ಲಂಚಕ್ಕೆ ಕೈಯೊಡ್ಡಿದ್ದ ಸಾರಿಗೆ ಅಧಿಕಾರಿಗಳು ಎಸಿಬಿ ಬಲೆಗೆ

ಕಲಬುರಗಿ: ಡಿಪೋ ಮ್ಯಾನೇಜರ್ ಬಳಿ ಲಂಚ ಸ್ವೀಕರಿಸುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NEKRTC)ಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಆಳಂದ ಡಿಪೋ ಮ್ಯಾನೇಜರ್ ಈಶ್ವರ್ ಮೇಲಿನ ಕೇಸ್​ಗಳನ್ನ ಕ್ಯಾನ್ಸಲ್ ಮಾಡೋಕೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಇಂದು ನಗರದ ಕೇಂದ್ರ ಬಸ್​ ನಿಲ್ದಾಣದ ಕಚೇರಿಯಲ್ಲಿ ಈಶ್ವರ್ ಬಳಿ 50 ಸಾವಿರ ಹಣ ಪಡೆಯಲು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಎಸಿಬಿ ಎಸ್​ಪಿ ವಿ.ಎಂ.ಜ್ಯೋತಿ ನೇತೃತ್ವದಲ್ಲಿ ಅಧಿಕಾರಿಗಳು […]

ಲಂಚಕ್ಕೆ ಕೈಯೊಡ್ಡಿದ್ದ ಸಾರಿಗೆ ಅಧಿಕಾರಿಗಳು ಎಸಿಬಿ ಬಲೆಗೆ
sadhu srinath

|

Nov 05, 2019 | 6:53 PM

ಕಲಬುರಗಿ: ಡಿಪೋ ಮ್ಯಾನೇಜರ್ ಬಳಿ ಲಂಚ ಸ್ವೀಕರಿಸುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NEKRTC)ಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಆಳಂದ ಡಿಪೋ ಮ್ಯಾನೇಜರ್ ಈಶ್ವರ್ ಮೇಲಿನ ಕೇಸ್​ಗಳನ್ನ ಕ್ಯಾನ್ಸಲ್ ಮಾಡೋಕೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಇಂದು ನಗರದ ಕೇಂದ್ರ ಬಸ್​ ನಿಲ್ದಾಣದ ಕಚೇರಿಯಲ್ಲಿ ಈಶ್ವರ್ ಬಳಿ 50 ಸಾವಿರ ಹಣ ಪಡೆಯಲು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಎಸಿಬಿ ಎಸ್​ಪಿ ವಿ.ಎಂ.ಜ್ಯೋತಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಗ NEKRTC ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಡಿ.ಬಾವಿಕಟ್ಟಿ ಮತ್ತು ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಎಂಬುವರು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಪೆಟ್ಟಿ ಕೇಸ್​ ಕ್ಲಿಯರ್​ಗೆ 1 ಲಕ್ಷ ಡಿಮ್ಯಾಂಡ್:  ಈಶ್ವರ್ ಮೇಲೆ ಸುಮಾರು 22 ಪೆಟ್ಟಿ ಕೇಸ್​ಗಳಿದ್ದವು. ಈ ಕೇಸ್​ಗಳು ಕ್ಲಿಯರ್ ಆದ್ರೆ ಡಿಪೋ ಮ್ಯಾನೇಜರ್ ಈಶ್ವರ್​ಗೆ ಪ್ರಮೋಷನ್ ಸಿಗುತ್ತಿತ್ತು. ಹೀಗಾಗಿ ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಮುಖಾಂತರ ಎಸ್​.ಡಿ.ಬಾವಿಕಟ್ಟಿ ಒಂದು ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada