AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ, ಪ್ರೀತಿಗೆ ಯಾವುದೇ ಗಡಿಗಳಿಲ್ಲ ಅಂತಾರೆ. ಹಾಗೆ ಪ್ರೀತಿಗೆ ಕಣ್ಣಿಲ್ಲ ಅದು ಹೃದಯವನ್ನೇ ಆರಿಸಿಕೊಳ್ಳುತ್ತದೆ ಅಂತಾರೆ. ಅದರಂತೆ 40 ವರ್ಷದ ವ್ಯಕ್ತಿ ಹಾಗೂ 19 ವಯಸ್ಸಿನ ಯುವತಿ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಜೋಡಿ ಪ್ರೇಮಲೋಕದಲ್ಲಿ ತೇಲಾಡಲು ಶುರುಮಾಡಿದ್ದು, ಇದು ಯುವತಿಯ ಮನೆಯವರ ಕಣ್ಣಿಗೆ ಬಿದ್ದಿದೆ. ಮುಂದೆ ನಡೆದಿದ್ದು ಘನಘೋರ. ಅಷ್ಟಕ್ಕೂ ಈ ಲವ್ ಕಹಾನಿಯಲ್ಲೇನಾಯ್ತು|

40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!
Chaluva
ಪ್ರಶಾಂತ್​ ಬಿ.
| Edited By: |

Updated on:Dec 19, 2025 | 7:06 PM

Share

ರಾಮನಗರ, (ಡಿಸೆಂಬರ್ 19): ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ (Love) ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆಯನ್ನ ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನ ಪ್ರೀತಿಸಿದವನನ್ನ ಕಿಡ್ಯಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೌದು.. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ‌ಬಳಿ ನಡೆದಿದೆ. ಮೂಲತಃ ಮಾಗಡಿ (Magadi) ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚಲುವ (40) ಹತ್ಯೆಯಾದ ವ್ಯಕ್ತಿ.

ಓಡಿ ಹೋಗಿದ್ದ ಜೋಡಿ

ಅಂದಹಾಗೆ ಕೊತ್ತಗೆರೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ಸಂಬಂಧಿಯೇ ಆದ ಕೆಂಪಣ್ಣ ಎಂಬುವವರ 19 ವರ್ಷದ ಮಗಳನ್ನ ಪ್ರೀತಿಸುತ್ತಿದ್ದ. ಕಳೆದ ಹದಿನೈದು ದಿನಗಳ ಕೆಳಗೆ ಯುವತಿಯನ್ನ ಕರೆದುಕೊಂಡು ಮಂಡ್ಯದ ಕೆಎಂ ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ. ಆನಂತರ ರಾಜೀಪಂಚಾಯತಿ ನಡೆದು ಯುವತಿಯನ್ನ ವಾಪಾಸ್ ಕೆಂಪಣ್ಣ ಮನೆಗೆ ಕರೆತಂದಿದ್ದ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ

ಮಗಳ ಪ್ರಿಯಕರನ ಕತ್ತು ಕೊಯ್ದು ಹತ್ಯೆ

ಇದಾಗಿ ಮೂರು ದಿನಗಳ ಕೆಳಗೆ ಆಕೆಯನ್ನ ಮನೆಯಲ್ಲಿ ಕೂಡಿ ಹಾಕಿದ್ದಾರೆ‌ ಎಂದು ಚಲುವ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದರಿಂದ ಕುಪಿತಗೊಂಡ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ, ಮಂಜು ಎಂಬುವರೊಂದಿಗೆ ಸೇರಿ ನಿನ್ನೆ(ಡಿಸೆಂಬರ್ 18) ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಕಿಡ್ಯಾಪ್ ಮಾಡಿದ್ದು, ಆನಂತರ ಸಾಕಷ್ಟು ‌ಕಡೆ ಸುತ್ತಾಡಿಸಿ ಕೊನೆಗೆ ಕಾರಿನಲ್ಲಿಯೇ ಚಲುವನ ಕತ್ತು ಕೊಯ್ದು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಪರಾರಿಯಾಗಿದ್ದಾರೆ.

ಅಂದಹಾಗೆ ಬೆಳಗ್ಗೆ ಹಳ್ಳದ ಬಳಿ ಮೃತದೇಹವನ್ನು ಕಂಡು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಅಲ್ಲದೇ ಆತನನ್ನ ಕಾರಿನಲ್ಲಿ ಕಿಡ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಆದ್ರೆ, ಇನ್ನು ಚಲುವನನ್ನ ಕುಣಿಗಲ್ ಕಿಡ್ಯಾಪ್ ಮಾಡಿರುವುದರಿಂದ ಮಾಗಡಿ ಪೊಲೀಸರು ಈ ಪ್ರಕರಣವನ್ನ ಕುಣಿಗಲ್ ಠಾಣೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚಲುವನನ್ನ ಹತ್ಯೆ ಮಾಡಿದ ಮೂವರನ್ನು ವಶಕ್ಕೆ ಪಡೆದು ತೀವ್ರ ‌ವಿಚಾರಣೆ‌ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 19 December 25

Follow Us
Prashantha B
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?