ಶಿಕ್ಷಕರೇ ಮೇಸ್ತ್ರಿ, ವಿದ್ಯಾರ್ಥಿಗಳೇ ಕಾರ್ಮಿಕರು: ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು
ಮಕ್ಕಳು ಓದಲು ಶಾಲೆಗೆ ಬರುತ್ತಾರೆ. ಇನ್ನು ಪೋಷಕರು ಸಹ ತಮ್ಮ ಮಕ್ಕಳು ನಾಲ್ಕು ಅಕ್ಷರ ಕಲಿತು ವಿದ್ಯವಂತರಾಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಆದ್ರೆ, ಶಿಕ್ಷಕರೇ ಮಕ್ಕಳನ್ನ ಕಟ್ಟಡ ಕಾರ್ಮಿಕರಂತೆ ದುಡಿಸಿಕೊಂಡಿರುವ ಪ್ರಕರಣವೊಂದು ಹಾಸನದಲ್ಲಿ ಬೆಳಕಿಗೆ ಬಂದಿದೆ. ಹೌದು...ಶಿಕ್ಷಕರು ಮೇಸ್ತ್ರಿಯಂತೆ ಮುಂದೆ ನಿಂತುಕೊಂಡು ಮಕ್ಕಳಿಂದ ಶಾಲೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸ್ವರ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ರೆಡಿಯಾಗಿ ಶಾಲೆಗೆ ಬಂದ ಮಕ್ಕಳಿಂದ ಗಾರೆ ಕೆಲಸ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಸಿಮೆಂಟ್ ಮತ್ತು ಇಟ್ಟಿಗೆ ಹೊತ್ತೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.
ಹಾಸನ, (ಡಿಸೆಂಬರ್ 19): ಮಕ್ಕಳು ಓದಲು ಶಾಲೆಗೆ ಹೋಗುತ್ತಾರೆ. ಇನ್ನು ಪೋಷಕರು ಸಹ ಲಕ್ಷಾಂತರ ರೂಪಾಯಿ ಫೀ ಕಟ್ಟಿ ತಮ್ಮ ಮಕ್ಕಳು ನಾಲ್ಕು ಅಕ್ಷರ ಕಲಿತು ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಆದ್ರೆ, ಶಿಕ್ಷಕರೇ ಮಕ್ಕಳನ್ನ ಕಟ್ಟಡ ಕಾರ್ಮಿಕರಂತೆ ದುಡಿಸಿಕೊಂಡಿರುವ ಪ್ರಕರಣವೊಂದು ಹಾಸನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು…ಶಿಕ್ಷಕರು ಮೇಸ್ತ್ರಿಯಂತೆ ಮುಂದೆ ನಿಂತುಕೊಂಡು ಮಕ್ಕಳಿಂದ ಶಾಲೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸ್ವರ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ರೆಡಿಯಾಗಿ ಶಾಲೆಗೆ ಬಂದ ಮಕ್ಕಳಿಂದ ಗಾರೆ ಕೆಲಸ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಸಿಮೆಂಟ್ ಮತ್ತು ಇಟ್ಟಿಗೆ ಹೊತ್ತೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.
ಇನ್ನು ಪುಟ್ಟ ಮಕ್ಕಳಿಂದ ಸಿಮೆಂಟ್ ಇಟ್ಟಿಗೆ ಸಾಗಿಸುವ ವಿಡಿಯೋ ನೋಡಿ ಸ್ಥಳೀಯರು ಆಕ್ರೋಶಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಿವುದು ವಿದ್ಯವಂತರಾಗಲೆಂದು. ನಾವೇ ಮಕ್ಕಳನ್ನು ಈ ರೀತಿಯ ಕೆಲಸ ಮಾಡಿಸಲ್ಲ.ಆದ್ರೆ, ಪ್ರಜ್ಞಾವಂತರಾಗಿರುವ ಶಿಕ್ಷಕರೇ ಮಕ್ಕಳಿಂದ ಸೀಮೆಂಟ್, ಇಟ್ಟಿಗೆ ಸಾಗಿಸುವ ಕೆಲಸ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ಫೀ ಕಟ್ಟಿಸಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯ ಕಲಿಸುವ ಬದಲು ಗಾರೆ ಕೆಲಸ ಮಾಡಿಸುತ್ತಿರುವುದು ಎಷ್ಟು ಸರಿ?.
ಬಾಲಕನನ್ನು ಫುಟ್ಬಾಲ್ನಂತೆ ಒದ್ದ ಜಿಮ್ ಟ್ರೈನರ್ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ

