BMRCL ಮತ್ತೆ ಯಡವಟ್ಟು, ದಾರಿ ಮಧ್ಯೆ ನಮ್ಮ ಮೆಟ್ರೋ ಪ್ರಯಾಣಿಕರು ಲಾಕ್!
ಬೆಂಗಳೂರು: ರಾಜಧಾನಿಯಲ್ಲಿ ಮೆಟ್ರೋ ಸಂಚಾರವನ್ನು ನಂಬಿಕೊಂಡಿರುವ ಪ್ರಯಾಣಿಕರು ಇಂದು ಕೆಲಕಾಲ ಆತಂಕದ ಕ್ಷಣಗಳನ್ನು ಎದುರಿಸುವಂತಾಯಿತು. ನಮ್ಮ ಮೆಟ್ರೋದಲ್ಲಿ ತಾಂತ್ರಿಕ ಲೋಪದೋಷ ಎದುರಾಗಿ ದಾರಿ ಮಧ್ಯೆದಲ್ಲಿಯೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ. ಇದರಿಂದ ದಿನನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಹೆಚ್ಚುವಂತಾಗಿದೆ! ಹಿಂದಕ್ಕೆ ಚಲಿಸಿ ಸೇಫ್ ಆದ ನಮ್ಮ ಮೆಟ್ರೋ ಟ್ರೈನ್! ಮೆಜೆಸ್ಟಿಕ್ ನಿಲ್ದಾಣದಿಂದ ಬರುವಾಗ ಶ್ರೀರಾಂಪುರ-ಮಹಾಕವಿ ಮೆಟ್ರೋ ನಿಲ್ದಾಣ ಮಧ್ಯೆ ದಾರಿಯಲ್ಲಿಯೇ ನಮ್ಮ ಮೆಟ್ರೋ ರೈಲು ಸುಮಾರು 15ಕ್ಕೂ ಹೆಚ್ಚು ನಿಮಿಷ ನಿಂತಿದೆ. 15 ನಿಮಿಷದ […]
ಬೆಂಗಳೂರು: ರಾಜಧಾನಿಯಲ್ಲಿ ಮೆಟ್ರೋ ಸಂಚಾರವನ್ನು ನಂಬಿಕೊಂಡಿರುವ ಪ್ರಯಾಣಿಕರು ಇಂದು ಕೆಲಕಾಲ ಆತಂಕದ ಕ್ಷಣಗಳನ್ನು ಎದುರಿಸುವಂತಾಯಿತು. ನಮ್ಮ ಮೆಟ್ರೋದಲ್ಲಿ ತಾಂತ್ರಿಕ ಲೋಪದೋಷ ಎದುರಾಗಿ ದಾರಿ ಮಧ್ಯೆದಲ್ಲಿಯೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ. ಇದರಿಂದ ದಿನನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಹೆಚ್ಚುವಂತಾಗಿದೆ!
ಹಿಂದಕ್ಕೆ ಚಲಿಸಿ ಸೇಫ್ ಆದ ನಮ್ಮ ಮೆಟ್ರೋ ಟ್ರೈನ್! ಮೆಜೆಸ್ಟಿಕ್ ನಿಲ್ದಾಣದಿಂದ ಬರುವಾಗ ಶ್ರೀರಾಂಪುರ-ಮಹಾಕವಿ ಮೆಟ್ರೋ ನಿಲ್ದಾಣ ಮಧ್ಯೆ ದಾರಿಯಲ್ಲಿಯೇ ನಮ್ಮ ಮೆಟ್ರೋ ರೈಲು ಸುಮಾರು 15ಕ್ಕೂ ಹೆಚ್ಚು ನಿಮಿಷ ನಿಂತಿದೆ. 15 ನಿಮಿಷದ ಬಳಿಕ, ಹಿಂದಕ್ಕೆ ಚಲಿಸಿ ಶ್ರೀರಾಂಪುರ ಮೆಟ್ರೋ ನಿಲ್ದಾಣಕ್ಕೆ ತಲುಪಿದೆ. ಈ ಮಧ್ಯೆ, ಪ್ರಯಾಣಿಕರು ಆತಂಕ, ಗಾಬರಿಯಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಮೆಟ್ರೋ ರೈಲು ಶ್ರೀರಾಂಪುರ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಮೆಟ್ರೋ ಕಾರ್ಯಚರಣೆ ಹಾಗೂ ನಿರ್ವಹಣೆ ವಿಫಲ ಹಿನ್ನೆಲೆ, ಈ ಹಿಂದೆಯೂ ಕೂಡ ಇಂತಹದ್ದೇ ಯಡವಟ್ಟುಗಳು ನಡೆದಿದ್ದವು. BMRCL ವತಿಯಿಂದ ಪದೇ ಪದೇ ಇಂತಹ ಎಡವಟ್ಟುಗಳು ನಡೆಯುತ್ತಿವೆ ಎಂಬುದು ಆತಂಕದ ವಿಚಾರ.
Published On - 4:36 pm, Mon, 4 November 19