AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ

ಆಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿ. ಆಕೆಯನ್ನ ಆದೊಬ್ಬ ಕಾಮುಕ ಪ್ರೀತಿಯ ಹೆಸರಲ್ಲಿ ‌ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಆನಂತರ ಬಣ್ಣ ಬಣ್ಣದ‌ ಮಾತುಗಳೊಂದಿಗೆ ಆಕೆಯನ್ನು ಮಂಚಕ್ಕೆ ಕರೆಸಿಕೊಂಡು ತನ್ನ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಅಲ್ಲದೇ ಅದನ್ನ ವಿಡಿಯೋ ಮಾಡಿಕೊಂಡಿದ್ದು, ಬಳಿಕ ಪ್ರೇಯಿಸಿಗೆ ಬ್ಲ್ಯಾಕ್​ ಮೇಲ್​ ಮಾಡಿ ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ
Magadi Friends
ಪ್ರಶಾಂತ್​ ಬಿ.
| Edited By: |

Updated on: Dec 18, 2025 | 5:23 PM

Share

ರಾಮನಗರ, (ಡಿಸೆಂಬರ್ 18): ಬೆಂಗಳೂರಿನ (Bengaluru ) ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ (College Student)  ‌ಮೇಲೆ ಸಾಮೂಹಿಕ ‌ಆತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದ್ದೇ, ತಮ್ಮ ಖಾಸಗಿ ಕ್ಷಣದ ವಿಡಿಯೋ ಮುಂದಿಟ್ಟುಕೊಂಡು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರದಲ್ಲಿ (Ramanagar) ಈ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸದ್ಯ ಪ್ರಿಯಕರ ಸೇರಿ ಆತನ ಇಬ್ಬರು ಸ್ನೇಹಿತರನ್ನು ಮಾಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಕಾಸ್, ಪ್ರಶಾಂತ್ ಮತ್ತು ಚೇತನ್ ಬಂಧಿತ ಆರೋಪಿಗಳು.

ಪ್ರೀತಿ ಬಲೆಗೆ ಬೀಳಿಸಿಕೊಂಡು ಕಾಮದಾಟ

ಏಳು ತಿಂಗಳ ಹಿಂದೆ ವಿಕಾಸ್, ಮಾಗಡಿಯ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಆನಂತರ ಮೂರು ತಿಂಗಳ ಹಿಂದೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಲೈಂಗಿಕವಾಗಿ ಬಳಿಸಿಕೊಂಡಿದ್ದ. ಸಾಲದಕ್ಕೆ ಕಾಮುಕ ಅದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆನಂತರ ಆ ವಿಡಿಯೋ ಯುವತಿಗೆ ಕಳುಹಿಸಿ ಬೆದರಿಕೆ ಹಾಕಿ ತಾನು ಕರೆದಾಗೆಲ್ಲ ಬರಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​​ಮೇಲ್

ಅದರಂತೆ ಕೆಲ ದಿನಗಳ ಹಿಂದೆ ಪ್ರಿಯಕರ ವಿಕಾಸ್, ಯುವತಿಯನ್ನ ಗೆಳೆಯ ಚೇತನ್ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವಿಕಾಸ್ ಹಾಗೂ ಇಬ್ಬರು ಸಹಪಾಠಿಗಳಾದ ಪ್ರಶಾಂತ್ ‌ಹಾಗೂ ಚೇತನ್ ಸೇರಿಕೊಂಡು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದರಿಂದ ನೊಂದ ಯುವತಿ, ಮಾಗಡಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ‌ಮೂವರನ್ನ ಬಂಧಿಸಿದ್ದಾರೆ.

ವಿಕಾಸ್ ಹಾಗೂ ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಚೇತನ್ ಮಾಗಡಿ ಪಟ್ಟಣದಲ್ಲಿ ‌ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಇನ್ನು ಚೇತನ್ ಪತ್ನಿ ಹೆರಿಗೆಗೆ ಹೋಗಿದ್ದ ವೇಳೆ ಮನೆಯಲ್ಲಿಯೇ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ. ಇನ್ನು ವಿಕಾಸ್, ಪ್ರೇಯಿಸಿಯೊಂದಿಗೆ ಮಾತ್ರವಲ್ಲ ಬೇರೆ ಬೇರೆ ಯುವತಿಯರ ಜೊತೆ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾನೆ. ಆ ವಿಡಿಯೋ ಹಾಗೂ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ಒಟ್ಟಾರೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ಬಲೆಗೆ ಬೀಳಿಸಿಕೊಂಡು ನಂತರ ಸ್ನೇಹಿತರ ಜೊತೆಗೂಡಿ ಆತ್ಯಾಚಾರ ಎಸಗಿ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ