹಗೊಂಡ ಶಾಸಕರೆಲ್ಲಾ ಮತ್ತೆ ಅಖಾಡಕ್ಕಿಳಿಯೋ ನಿರೀಕ್ಷೆಯಲ್ಲಿದ್ರು. ಇನ್ನೇನು ಸುಪ್ರೀಂ ತೀರ್ಪು ನಮ್ಮ ಪರವೇ ಬರುತ್ತೆ ಅಂತಾ ಜೋಶ್​ನಲ್ಲಿದ್ರು. ಆದ್ರೆ, ಯಾವಾಗ ಬಿಎಸ್​ವೈ ಆಡಿಯೋ ಬಾಂಬ್ ಸಿಡಿಯಿತೋ ಅಲ್ಲಿಗೆ ಅನರ್ಹರ ಆಸೆ, ಆಕಾಂಕ್ಷೆಗಳೆಲ್ಲ ಮಣ್ಣುಪಾಲಾಗೋ ಹಂತ ತಲುಪಿದ್ವು. ಬಿಜೆಪಿಯ ಚುನಾವಣಾ ಸಿದ್ಧತಾ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸಿಡಿಸಿರುವ ಆಡಿಯೋ ಬಾಂಬ್ ಅನರ್ಹ ಶಾಸಕರ ಪಾಲಿಗೆ ಕಂಟಕವಾಗಿದೆ.

ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ಕಲಾಪ ಆರಂಭ ಆಗ್ತಿದ್ದಂತೆಯೇ ಆಡಿಯೋ ಮೆನ್ಷನ್ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಬೆಳಗ್ಗೆ ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಯಡಿಯೂರಪ್ಪ ಆಡಿಯೋ ಪ್ರಕರಣ ಪ್ರಸ್ತಾಪ ಮಾಡಿದ್ರು. ಅನರ್ಹರ‌ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಆಡಿಯೋವನ್ನು ಪ್ರಮುಖ‌ ಸಾಕ್ಷ್ಯವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಅನರ್ಹ ಶಾಸಕರು, ಬಿಜೆಪಿಗೆ ಎದುರಾಯ್ತು ಬಿಗ್ ಟ್ರಬಲ್? ಬಿ.ಎಸ್.ಯಡಿಯೂರಪ್ಪ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಲು ಕೋರ್ಟ್ ಒಪ್ಪಿಗೆ ನೀಡಿದೆ. ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ನ್ಯಾ. ರಮಣ ತಿಳಿಸಿದ್ದಾರೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Published On - 1:03 pm, Mon, 4 November 19

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ