ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್ ಟ್ರೈನರ್ನ ಮತ್ತಷ್ಟು ಕೃತ್ಯಗಳು ಬಯಲು
ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ದುರುಳನೊಬ್ಬ ಕ್ರೌರ್ಯ ಮರೆದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ನಡೆದಿದೆ. ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಬಾಲಕನನ್ನ ರಂಜನ್ ಎಂಬಾತ ಫುಟ್‌ಬಾಲ್‌ನಂತೆ ಒದ್ದು ವಿಕೃತಿ ಮೆರೆದಿದ್ದಾನೆ. ರಂಜನ್ ಹಲ್ಲೆಯಿಂದ ಬಾಲಕನ ಮೈ-ಕೈಗೆ ಗಾಯವಾಗಿದ್ದು, ಬಾಲಕನ ತಾಯಿ ದೂರು ಆಧರಿಸಿ ಬನಶಂಕರಿ ಪೊಲೀಸರು ಆರೋಪಿ ರಂಜನ್ನನ್ನ ಬಂಧಿಸಿದ್ದಾರೆ.
ಬೆಂಗಳೂರು, (ಡಿಸೆಂಬರ್ 19): ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ದುರುಳನೊಬ್ಬ ಕ್ರೌರ್ಯ ಮರೆದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ನಡೆದಿದೆ. ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಬಾಲಕನನ್ನ ರಂಜನ್ ಎಂಬಾತ ಫುಟ್‌ಬಾಲ್‌ನಂತೆ ಒದ್ದು ವಿಕೃತಿ ಮೆರೆದಿದ್ದಾನೆ. ರಂಜನ್ ಹಲ್ಲೆಯಿಂದ ಬಾಲಕನ ಮೈ-ಕೈಗೆ ಗಾಯವಾಗಿದ್ದು, ಬಾಲಕನ ತಾಯಿ ದೂರು ಆಧರಿಸಿ ಬನಶಂಕರಿ ಪೊಲೀಸರು ಆರೋಪಿ ರಂಜನ್ನನ್ನ ಬಂಧಿಸಿದ್ದಾರೆ.
ಹಲ್ಲೆ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರಸ್ತೆಯಲ್ಲಿನ ಸಿಸಿಟಿವಿ ಚೆಕ್ ಮಾಡಿದ್ದಾರೆ. ಈ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯ ಇದೇ ಮೊದಲಲ್ಲ, ಈ ಹಿಂದೆಯೂ ಹಲವರಿಗೆ ಈ ಸೈಕೋ ರಂಜಿತ್ ಕಿರುಕುಳ ಕೊಟ್ಟಿದ್ದಾನೆ ಎಂಬುವುದು ತಿಳಿದುಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

