ಕೋಲಾರದಲ್ಲಿ ಪವನ್ ಕಲ್ಯಾಣ್, ಮುಗಿಬಿದ್ದ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್
ಕೋಲಾರ: ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿ ನಡೆದ ಶ್ರೀವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಜನಸ್ತೋಮವೇ ಹರಿದುಬಂದಿತ್ತು. ಪವನ್ ಫ್ಯಾನ್ಸ್ ಕೇಕೆಗೆ ರಮೇಶ್ ಕುಮಾರ್ ಗರಂ! ಪವನ್ ಕಲ್ಯಾಣ್ ಹವಾ ಎದುರು ವೇದಿಕೆ ಮೇಲಿದ್ದವರೆಲ್ಲ ಮಂಕಾಗಿಬಿಟ್ರು. ಯಾಕಂದ್ರೆ, ಪವನ್ ಕಲ್ಯಾಣ್ ಬಿಟ್ರೆ ಬೇರೆ ಯಾರನ್ನು ವೇದಿಕೆ ಮೇಲೆ ಮಾತನಾಡೋಕೆ ಅಭಿಮಾನಿಗಳು ಬಿಡ್ಲಿಲ್ಲ. ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಮಾತನಾಡೋಕೆ ಸಾಧ್ಯವಾಗ್ಲಿಲ್ಲ. […]
ಕೋಲಾರ: ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿ ನಡೆದ ಶ್ರೀವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಜನಸ್ತೋಮವೇ ಹರಿದುಬಂದಿತ್ತು.
ಪವನ್ ಫ್ಯಾನ್ಸ್ ಕೇಕೆಗೆ ರಮೇಶ್ ಕುಮಾರ್ ಗರಂ! ಪವನ್ ಕಲ್ಯಾಣ್ ಹವಾ ಎದುರು ವೇದಿಕೆ ಮೇಲಿದ್ದವರೆಲ್ಲ ಮಂಕಾಗಿಬಿಟ್ರು. ಯಾಕಂದ್ರೆ, ಪವನ್ ಕಲ್ಯಾಣ್ ಬಿಟ್ರೆ ಬೇರೆ ಯಾರನ್ನು ವೇದಿಕೆ ಮೇಲೆ ಮಾತನಾಡೋಕೆ ಅಭಿಮಾನಿಗಳು ಬಿಡ್ಲಿಲ್ಲ. ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಮಾತನಾಡೋಕೆ ಸಾಧ್ಯವಾಗ್ಲಿಲ್ಲ. ಪವನ್ ಫ್ಯಾನ್ಸ್ ಮೇಲೆ ಗರಂ ಆದ ಸ್ಪೀಕರ್, ತೆಲುಗಿನಲ್ಲೇ ಕಿಡಿಕಾರಿದ್ರು. ಸದ್ದುಮಾಡ್ತಿದ್ದ ಅಭಿಮಾನಿಗಳನ್ನ ಪವನ್ ಕಲ್ಯಾಣ್ ಅವರೇ ತಣ್ಣಗಾಗಿಸಿದರು.
ಪವನ್ ಫ್ಯಾನ್ಸ್ ನಿಯಂತ್ರಿಸಲು ಹೈರಾಣಾದ ಪೊಲೀಸರು: ಇನ್ನು, ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟವೂ ಏನ್ ಕಡಿಮೆ ಇರಲಿಲ್ಲ. ಬಂದಂತಹ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸನೇ ಮಾಡಬೇಕಾಯ್ತು. ಈ ವೇಳೆ ಲಘು ಲಾಠಿ ಚಾರ್ಜ್ ನಡೆಯಿತು. ತೆಲುಗು ನಟನಿಗೆ ಕೈ ಕುಲುಕೋಕೆ ಅಭಿಮಾನಿಯೊಬ್ಬ ವೇದಿಕೆಯತ್ತ ನುಗ್ಗಿದ. ಖಾಕಿ ಭದ್ರತೆಯನ್ನೂ ತಪ್ಪಿಸಿ ಪವನ್ ಕಲ್ಯಾಣ್ ರತ್ತ ಆಗಮಿಸಿದ. ನಂತರ ಪೊಲೀಸ್ರು ಆತನನ್ನ ಎಳೆದೊಯ್ಯುವಾಗ, ಪವನ್ ಕಲ್ಯಾಣ್ ಅಭಿಮಾನಿಗೆ ಶೇಕ್ಹ್ಯಾಂಡ್ ಕೊಟ್ರು. ಹಾಗೇ, ಕನ್ನಡ ರಾಜ್ಯೋತ್ಸವ ಶುಭಾಶಯ ತಿಳಿಸಿದ ಪವನ್ ಕಲ್ಯಾಣ್, ಕನ್ನಡ ಕಲಿಯದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ರು.
Published On - 8:51 pm, Sun, 3 November 19