AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಗಿದೆ ‘ಮಾರ್ಕ್’ ಸಿನಿಮಾ ಅಡ್ವನ್ಸ್ ಬುಕಿಂಗ್: ಹೈಪ್ ಹೇಗಿದೆ?

Mark Kannada movie: ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಅದೇ ದಿನ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಆದರೆ ಸುದೀಪ್ ಹಾಗೂ ತಂಡ ಜಾಣತನ ಪ್ರದರ್ಶಿಸಿ ಮುಂಗಡವಾಗಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭ ಮಾಡಿದ್ದು, ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಯಲ್ಲಿ ಹಲವು ಶೋಗಳು ಹೌಸ್​​ಫುಲ್ ಆಗಿವೆ.

ಶುರುವಾಗಿದೆ ‘ಮಾರ್ಕ್’ ಸಿನಿಮಾ ಅಡ್ವನ್ಸ್ ಬುಕಿಂಗ್: ಹೈಪ್ ಹೇಗಿದೆ?
ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಸಹ ಇದೇ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಡಿಸೆಂಬರ್ 7ಕ್ಕೆ ಬಿಡುಗಡೆ ಆಗಲಿದೆ.
ಮಂಜುನಾಥ ಸಿ.
|

Updated on:Dec 20, 2025 | 4:25 PM

Share

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ನಿರತರಾಗಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಜೊತೆಗೆ ಸಿನಿಮಾಕ್ಕೆ ಸಹ ನಿರ್ಮಾಪಕರೂ ಆಗಿದ್ದಾರೆ ಕಿಚ್ಚ ಸುದೀಪ್. ಸೂಪರ್ ಹಿಟ್ ‘ಮ್ಯಾಕ್ಸ್’ ಸಿನಿಮಾದ ತಂತ್ರಜ್ಞರ ತಂಡವೇ ‘ಮಾರ್ಕ್’ ಸಿನಿಮಾಕ್ಕೂ ಜೊತೆಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನಗಳು ಇರುವಂತೆಯೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಮಾತ್ರವಲ್ಲದೆ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾರ್ನಿಂಗ್ ಶೋಗಳು ಹೌಸ್​​ಫುಲ್ ಸಹ ಆಗುತ್ತಿವೆ.

‘ಮಾರ್ಕ್’ ಸಿನಿಮಾದ ಫ್ಯಾನ್ಸ್ ಶೋ ಟಿಕೆಟ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಬೆಂಗಳೂರು, ಮೈಸೂರು ಇನ್ನೂ ಕೆಲವು ಕಡೆಗಳಲ್ಲಿ ‘ಮಾರ್ಕ್’ ಸಿನಿಮಾದ ವಿಶೇಷ ಶೋ ಅನ್ನು ಬೆಳಿಗ್ಗೆ 6 ಗಂಟೆ ವೇಳೆಗೆ ಪ್ರದರ್ಶನ ಮಾಡಲಾಗುತ್ತಿದ್ದು, ಪ್ರಸ್ತುತ ಈ ವಿಶೇಷ ಶೋನ ಟಿಕೆಟ್​​ಗಳು ಮಾತ್ರವೇ ಮುಂಗಡ ಬುಕಿಂಗ್​​ಗೆ ಲಭ್ಯವಿದೆ. ವೀರೇಶ್, ಸಿದ್ಧೇಶ್ವರ, ನವರಂಗ್, ಸಂತೋಷ್, ಶ್ರೀನಿವಾಸ್, ಸೌಂದರ್ಯ (ದೊಡ್ಡಬಳ್ಳಾಪುರ) ಇನ್ನೂ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಈಗಾಗಲೇ ‘ಮಾರ್ಕ್’ ಸಿನಿಮಾದ ಮಾರ್ನಿಂಗ್ ಶೋ ಟಿಕೆಟ್ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ.

ಇದನ್ನೂ ಓದಿ:ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ

ಬೆಂಗಳೂರಿನಲ್ಲಿ ಮಾತ್ರವೇ ಅಲ್ಲ, ಮೈಸೂರು, ಚಿತ್ರದುರ್ಗ, ತುಮಕೂರು, ಕೋಲಾರ, ಶಿವಮೊಗ್ಗ ಇನ್ನೂ ಕೆಲವು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳ ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ಅನ್ನು ಪ್ರದರ್ಶನ ಮಾಡಲಾಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಟಿಕೆಟ್​​ಗಳು ಸೋಲ್ಡ್ ಔಟ್ ಆಗಿವೆ. ಅದರಲ್ಲೂ ಈ ವಿಶೇಷ ಶೋಗೆ ಟಿಕೆಟ್ ದರವನ್ನೂ ಸಹ ಹೆಚ್ಚು ಮಾಡಲಾಗಿದೆ. ವಿಶೇಷ ಶೋಗೆ 400 ರೂಪಾಯಿ, ಕೆಲವು ಚಿತ್ರಮಂದಿರಗಳಲ್ಲಿ 500 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

‘ಮಾರ್ಕ್’ ಸಿನಿಮಾ ಡಿಸೆಂಬರ್ 25 ಕ್ಕೆ ಬಿಡುಗಡೆ ಆಗುತ್ತಿದ್ದು, ಅದೇ ದಿನ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಆದರೆ ಸುದೀಪ್ ಹಾಗೂ ತಂಡ ಜಾಣತನದಿಂದ ಅಡ್ವಾನ್ಸ್ ಬುಕಿಂಗ್ ಮೊದಲೇ ಓಪನ್ ಮಾಡಿದ್ದಾರೆ ಮಾತ್ರವಲ್ಲದೆ ಬೆಳಿಗ್ಗೆ 6 ಗಂಟೆಯ ವಿಶೇಷ ಶೋ ಪ್ರದರ್ಶನವನ್ನು ಸಹ ಮಾಡುವುದರ ಮೂಲಕ ಹೆಚ್ಚಿನ ಗಳಿಕೆಯ ಭರವಸೆ ಮೂಡಿಸಿದ್ದಾರೆ. ‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Sat, 20 December 25